ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಜತೆ 12 ಒಪ್ಪಂದ: ಇದಪ್ಪಾ ಪಾಕ್, ಚೀನಾಕ್ಕೆ ಸೆಡ್ಡು

|
Google Oneindia Kannada News

ತೆಹ್ರಾನ್, ಮೇ 23: ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಆರಂಭದಿಂದಲೂ ವಿದೇಶಗಳ ಪ್ರವಾಸ ಮಾಡುತ್ತ ಸಂಬಂಧ ವೃದ್ಧಿಗೆ ಒತ್ತು ನೀಡಿಕೊಂಡೆ ಬಂದಿದ್ದಾರೆ.

ಇದೀಗ ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರೊಂದಿಗೆ ಮಾತುಕತೆ ನಡೆಸಿದ್ದು 12 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಭಾರತ ತನ್ನ ಬಹುತೇಕ ಅಗತ್ಯದ ತೈಲವನ್ನು ಅರಬ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದ್ದು ಹೊಸ ಬದಲಾವಣೆಯನ್ನು ನಿರೀಕ್ಷೆ ಮಾಡಲಾಗಿದೆ. [ಗುರುದ್ವಾರಕ್ಕೆ ಶಿರಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ]

modi

ಚಾಬಹಾರ್ ಬಂದರು ನಿರ್ಮಾಣ ಒಪ್ಪಂದ ಪ್ರಮುಖ ಸಂಗತಿಯಾಗಿದ್ದು ಸಾಗಣೆ ವೆಚ್ಚದಲ್ಲಿ ಕಡಿತ ಸಾಧ್ಯವಾಗಲಿದೆ. ವಿಜ್ಞಾನ-ತಂತ್ರಜ್ಞಾನಕ್ಕೆ ಪರಸ್ಪರ ಸಹಕಾರ, ಬಂದರು ಅಭಿವೃದ್ಧಿ, ಚಬಹಾರ್ ಬಂದರು ನಿರ್ಮಾಣ ಒಪ್ಪಂದ ಸೇರಿದಂತೆ 12 ಮಹತ್ವದ ಒಪ್ಪಂದಗಳಿಗೆ ಎರಡೂ ದೇಶಗಳು ಒಪ್ಪಿಗೆ ನೀಡಿವೆ.[ಭಾರತದಲ್ಲಿ ತೈಲ ಬೆಲೆ ನಿರ್ಧರಿಸುವ ಅಂಶಗಳು ಯಾವವು?]

15 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಇರಾನ್ ಗೆ ಭೇಟಿ ನೀಡಿದ್ದು ದೇಶದ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ. ಪ್ರಧಾನಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸಾಥ್ ನೀಡಿದ್ದಾರೆ.

ಚಾಬಹಾರ್ ಬಂದರು ನಿರ್ಮಾಣಕ್ಕೆ 500 ಮಿಲಿಯನ್ ಡಾಲರ್ ವಿನಿಯೋಗ ಮಾಡಲಾಗುವುದು. ಅಪಘಾನಿಸ್ಥಾನದ ಮುಖೇನ ಭಾರತಕ್ಕೆ ಇದು ನೇರ ಸಂಪರ್ಕ ಕಲ್ಪಿಸಲಿದೆ ಎಂಬುದು ಅಷ್ಟೆ ಮಹತ್ವದ ಅಂಶವಾಗಿದೆ. ಪಾಕಿಸ್ತಾನ ಮತ್ತು ಚೀನಾದ ತಂಟೆ ತಕರಾರುಗಳಿಲ್ಲದೇ ವಿದೇಶಗಳೊಂದಿಗೆ ವ್ಯವಹರಿಸಲು ಈ ಬಂದರು ವ್ಯವಸ್ಥೆ ನೆರವಾಗಲಿದೆ.

English summary
India and Iran today pledged to combat terrorism and radicalism as the two nations signed 12 agreements including a "milestone" pact on developing the strategic Chabahar port, giving a boost to economic partnership in the post-sanctions era. India committed around USD 500 million for the important port in Iran's southern coast, which will serve as a "point of connectivity" between India, Afghanistan, Commonwealth of Independent States (CIS) countries and East Europe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X