ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಉಕ್ರೇನ್ ಯುದ್ಧದ ನಂತರ ಮೊದಲ ಬಾರಿ ರಷ್ಯಾ ತೊರೆದ ಪುಟಿನ್!

|
Google Oneindia Kannada News

ಕೀವ್, ಜೂನ್ 28: ಉಕ್ರೇನ್‌ ಮೇಲಿನ ಯುದ್ಧ ಆರಂಭವಾದ ನಂತರದಲ್ಲಿ ಮೊದಲ ಬಾರಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾವನ್ನು ತೊರೆದು ತಜಕಿಸ್ತಾನ್ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ.

ಮಂಗಳವಾರ ರಷ್ಯಾದ ಅಧ್ಯಕ್ಷ ಪುಟಿನ್ ತಜಕಿಸ್ತಾನ್‌ಗೆ ಪ್ರಯಾಣಿಸಿದ್ದು, ನಂತರ ಕ್ಯಾಸ್ಪಿಯನ್ ಸಮುದ್ರ ರಾಷ್ಟ್ರಗಳ ಶೃಂಗಸಭೆಗಾಗಿ ತುರ್ಕಮೆನಿಸ್ತಾನ್‌ಗೆ ಭೇಟಿ ನೀಡಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಆಕ್ರಮಣದ ನಂತರ ರಷ್ಯಾದ ಅಧ್ಯಕ್ಷರ ಮೊದಲ ವಿದೇಶಿ ಪ್ರವಾಸ ಇದಾಗಿದೆ.

ರಷ್ಯಾ ಅಧ್ಯಕ್ಷ ಪುಟಿನ್ ಆಯಸ್ಸು ಇನ್ನೆರಡು ವರ್ಷವೂ ಇಲ್ಲ; ನಂಬಬೇಕು ಈ ಸುದ್ದಿ ರಷ್ಯಾ ಅಧ್ಯಕ್ಷ ಪುಟಿನ್ ಆಯಸ್ಸು ಇನ್ನೆರಡು ವರ್ಷವೂ ಇಲ್ಲ; ನಂಬಬೇಕು ಈ ಸುದ್ದಿ

ದುಶಾನ್ಬೆಯಲ್ಲಿ ತಜಿಕಿಸ್ತಾನ್ ಅಧ್ಯಕ್ಷ ಎಮೋಮಾಲಿ ರಹಮಾನ್ ಜೊತೆಗೆ ಪುಟಿನ್ ಮಾತುಕತೆ ನಡೆಸಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಕಾನ್ಫರೆನ್ಸ್ ಸಭೆಯಲ್ಲಿ ತಿಳಿಸಿದ್ದಾರೆ. ಪೆಸ್ಕೋವ್ ಪ್ರಕಾರ, ಬುಧವಾರ ತುರ್ಕಮೆನಿಸ್ತಾನ್‌ನಲ್ಲಿ ಕ್ಯಾಸ್ಪಿಯನ್ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಲಿದ್ದಾರೆ.

President Vladimir Putin to Leave Russia for First Time After the Ukraine War

ಕೊನೆಯ ಬಾರಿ ಬೀಜಿಂಗ್‌ಗೆ ಭೇಟಿ ನೀಡಿದ್ದ ಪುಟಿನ್: ಕಳೆದ ಫೆಬ್ರವರಿ ತಿಂಗಳಿನಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನ ಅವಧಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡಿದ್ದರು. ಅಂದು ಚೀನಾದ ಕ್ಸಿ ಜಿನ್‌ಪಿಂಗ್ ಜೊತೆಗೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಅಂದಿನಿಂದ ಇಂದಿನವರೆಗೂ ರಷ್ಯಾದಲ್ಲಿ ಕುಳಿತಿದ್ದ ವ್ಲಾಡಿಮಿರ್ ಪುಟಿನ್ ಇದೀಗ ಮೊದಲ ಬಾರಿಗೆ ರಷ್ಯಾವನ್ನು ತೊರೆದು ಹೊರಡಲು ಸಿದ್ಧರಾಗಿದ್ದಾರೆ.

ಜಿ-20 ಶೃಂಗಸಭೆ ಆಹ್ವಾನ ಸ್ವೀಕರಿಸಿರುವ ಪುಟಿನ್: ಕಳೆದ ನವೆಂಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಆದರೆ ವೈಯಕ್ತಿಕವಾಗಿ ಹೋಗುತ್ತಾರೆಯೇ ಅಥವಾ ಆನ್‌ಲೈನ್‌ನ ಮೂಲಕ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

English summary
President Vladimir Putin to leave Russia for first time after the Ukraine War. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X