ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಯ ಅಮೆರಿಕಾ ಪ್ರವಾಸದ 8 ಚಿತ್ರಗಳು

By Vanitha
|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್, 25 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವಾರ ಐರ್ಲೆಂಡ್, ಅಮೆರಿಕಾ ವಿದೇಶ ಪ್ರವಾಸ ಕೈಗೊಂಡಿದ್ದು, ಗುರುವಾರ ಅಮೆರಿಕಾಕ್ಕೆ ತಲುಪಿ ಅಲ್ಲಿನ ಗಣ್ಯರೊಂದಿಗೆ ಹಲವಾರು ವಿಚಾರಗಳ ಚರ್ಚೆ ನಡೆಸಿದ್ದಾರೆ.

ಗುರುವಾರ ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ನ್ಯೂಯಾರ್ಕ್ ನ ಹಲವಾರು ಗಣ್ಯರು ಬಹಳ ಆದರದಿಂದ ಅದ್ದೂರಿಯಾಗಿ ಸ್ವಾಗತ ತೋರಿದ್ದಾರೆ.

ನ್ಯೂಯಾರ್ಕಿನ ಎಲ್ಲಾ ಸಿಇಓ, ಗುಜಾರಾತ್ ಬಾಂಧವರು ಹಾಗೂ ಮಾಧ್ಯಮ ಮಿತ್ರರನ್ನು ಭೇಟಿ ಮಾಡಿದ್ದಾರೆ. ಭಾರತದಲ್ಲಿ ಮಾಧ್ಯಮ, ತಂತ್ರಜ್ಞಾನ, ಮತ್ತು ಸಂವಹನದ ಬೆಳವಣಿಗೆ ಕುರಿತು ಮಾತುಕತೆ ನಡೆಸಿದ್ದಾರೆ. ಅಲ್ಲದೇ ರಾಷ್ಟ್ರದಲ್ಲಿ ಮನರಂಜನಾ ವಲಯಗಳನ್ನು ಬಳಸಿಕೊಂಡು ಮುಂದಿನ ಪೀಳಿಗೆಯವರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವುದರ ಕುರಿತಾಗಿ ಚರ್ಚೆ ನಡೆಸಿದ್ದಾರೆ.[ನ್ಯೂಯಾರ್ಕ್‌ನಲ್ಲಿ ಗುಜರಾತ್ ಕಂಡ ನರೇಂದ್ರ ಮೋದಿ]

ಅಲ್ಲದೇ ಈ ವೇಳೆಯಲ್ಲಿ ಮಾತನಾಡಿದ ನರೇಂದ್ರ ಮೋದಿ 'ಭಾರತ ಯಾವಾಗಲೂ ಹೆಚ್ಚೆಚ್ಚು ಸವಾಲುಗಳು ಹಾಗೂ ಹೆಚ್ಚೆಚ್ಚು ಸವಾಲುಗಳನ್ನು ಬಯಸುತ್ತದೆ' ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸದ ಮಾಹಿತಿ ಇಲ್ಲಿದೆ ನೋಡಿ

ಜಾನ್ ಕೆನಡಿ ವಿಮಾನ ನಿಲ್ದಾಣದಲ್ಲಿ

ಜಾನ್ ಕೆನಡಿ ವಿಮಾನ ನಿಲ್ದಾಣದಲ್ಲಿ

ಒಂದು ವಾರ ಪ್ರವಾಸ ಕೈಗೊಂಡ ಮೋದಿ ಗುರುವಾರ ಜಾನ್ ಕೆನಡಿ ವಿಮಾನ ನಿಲ್ದಾಣ ತಲುಪಿದ ವೇಳೆ ಅಮೆರಿಕಾ ಜನತೆಗೆ ಕೈಮುಗಿದು ವಿಮಾನ ಇಳಿದರು.

ಹಾಯ್ ಆಲ್

ಹಾಯ್ ಆಲ್

ನ್ಯೂಯಾರ್ಕಿನ ಗಣ್ಯರ ಕಚೇರಿಗೆ ತೆರಳುತ್ತಿದ್ದ ವೇಳೆ ಮಾಧ್ಯಮ ಮಿತ್ರರತ್ತ ಮೋದಿ ಕೈಬೀಸಿದರು

ಪೆಪ್ಸಿಕೋ ಸಂಸ್ಥೆ ಮುಖ್ಯಸ್ಥೆ

ಪೆಪ್ಸಿಕೋ ಸಂಸ್ಥೆ ಮುಖ್ಯಸ್ಥೆ

ಮೋದಿ ಅವರು ಪೆಪ್ಸಿಕೋ ಸಂಸ್ಥೆಯ ಮುಖ್ಯಸ್ಥರಾದ ಇಂದ್ರಾ ನೂಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಎಲ್.ಪಿ ಮೈಕೆಲ್

ಎಲ್.ಪಿ ಮೈಕೆಲ್

ಬ್ಲೂಮರ್ಗ್ ಸಂಸ್ಥೆಯ ಸಿಇಓ ಹಾಗೂ ಒಡೆಯರಾದ ಎಲ್.ಪಿ ಮೈಕೆಲ್ ಬ್ಲೂಮರ್ಗ್ ಅವರನ್ನು ಭೇಟಿ ಮಾಡಿದರು.

ಗಯಾನಾಕ್ಕೊಂದು ವಂದನೆ

ಗಯಾನಾಕ್ಕೊಂದು ವಂದನೆ

ಗಯಾನಾದ ಅಧ್ಯಕ್ಷರಾದ ಡೆವೀಡ್ ಎ ಗ್ರ್ಯಾಗರ್ ಅವರನ್ನು ಭೇಟಿ ಮಾಡಿದರು

ಹೇಗಿದ್ದೀರಿ?

ಹೇಗಿದ್ದೀರಿ?

ನ್ಯೂಯಾರ್ಕಿನಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸಿನಾ ಅವರೊಂದಿಗೆ ಮೋದಿ.

ಇವರೆಲ್ಲಾ ಮಾಧ್ಯಮ ಬಾಂಧವರು

ಇವರೆಲ್ಲಾ ಮಾಧ್ಯಮ ಬಾಂಧವರು

ಮಾಧ್ಯಮ ಬಾಂಧವರೊಂದಿಗೆ ಮಾತುಕತೆ ನಡೆಸಿದ ಮೋದಿ ರೂಪಾರ್ಟ್ ಮರ್ಡೋಕ್ ಸೇರಿದಂತೆ ಹಲವಾರು ಮಾಧ್ಯಮ ಪ್ರತಿನಿಧಿಗಳೊಂದಿಗ ಫೋಟೋ ತೆಗೆಸಿಕೊಂಡರು.

ಎಲ್ಲಾ ಸಿಇಓಗಳ ಸಂಗಮ

ಎಲ್ಲಾ ಸಿಇಓಗಳ ಸಂಗಮ


ನ್ಯೂಯಾರ್ಕಿನ ಎಲ್ಲಾ ಸಿಇಓಗಳೊಂದಿಗೆ ನರೇಂದ್ರ ಮೋದಿ ಫೋಸ್ ಕೊಟ್ಟರು.

English summary
Prime Minister Narendra Modi arrived Newyork on Thursday. He met all Newyork CEO's, Media persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X