ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಬಗ್ಗೆ ಭಾರತೀಯರು ಹೆಮ್ಮೆ ಪಡುತ್ತಾರೆ: ಇದು ಮೋದಿ ಮಾತು

|
Google Oneindia Kannada News

ಬೀಜಿಂಗ್, ಏಪ್ರಿಲ್ 27: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರು ತಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಎರಡು ದಿನಗಳ ಅನೌಪಚಾರಿಕ ಸರಣಿ ಮಾತುಕತೆ ನಡೆಸುವ ಸಲುವಾಗಿ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನಿಯೋಗ ಮಟ್ಟದ ಮಾತುಕತೆ ನಡೆಸಿದ್ದಾರೆ.

ದೋಕಲಾ ಬಿಕ್ಕಟ್ಟಿನ ಬಳಿಕ ಉಭಯ ದೇಶಗಳ ನಾಯಕರು ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಎರಡೂ ರಾಷ್ಟ್ರಗಳ ನಡುವಣ ಉದ್ವಿಗ್ನತೆಯನ್ನು ಶಮನ ಮಾಡಲು ಈ ಸಭೆ ನೆರವಾಗಲಿದೆ ಎಂಬ ಭರವಸೆ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರದು ಇದು ಚೀನಾಕ್ಕೆ ಎರಡನೆಯ ಭೇಟಿ. ದೇಶದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಚೀನಾಕ್ಕೆ ಎರಡು ಬಾರಿ ಭೇಟಿ ನೀಡುತ್ತಿರುವುದು ಇದೇ ಮೊದಲು.

'ಟೀಕೆಯೇ ನನ್ನ ಆರೋಗ್ಯದ ಗುಟ್ಟು': ಮೋದಿ ಸಂವಾದದ ಪ್ರಮುಖಾಂಶ'ಟೀಕೆಯೇ ನನ್ನ ಆರೋಗ್ಯದ ಗುಟ್ಟು': ಮೋದಿ ಸಂವಾದದ ಪ್ರಮುಖಾಂಶ

ಉಭಯ ದೇಶಗಳ ನಡುವಣ ಗಡಿ ವಿವಾದ ಮತ್ತು ಪಾಕಿಸ್ತಾನದಲ್ಲಿ ಚೀನಾ ನಡೆಸುತ್ತಿರುವ ಆರ್ಥಿಕ ಕಾರಿಡಾರ್ ನಿರ್ಮಾಣ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ, ಈ ಭೇಟಿ ವೇಳೆ ಯಾವುದೇ ನಿರ್ದಿಷ್ಟ ವಿಷಯದ ಕುರಿತು ಚರ್ಚೆ ನಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮೋದಿ ಅವರ ಭೇಟಿ ವೇಳೆಯ ಮಾಹಿತಿ ಇಲ್ಲಿದೆ.

ಮ್ಯೂಸಿಯಂನಲ್ಲಿ ಭೇಟಿ

ಮ್ಯೂಸಿಯಂನಲ್ಲಿ ಭೇಟಿ

ಹುಬೀ ಪ್ರಾಂತೀಯ ವಸ್ತುಸಂಗ್ರಹಾಲಯದಲ್ಲಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಅವರನ್ನು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭೇಟಿ ಮಾಡಿದರು. ಸಾಂಪ್ರದಾಯಿಕ ನೃತ್ಯದೊಂದಿಗೆ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮ್ಯೂಸಿಯಂನಲ್ಲಿ ಮೋದಿ ಮತ್ತು ಜಿನ್‌ಪಿಂಗ್ ಕೆಲಹೊತ್ತು ಪರಸ್ಪರ ಮಾತುಕತೆ ನಡೆಸಿದರು.

ಪ್ರಭಾವ ಬೀರಿದ ಡ್ಯಾಮ್

ಪ್ರಭಾವ ಬೀರಿದ ಡ್ಯಾಮ್

ಹುಬೀ ಪ್ರಾಂತ್ಯಕ್ಕೆ ತಮ್ಮ ಮೊದಲ ಭೇಟಿಯನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡರು. 'ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಾಂತ್ಯಕ್ಕೆ ಭೇಟಿ ನೀಡಲು ಅವಕಾಶ ದೊರಕಿತ್ತು. ಇಲ್ಲಿನ ಥ್ರೀ ಗಾರ್ಜಸ್ ಡ್ಯಾಮ್ ಕುರಿತು ಸಾಕಷ್ಟು ಕೇಳಿದ್ದೆ. ಅದನ್ನು ನೀವು ನಿರ್ಮಿಸಿದ ವೇಗ ಮತ್ತು ಅದರ ವಿಸ್ತೀರ್ಣ ನನ್ನನ್ನು ಪ್ರಭಾವಿಸಿತ್ತು. ಹೀಗಾಗಿ ಅಧ್ಯಯನ ಪ್ರವಾಸಕ್ಕೆಂದು ಬಂದಿದ್ದ ನಾನು ಒಂದು ದಿನವನ್ನು ಡ್ಯಾಮ್ ಬಳಿ ಕಳೆದಿದ್ದೆ' ಎಂದು ಮೋದಿ ಹೇಳಿದರು.

ಭಾರತ ಮತ್ತು ಚೀನಾ ದೇಶಗಳ ಸಂಸ್ಕೃತಿ ನದಿ ತೀರಗಳೊಂದಿಗೆ ಬೆರೆತಿವೆ. ಭಾರತದ ಹರಪ್ಪಾ, ಮಹೆಂಜೊದಾರೊ ನಾಗರಿಕತೆಗಳ ಅಭಿವೃದ್ಧಿಯೂ ನದಿ ತಟದಲ್ಲಿಯೇ ನಡೆದಿರುವುದು.

ಮ್ಯೂಸಿಯಂನಲ್ಲಿ ವಸ್ತು ಪ್ರದರ್ಶನ ವೀಕ್ಷಣೆ

ಮೋದಿ ಮತ್ತು ಜಿನ್‌ಪಿಂಗ್ ಅವರು ಮಧ್ಯಾಹ್ನ 3.20ರ ಸುಮಾರಿಗೆ ಹುಬೀ ಪ್ರಾಂತ್ಯದ ಮ್ಯೂಸಿಯಂನಲ್ಲಿನ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು. ಮ್ಯೂಸಿಯಂನಲ್ಲಿ ಇರಿಸಲಾಗಿರುವ ವಿವಿಧ ಬಗೆಯ ನಾದ ಹೊಮ್ಮಿಸುವ ಗಂಟೆಗಳನ್ನು ಮೋದಿ ಬಾರಿಸಿದರು. ಜಿನ್‌ಪಿಂಗ್ ಕೂಡ ಗಂಟೆ ಬಾರಿಸಿದರು.

ಜನಸಂಖ್ಯೆಯ ಹೊಣೆಗಾರರು

ಜನಸಂಖ್ಯೆಯ ಹೊಣೆಗಾರರು

ದೇಶವೊಂದರ ನಾಯಕನನ್ನು ರಾಜಧಾನಿ ಬೀಜಿಂಗ್‌ನ ಹೊರಗೆ ನೀವು ಭೇಟಿ ಮಾಡುತ್ತಿರುವುದು ಬಹುಶಃ ಇದೇ ಮೊದಲು ಇರಬೇಕು. ಇದು ಭಾರತ ದೇಶಕ್ಕೆ ನೀವು ನೀಡುತ್ತಿರುವ ಮಹತ್ವದ ಗುರುತು ಎಂದು ನಿಯೋಗ ಮಟ್ಟದ ಸಭೆಯ ಆರಂಭದಲ್ಲಿ ಮೋದಿ ಅವರು ಜಿನ್‌ಪಿಂಗ್‌ ಅವರಿಗೆ ಹೇಳಿದರು.

ಜಗತ್ತಿನ ಜನಸಂಖ್ಯೆಯ ಶೇ 40ರಷ್ಟು ಪಾಲಿಗೆ ನಾವು (ಭಾರತ-ಚೀನಾ) ಹೊಣೆಗಾರರಾಗಿದ್ದೇವೆ. ಇದರರ್ಥ ಜಗತ್ತಿನ ಅನೇಕ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ಜತೆಯಾಗಿ ಸಾಗುವುದು ನಮಗಿರುವ ದೊಡ್ಡ ಅವಕಾಶ.

ದೇಶದ ಜನರಿಗೆ ಹೆಮ್ಮೆ

ದೇಶದ ಜನರಿಗೆ ಹೆಮ್ಮೆ

ಚೀನಾದ ಅಧ್ಯಕ್ಷರೊಬ್ಬರಿಂದ ರಾಜಧಾನಿಯ ಆಚೆಗೆ ಎರಡು ಬಾರಿ ಖುದ್ದಾಗಿ ಸ್ವಾಗತ ಪಡೆದುಕೊಂಡ ಮೊದಲ ಪ್ರಧಾನಿ ನಾನು ಎಂದು ಭಾರತದ ಜನರು ನಿಜಕ್ಕೂ ಹೆಮ್ಮೆಪಟ್ಟುಕೊಳ್ಳಲಿದ್ದಾರೆ ಎಂದು ಮೋದಿ ಹೇಳಿದರು.

2019ರಲ್ಲಿ ಭಾರತದಲ್ಲಿ ಮತ್ತೊಂದು ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸಲು ಬರುವಂತೆ ಮೋದಿ ಅವರು ಜಿನ್‌ಪಿಂಗ್ ಅವರನ್ನು ಆಹ್ವಾನಿಸಿದರು.

ಪಂಚಶೀಲ ಕಾರ್ಯಸೂಚಿ

ಪಂಚಶೀಲ ಕಾರ್ಯಸೂಚಿ

ಭಾರತ ಮತ್ತು ಚೀನಾ ಎರಡೂ ಜಗತ್ತಿನ ಪ್ರಮುಖ ಶಕ್ತಿಗಳು ಎಂದು ಬಣ್ಣಿಸಿದ ಪ್ರಧಾನಿ, ದ್ವಿಪಕ್ಷೀಯ ಸಂಬಂಧಕ್ಕಾಗಿ ಹೊಸ ಪಂಚಶೀಲ ಕಾರ್ಯಸೂಚಿಯ ಅಗತ್ಯವನ್ನು ಪ್ರತಿಪಾದಿಸಿದರು.

ದೂರದೃಷ್ಟಿ, ಸುಧಾರಿತ ಸಂವಹನ, ಗಟ್ಟಿ ಸಂಬಂಧ, ಯೋಚನೆಗಳ ವಿನಿಮಯನ ಪ್ರಕ್ರಿಯೆ ಮತ್ತು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವ ಅಂಶಗಳನ್ನು ಪ್ರಸ್ತಾಪಿಸಿದರು.

English summary
Prime ministr Narendra Modi and China president Xi Jinping had delegation level meeting on Friday in Chinese city of Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X