ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಸಿದ್ಧರಾಗಲು ಕರೆ ನೀಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 03: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ರಾಷ್ಟ್ರದ ಸಂಸತ್ತಿನಲ್ಲಿ ಇಂದು ನಡೆಯಬೇಕಿದ್ದ ಅವಿಶ್ವಾಸ ನಿರ್ಣಯ ಮಂಡನೆ ಸ್ಥಗಿತಗೊಂಡಿದೆ. ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯ ಸ್ಥಗಿತಗೊಂಡಿದ್ದು, ಇಮ್ರಾನ್ ಖಾನ್ ಹಂಗಾಮಿ ಪಾಕ್ ಪ್ರಧಾನಿಯಾಗಿ ಉಳಿದಿದ್ದಾರೆ ಎಂದು ಅಧಿಕೃತ ಹೇಳಿಕೆ ಹೊರ ಬಂದಿದೆ. ಮುಂದಿನ 90 ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ.

ಅವಿಶ್ವಾಸ ಮತವು ವಿದೇಶಿ ಪಿತೂರಿಯ ಭಾಗವಾಗಿದೆ ಎಂದು ಸ್ಪೀಕರ್ ತೀರ್ಪು ನೀಡಿದ ನಂತರ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವನ್ನು ಅಮಾನತುಗೊಳಿಸಲಾಗಿದೆ. ಈ ನಡುವೆ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸುತ್ತಿವೆ. ವಿಶ್ವಾಸ ಮತಯಾಚನೆ ಪರೀಕ್ಷೆ ಎದುರಿಸಿದ ಇಮ್ರಾನ್ ಖಾನ್, ಸ್ಪೀಕರ್ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

 ಅವಿಶ್ವಾಸ ನಿರ್ಣಯ ಸ್ಥಗಿತ; ಪಾಕ್‌ಗೆ ಸದ್ಯಕ್ಕೆ ಇಮ್ರಾನ್ ಖಾನ್ ಪ್ರಧಾನಿ ಅವಿಶ್ವಾಸ ನಿರ್ಣಯ ಸ್ಥಗಿತ; ಪಾಕ್‌ಗೆ ಸದ್ಯಕ್ಕೆ ಇಮ್ರಾನ್ ಖಾನ್ ಪ್ರಧಾನಿ

''ಸ್ಪೀಕರ್ ನಿರ್ಧಾರಕ್ಕೆ ನಾನು ಪ್ರತಿಯೊಬ್ಬ ಪಾಕಿಸ್ತಾನಿಯನ್ನು ಅಭಿನಂದಿಸುತ್ತೇನೆ. ಅವಿಶ್ವಾಸ ನಿರ್ಣಯವು ನಮ್ಮ ವಿರುದ್ಧ ವಿದೇಶಿ ಷಡ್ಯಂತ್ರವಾಗಿದೆ. ಅವರನ್ನು ಯಾರು ಆಳಬೇಕು ಎಂಬುದನ್ನು ರಾಷ್ಟ್ರ ನಿರ್ಧರಿಸಬೇಕು. ವಿದೇಶಿ ಶಕ್ತಿಗಳೊಂದಿಗೆ ಷಡ್ಯಂತ್ರ ಮಾಡುವ ಭ್ರಷ್ಟರಲ್ಲ. ಚುನಾವಣೆಗೆ ತಯಾರಿ ಮಾಡಿಕೊಳ್ಳಿ. ನೀವು ನಿರ್ಧರಿಸುತ್ತೀರಿ,'' ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Prepare for Election, Says Prime Minister Imran Khan

ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ,ಪಿಟಿಐ ಹೊಸ ಚುನಾವಣೆಗೆ ಕರೆ ನೀಡುತ್ತದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು.

ಪಿಟಿಐ ಕಾನೂನುಬಾಹಿರವಾಗಿ ಏನನ್ನೂ ಮಾಡುವುದಿಲ್ಲ ಎಂದು ಇಂಧನ ಸಚಿವ ಹಮ್ಮದ್ ಅಜರ್ ಹೇಳಿದ್ದರು. ಆದರೆ, ಅಸೆಂಬ್ಲಿ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಪ್ರತಿಭಟನೆ ಮೊದಲು ಗೊಂಡಿತ್ತು. ಹೀಗಾಗಿ, ಸಂಸತ್ ಸೇರಿದಂತೆ ಪ್ರಮುಖ ಕಟ್ಟಡಗಳಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ತೆಹ್ರೀಕ್-ಎ-ಇನ್ಸಾಫ್ ರಾಜಕೀಯ ಪಕ್ಷವಾಗಿದ್ದು, ಯಾವುದೇ ಅಸಂವಿಧಾನಿಕ ಮತ್ತು ಕಾನೂನುಬಾಹಿರ ಕೆಲಸವನ್ನು ಮಾಡಲು ಹೋಗುವುದಿಲ್ಲ ಎಂದು ಇಂಧನ ಸಚಿವ ಹಮ್ಮದ್ ಅಜರ್ ಹೇಳಿದ್ದರು.

 ದೇವರು ಬಯಸಿದಂತೆ ಒಳ್ಳೆದಿನಗಳು ಬರುತ್ತಿವೆ: ಮರ್ಯಮ್ ಷರೀಫ್ ದೇವರು ಬಯಸಿದಂತೆ ಒಳ್ಳೆದಿನಗಳು ಬರುತ್ತಿವೆ: ಮರ್ಯಮ್ ಷರೀಫ್

69 ವರ್ಷದ ಇಮ್ರಾನ್ ಖಾನ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿಕೊಂಡಿದ್ದರು. 155 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧಿಕಾರದಲ್ಲಿ ಉಳಿಯಲು ಕನಿಷ್ಠ 172 ಶಾಸಕರ ಅಗತ್ಯವಿದೆ. ಈ ಹಂತದಲ್ಲಿ ಯಾವುದೇ ಪಾಲುದಾರರು ಪಕ್ಷವನ್ನು ಬದಲಾಯಿಸಲು ನಿರ್ಧರಿಸಿದರೆ ಅವರನ್ನು ತೆಗೆದುಹಾಕಬಹುದು.

ಇಮ್ರಾನ್ ಖಾನ್ ಸಮ್ಮಿಶ್ರ ಸರ್ಕಾರದ ಪ್ರಮುಖ ಮಿತ್ರಪಕ್ಷವಾದ ಮುತ್ತಾಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ (MQM-P) ತನ್ನ ಬೆಂಬಲವನ್ನು ಹಿಂಪಡೆದಿರುವುದಾಗಿ ಘೋಷಿಸಿದೆ. ಇದಾದ ಬಳಿಕ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಆಡಳಿತ ಪಕ್ಷ PTI ಬಹುಮತ ಕಳೆದುಕೊಂಡಿದೆ. MQM ಬುಧವಾರದಂದು ತಾನು ವಿರೋಧ ಪಕ್ಷವಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತವನ್ನು ಬೆಂಬಲಿಸುವುದಾಗಿ ಘೋಷಿಸಿತ್ತು.

ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವ ಯತ್ನಕ್ಕೆ ತಡೆ ಬಿದ್ದಿದೆ. ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ಪ್ರಕ್ರಿಯೆಯ ಭಾಗವೇ ವಿಶ್ವಾಸಮತಯಾಚನೆಯಾಗಿತ್ತು. ಸಂಸತ್ತಿನ ಉಪ ಸ್ಪೀಕರ್ ಅವರು ಅವಿಶ್ವಾಸ ನಿರ್ಣಯ ಮಂಡನೆಯೇ ಅಸಂವಿಧಾನಿಕ ಎಂದು ನಿರ್ಣಯಕ್ಕೆ ತಡೆ ನೀಡಿದರು. ನಂತರ ಸಂಸತ್ತನ್ನು ವಿಸರ್ಜಿಸಲು ದೇಶದ ಅಧ್ಯಕ್ಷರಿಗೆ ಸಲಹೆ ನೀಡಿದರು, ಇದು 220 ಮಿಲಿಯನ್ ಜನರಿರುವ ಪರಮಾಣು-ಸಶಸ್ತ್ರ ದೇಶದಲ್ಲಿ ತಾಜಾ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. "ನಾನು ಅಸೆಂಬ್ಲಿಗಳನ್ನು ವಿಸರ್ಜಿಸಲು ರಾಷ್ಟ್ರಪತಿಗಳಿಗೆ ಸಲಹೆಯನ್ನು ಕಳುಹಿಸಿದ್ದೇನೆ" ಎಂದು ಖಾನ್ ತಮ್ಮ ಭಾಷಣದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಶಾಸಕಾಂಗಗಳನ್ನು ಉಲ್ಲೇಖಿಸಿ ಹೇಳಿದರು. ಹೊಸ ಚುನಾವಣೆಗೆ ಸಿದ್ಧರಾಗುವಂತೆ ಅವರು ರಾಷ್ಟ್ರಕ್ಕೆ ಕರೆ ನೀಡಿದ್ದಾರೆ. ವಿಪಕ್ಷಗಳು ಇಡೀ ಪ್ರಕ್ರಿಯೆ ಅಸಂವಿಧಾನವಾಗಿದೆ ಎಂದು ನಿರ್ಧರಿಸಿದ್ದು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ವಿಪಕ್ಷ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.

English summary
"Prepare for the election!" said Prime Minister Imran Khan on Sunday. The preparation for a caretaker government has begun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X