ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ವಿಮಾನ ಪತನವಾಗಿ ಹದಿನಾಲ್ಕು ಮಂದಿ ಸಾವನ್ನಪ್ಪಿರುವ ಶಂಕೆ

|
Google Oneindia Kannada News

ಅಮೆರಿಕದ ಲಾಸ್ ವೆಗಾಸ್ ನಿಂದ ಉತ್ತರ ಮೆಕ್ಸಿಕೋದ ಮಾಂಟೆರೆಗೆ ತೆರಳುತ್ತಿದ್ದ ಖಾಸಗಿ ವಿಮಾನದ ಅವಶೇಷಗಳು ಸೋಮವಾರ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ವಿಮಾನ ನಾಪತ್ತೆ ಆಗುವ ವೇಳೆ ಅದರಲ್ಲಿ ಹದಿನಾಲ್ಕು ಮಂದಿ ಇದ್ದರು ಎನ್ನಲಾಗಿತ್ತು. ಏರ್ ಟ್ರಾಫಿಕ್ ಕಂಟ್ರೋಲರ್ ಹೇಳಿರುವ ಪ್ರಕಾರ. ಬೊಂಬಾರ್ಡಿಯರ್ ಚಾಲೆಂಜರ್ 601 ವಿಮಾನ ಭಾನುವಾರ ಸಂಜೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ವಿಮಾನ ಪತನ189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ವಿಮಾನ ಪತನ

ನಾಪತ್ತೆಯಾದ ವಿಮಾನದ ಜತೆ ಹೋಲಿಕೆಯಾಗುವ ಅವಶೇಷಗಳನ್ನು ಅಧಿಕಾರಿಗಳು ಸೋಮವಾರ ಪತ್ತೆ ಹಚ್ಚಿದ್ದಾರೆ. ನಾಪತ್ತೆಯಾದ ವಿಮಾನ ಇದೇ ಎಂಬುದನ್ನು ಇದು ಎಲ್ಲ ರೀತಿಯಲ್ಲೂ ಸೂಚಿಸುತ್ತದೆ. ಆ ವಿಮಾನದಲ್ಲಿ ಹನ್ನೊಂದು ಮಂದಿ ಪ್ರಯಾಣಿಕರು, ಮೂವರು ಸಿಬ್ಬಂದಿ ಇದ್ದರು. ವಿಮಾನದ ನೋಂದಣಿ ಸಂಖ್ಯೆ ಖಾತ್ರಿ ಪಡಿಸಲು ನಾವು ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dead

ಮೆಕ್ಸಿಕೋದ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ಸಿಬ್ಬಂದಿ ಮೂವರಿದ್ದರು. ಅದೊಂದು ಖಾಸಗಿ ವಿಮಾನ ಆಗಿತ್ತು. ಶನಿವಾರ ರಾತ್ರಿ ಲಾಸ್ ವೆಗಾಸ್ ನಲ್ಲಿ ನಡೆದ ಕುಸ್ತಿ ಪಂದ್ಯಾವಳಿ ಮುಗಿಸಿ ಹಿಂತಿರುಗುತ್ತಿದ್ದವರು ಅದರಲ್ಲಿದ್ದ ಪ್ರಯಾಣಿಕರಾಗಿದ್ದರು. ಮೆಕ್ಸಿಕನ್ ಕುಸ್ತಿಪಟು ಸೌಲ್ ಕನೆಲೊ ಅಲ್ವರೆಜ್ ಅಮೆರಿಕದ ಡೇನಿಯಲ್ ಜಾಕೋಬ್ಸ್ ನನ್ನು ಸೋಲಿಸಿದ್ದರು.

English summary
A private jet that was flying from America's Las Vegas to Monterrey, in northern Mexico, wreckage was found Monday, an official said, after the plane disappeared with 14 people believed to be on board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X