• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಯಾನಾ ಮಗನಿಗೆ ನೀಡಿದ್ದಳು ರಹಸ್ಯ ಸಂದೇಶ

By Mahesh
|

ಲಂಡನ್, ಸೆ.29: ರಾಜಕುಮಾರಿ' ಡಯಾನಾ ಸಾವಿನ ನಿಗೂಢತೆ ಇನ್ನೂ ಮುಂದುವರೆದಿರುವಂತೆ ಆಕೆ ತನ್ನ ಪುತ್ರನಿಗೆ ರಹಸ್ಯ ಸಂದೇಶ ಕಳಿಸಲು ಡಯಾನಾ ಮುಂದಾಗಿದ್ದರು ಎಂಬ ಸತ್ಯ ಬಹಿರಂಗಗೊಂಡಿದೆ.

ಪ್ರಿನ್ಸ್ ವಿಲಯಂ ಹಾಗೂ ಆತನ ಭವಿಷ್ಯದ ಕುಟುಂಬಕ್ಕಾಗಿ ಕೆಲವು ಹಿತ ವಾಕ್ಯಗಳು ಸೇರಿದಂತೆ ಮಾರ್ಗದರ್ಶನಗಳನ್ನು ಡಯಾನಾ ನೀಡಿದ್ದರು ಎನ್ನಲಾಗಿದೆ. ಇದರಿಂದ ಜೀವ ಭಯ ಎದುರಿಸುತ್ತಿದ್ದ ಡಯಾನಾ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿತ್ತೇ ಎಂಬ ಪ್ರಶ್ನೆ ಎದ್ದಿದೆ. ತಾನು ಅಕಾಲಿಕ ಮರಣ ಹೊಂದಿದರೆ ಈ ಸಂದೇಶಗಳ ಟೇಪ್ ನನ್ನ ಮಗ ವಿಲಿಯಂ ಕೈ ಸೇರಲಿ ಎಂದು ಡಯಾನಾ ಹೇಳಿದ್ದರು ಎನ್ನಲಾಗಿದೆ.

ಯುಕೆಯ ಡೈಲಿಸ್ಟಾರ್ ವರದಿಯಂತೆ, ತನ್ನ ಮಕ್ಕಳ ಭವಿಷ್ಯದ ಬಗ್ಗೆ ತುಂಬಾ ಕಾಳಜಿವಹಿಸಿದ್ದ ಡಯಾನಾ, ಈ ರೀತಿ ಒಂದು ಟೇಪ್ ಮುದ್ರಿಸಿದ್ದರು ಎಂದು ಯುಎಸ್ ಮ್ಯಾಗಜೀನ್ ದಿ ಗ್ಲೋಬ್ ವರದಿ ಮಾಡಿದೆ. ಡಯಾನಾ ಅವರ ಆಪ್ತರಿಗೆ ಮಾತ್ರ ಈ ಬಗ್ಗೆ ತಿಳಿದಿತ್ತು ಎನ್ನಲಾಗಿದೆ.

ನನಗೋಸ್ಕರ ನಿಮ್ಮ ಮಕ್ಕಳನ್ನು ಚೆನ್ನಾಗಿ ಬೆಳಸಿ, ಅವರನ್ನು ನಾನು ತುಂಬಾ ಪ್ರೀತಿಸುತ್ತೇನೆ, ವಿಲಿಯಂ ಪತ್ನಿ ಸುಂದರಿ, ಚತುರೆಯಾಗಿದ್ದು, ಸ್ವತಂತ್ರ ವ್ಯಕ್ತಿತ್ವ ಹೊಂದಿರಬೇಕು ಎಂದು ಡಯಾನಾ ಬಯಸಿದ್ದರು ಎಂದು ಟೇಪ್ ಮೂಲಕ ತಿಳಿದು ಬಂದಿದೆ.

ಈ ಟೇಪ್ ಮೂಲಕ ಡಯಾನಾ ಅವರ ಸಾವಿನ ರಹಸ್ಯ ಮತ್ತೊಮ್ಮೆ ಬಿಚ್ಚಿಕೊಳ್ಳುವ ಸಾಧ್ಯತೆಯಿದೆ. ಡಯಾನಾ ಅವರು ಸಾವಿನ ಭಯ ಎದುರಿಸುತ್ತಿದ್ದರೆ ಅವರ ಸಾವು ಅಪಘಾತವಲ್ಲ, ಕೊಲೆ ಎಂಬ ವಾದಕ್ಕೆ ಮತ್ತೆ ಜೀವ ಬರುವ ನಿರೀಕ್ಷೆಯಿದೆ.

ಡಯಾನಾಳ ಬಾಡಿಗಾರ್ಡ್ ಕೆನ್ ವಾರ್ಫ್ ಬರೆದಿರುವ Diana: Closely Guarded Secret ಕೃತಿಯಲ್ಲೂ ಈ ಬಗ್ಗೆ ಕೆಲವು ಉಲ್ಲೇಖಗಳಿತ್ತು. ಈಗ ಈ ಕೃತಿಯ ಆಧಾರದ ಮೇಲೆ ಸ್ಟೀಫನ್ ಎವನ್ಸ್ ಚಿತ್ರ ನಿರ್ಮಿಸುತ್ತಿದ್ದಾರೆ. ರಾಜಕುಮಾರಿ ಡಯನಾಳಾ ಪಾತ್ರದಲ್ಲಿ ಎಮಿಲಿ ಬ್ಲಂಟ್ ಸಿದ್ದಳಾಗುತ್ತಿದ್ದಾಳೆ.

1997ರ ಆಗಸ್ಟ್ 31ರಂದು ನಡೆದ ಅಪಘಾತದಲ್ಲಿ ಡಯಾನಾ ಮತ್ತು ಫಾಯೆದ್ ಸಾವನ್ನಪ್ಪಿರುವುದರ ಹಿಂದೆ ಪಿತೂರಿಗಳು ನಡೆದಿರುವ ಸಾಧ್ಯತೆಗಳಿವೆ. ಈ ಅಪಘಾತದಲ್ಲಿ ಡಯಾನಾ ಪ್ರಿಯಕರ ಎಂದು ಹೇಳಲಾಗಿರುವ ದೋಡಿ ಕೂಡ ಮೃತರಾಗಿದ್ದರು. ಇದಕ್ಕೂ ಮುಂಚೆ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಂದ ಡಯಾನಾ ವಿಚ್ಛೇದನ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. (ಐಎಎನ್ ಎಸ್)

English summary
Princess Diana reportedly recorded secret tapes for her elder son Prince William and his future family because she feared for her life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X