• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?

By Nayana
|

ಬೆಂಗಳೂರು, ಜು.18: ಗರ್ಭಿಣಿಯಾಗಿದ್ದಾಗ, ಹೆರಿಗೆ ಸಂದರ್ಭದಲ್ಲಿ ಅಥವಾ ಹೆರಿಗೆಯಾದ ಎರಡು ತಿಂಗಳ ಒಳಗೆ ಹೃದ್ರೋಗ ಸಮಸ್ಯೆಗಳು ಕಂಡು ಬರುವ ಪ್ರಕರಣಗಳು ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಬೆಂಗಳೂರಿನಲ್ಲಿ ಇದರ ಪ್ರಮಾಣ ಶೇ.4.5ರಷ್ಟಿದೆ, ಈ ಮಹಿಳೆರು ಗರ್ಭಾವಸ್ಥೆಯಲ್ಲಿದ್ದಾಗ ಡ್ರಗ್ಸ್‌, ಆಲ್ಕೋಹಾಲ್‌ ಇನ್ನಿತರೆ ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ

ಇತ್ತೀಚೆಗೆ ಅಮೇರಿಕಾದ ಎನ್‌ವೈಯು ಸ್ಕೂಲ್‌ ಆಫ್‌ ಮೆಡಿಕಲ್‌ ರಿಸರ್ಚ್ ನಡೆಸಿದ ಮೇಯೋ ಕ್ಲಿನಿಕ್‌ ಪ್ರೊಸೀಡಿಂಗ್ಸ್‌ ಸಮೀಕ್ಷೆಯಲ್ಲಿ ಇದು ಬಹಿರಂಗಗೊಂಡಿದೆ. ಗರ್ಭಾವಸ್ಥೆಯಲ್ಲಿದ್ದಾಗ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವರ ಸಂಖ್ಯೆ 2002 ರಿಂದ 2014ರ ವರೆಗೆ ಶೇ.25ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

35ರಿಂದ 39ರ ವಯಸ್ಸಿನಲ್ಲಿ ಗರ್ಭ ಧರಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದು ವರದಿ ಹೇಳುತ್ತದೆ. ಕೆಲವು ಮಹಿಳೆಯರಿಗೆ ಥೈರಾಯಿಡ್‌ ಅಥವಾ ಮಧುಮೇಹವಿರುತ್ತದೆ ಹೆರಿಗೆ ಸಂದರ್ಭದಲ್ಲಿ ಇದೂ ಕೂಡ ಹೃದ್ರೋಗ ಸಮಸ್ಯೆಗೆ ಒಂದು ಕಾರಣವಾಗುತ್ತದೆ.

ಇದರಲ್ಲಿ ಶೋಚನೀಯ ಸಂಗತಿಯೆಂದರೆ ಬಹುತೇಕ ಗರ್ಭಿಣಿಯರಿಗೆ ಈ ಹೃದ್ರೋಗ ಇರುವ ಸಮಸ್ಯೆ ತಿಳಿದಿದ್ದರು, ಅದನ್ನು ವೈದ್ಯರ ಬಳಿ ತೋರಿಸದೆ ಉದಾಸೀನ ಮಾಡುತ್ತಾರೆ. ವೈದ್ಯರ ಗಮನಕ್ಕೆ ಇದನ್ನು ತಾರದಿರುವ ಕಾರಣಕ್ಕಾಗಿ, ಅವರಿಗೆ ಸರಿಯಾಗಿ ಚಿಕಿತ್ಸೆ ದೊರೆಯದೆ ಅವರ ಜೀವ ಅಪಾಯಕ್ಕೆ ಸಿಲುಕಬಹುದು.

ಆದರೆ ಅದೇ ಸಮಯದಲ್ಲಿ ಹೃದ್ರೋಗದ ಸಮಸ್ಯೆಯಿಂದಾಗಿ ಮಹಿಳೆಯರಲ್ಲಿ ಗರ್ಭಪಾತವು ಸಹ ಆಗಬಹುದು. ಇದೇ ಸಮಯದಲ್ಲಿ ಹೃದ್ರೋಗವನ್ನು ಹೊಂದಿರುವ ಗರ್ಭಿಣಿಯರು ಈ ಸಮಸ್ಯೆಯ ನಡುವೆ ಆರೋಗ್ಯಪೂರ್ಣವಾದ ಮಗುವಿಗೆ ಯಶಸ್ವಿಯಾಗಿ ಜನ್ಮ ನೀಡಿರುತ್ತಾರೆ.

ಕ್ಯಾಟ್‌ವಾಕ್ ಮಾಡುತ್ತಲೇ ಸ್ತನ್ಯಪಾನ: ಚರ್ಚೆಗೆ ಗ್ರಾಸವಾದ ರೂಪದರ್ಶಿ

ಆದರೆ ಅವರು ಈ ಸಮಸ್ಯೆಯನ್ನು ವೈದ್ಯರ ಗಮನಕ್ಕೆ ತಂದು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದಿರುತ್ತಾರೆ. ಬನ್ನಿ ಈ ಸಮಯದಲ್ಲಿ ಕಂಡು ಬರುವ ಹೃದ್ರೋಗವನ್ನು ಹೇಗೆ ನಿಭಯಿಸಬಹುದು ಎಂಬುದಕ್ಕೆ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದೇವೆ.

ಗರ್ಭಿಣಿಯಾಗಿದ್ದಾಗ ದೇಹ ಮತ್ತು ಹೃದಯಕ್ಕೆ ಬಹಳಷ್ಟು ಒತ್ತಡ ಬೀಳುತ್ತದೆ. ತಜ್ಞರು ನೀಡಿರುವ ಮಾಹಿತಿ ಪ್ರಕಾರ 49,829,753 ಹರಿಗೆಯಾಗಿದೆ. ಅದರಲ್ಲಿ 1061 ಹೆರಿಗೆಯಾಗುವ ಸಮಯದಲ್ಲಿ ಹೃದ್ರೋಗ ಕಾಣಿಸಿಕೊಂಡಿದೆ. 922 ಪ್ರಕರಣಗಳು ಹೆರಿಗೆ ಮೊದಲು ಕಾಣಿಸಿಕೊಂಡಿದೆ ಇನ್ನು 2,390 ಪ್ರಕರಣಗಳು ಹೆರಿಗೆಯಾಗಿ ಎರಡು ತಿಂಗಳೊಳಗೆ ಕಾಣಿಸಿಕೊಂಡಿದೆ.

 ಗರ್ಭಿಣಿಯಲ್ಲಿ ಹೃದ್ರೋಗ ಕಾಣಿಸಿಕೊಳ್ಳಲು ಮುಖ್ಯ ಕಾರಣ

ಗರ್ಭಿಣಿಯಲ್ಲಿ ಹೃದ್ರೋಗ ಕಾಣಿಸಿಕೊಳ್ಳಲು ಮುಖ್ಯ ಕಾರಣ

ಕೆಲವರು ತಡವಾಗಿ ಮದುವೆಯಾಗುತ್ತಾರೆ, 35 ವರ್ಷದಿಂದ 39 ವರ್ಷದಲ್ಲಿ ಮಗುವನ್ನು ಹೆರುವ ಕಾರಣ ಈ ತೊಂದರೆಯಗಳಿಗೆ ತುತ್ತಾಗುತ್ತಿದ್ದಾರೆ.40 ವರ್ಷದಲ್ಲಿ ಮಗುವನ್ನು ಹೆರುವವರು 10 ಪಟ್ಟು ಹೆಚ್ಚು ತೊಂದರೆಯನ್ನು ಅನುಭವಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಗುವಾದರೆ ಅಂದರೆ 22ರಿಂದ 27ವರ್ಷ ವಯಸ್ಸಿನಲ್ಲಿ ಗರ್ಭ ಧರಿಸಿದರೆ ಇಂತಹ ತೊಂದರೆಗಳು ಬರುವುದಿಲ್ಲ ಎಂದು ವರದಿ ಹೇಳುತ್ತದೆ.

 ಗರ್ಭಿಣಿಯರಲ್ಲಿ ಹೃದ್ರೋಗ ಶೇ. 25ರಷ್ಟು ಹೆಚ್ಚಳ

ಗರ್ಭಿಣಿಯರಲ್ಲಿ ಹೃದ್ರೋಗ ಶೇ. 25ರಷ್ಟು ಹೆಚ್ಚಳ

ಯುಎಸ್‌ ಏಜೆನ್ಸಿ ಫಾರ್‌ ಹೆಲ್ತ್‌ಕೇರ್‌ ರಿಸರ್ಚ್ ಅನ್ ಕ್ವಾಲಿಟೀಸ್‌ ನ್ಯಾಷನಲ್‌ ಇನ್‌ಪೇಷಂಟ್‌ ಸರ್ವೇ ಪ್ರಕಾರ 2002ರಲ್ಲಿ ರಲ್ಲಿ ಶೇ. 7.1ರಷ್ಟಿದ್ದ ಹೃದ್ರೋಗ ಸಮಸ್ಯೆ 2014ರಷ್ಟೊತ್ತಿಗೆ 9.2ರಷ್ಟು ಹೆಚ್ಚಾಗಿದೆ. ಇದೀಗ ಅಮೇರಿಕಾದಲ್ಲಿ 1 ಲಕ್ಷ ಮಹಿಳೆಯರು ಗರ್ಭಾವಸ್ಥೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಗಿದೆ.

 ಗರ್ಭಿಣಿಯಾಗಿರುವಾಗ ಹೃದ್ರೋಗವನ್ನು ನಿಭಾಯಿಸುವುದು ಹೇಗೆ?

ಗರ್ಭಿಣಿಯಾಗಿರುವಾಗ ಹೃದ್ರೋಗವನ್ನು ನಿಭಾಯಿಸುವುದು ಹೇಗೆ?

ಎಕೊ-ಕಾರ್ಡಿಯೊಗ್ರಾಮ್: ಹೃದಯದ ಪ್ರತಿಬಿಂಬವನ್ನು ಪಡೆಯಲು ಧ್ವನಿ ತರಂಗಗಳನ್ನು ಬಳಸಲಾಗುತ್ತದೆ.

ಎಲೆಕ್ಟ್ರೋಕಾರ್ಡಿಯೊಗ್ರಾಮ್: ಹೃದಯದ ವಿದ್ಯುತ್ ಚಟುವಟಿಕೆಗಳನ್ನು ಮಾಪನ ಮಾಡಲು ಈ ಪರೀಕ್ಷೆಯನ್ನು ಬಳಸಲಾಗುತ್ತದೆ.

ಔಷಧೋಪಚಾರ: ಹೃದಯದ ಸ್ಥಿತಿಯನ್ನು ಸುಧಾರಿಸಲು ನಿಯಮಿತ ಔಷಧೋಪಚಾರಗಳನ್ನು ತಿಳಿಸಲಾಗುತ್ತದೆ.

 ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

1)ಔಷಧೋಪಚಾರ: ಸರಿಯಾದ ಸಮಯಕ್ಕೆ ಅಗತ್ಯ ಔಷಧೋಪಚಾರಗಳನ್ನು ತೆಗೆದುಕೊಳ್ಳಿ, ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

2)ವಿಶ್ರಾಂತಿ: ಹೃದಯದ ಮೇಲೆ ಒತ್ತಡ ಹೆಚ್ಚಾಗದಂತೆ, ಅಗತ್ಯವಾದ ವಿಶ್ರಾಂತಿಯನ್ನು ತೆಗೆದುಕೊಳ್ಳಿ.

3) ತೂಕ: ಅಧಿಕ ತೂಕ ಇರುವವರಲ್ಲಿ ಹೃದ್ರೋಗ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ನಿಮ್ಮ ತೂಕದ ಮೇಲೆ ಗಮನವಿಟ್ಟಿರಿ. ಗರ್ಭಿಣಿಯಾದಾಗ ಆದಷ್ಟು ಎಷ್ಟು ಬೇಕೋ, ಅಷ್ಟು ಮಾತ್ರ ತೂಕ ಹೆಚ್ಚು ಮಾಡಿಕೊಳ್ಳಿ. ಇದಕ್ಕಾಗಿ ನಿಮ್ಮ ವೈದ್ಯರ ನೆರವನ್ನು ಪಡೆಯಿರಿ.

4) ಉದ್ವೇಗ: ಯಾರಿಗೆ ಆಗಲಿ ಉದ್ವೇಗ ಹೆಚ್ಚಾದಷ್ಟು ಅವರ ಹೃದಯವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಉದ್ವೇಗಕ್ಕೆ ಒಳಗಾಗಬೇಡಿ. 5. ಕಿರಿ ಕಿರಿ ಮಾಡುವಂತಹವುಗಳು: ಧೂಮಪಾನ ಮತ್ತು ಮಧ್ಯಪಾನ ಮಾಡುವ ಅಭ್ಯಾಸವಿದ್ದಲ್ಲಿ, 5) ಗರ್ಭಿಣಿಯಾದಾಗ ಆ ಅಭ್ಯಾಸಗಳನ್ನು ಬಿಟ್ಟು ಬಿಡಿ. ಇದರಿಂದ ನಿಮ್ಮ ಮಗು ಮತ್ತು ನಿಮ್ಮ ಆರೋಗ್ಯ ಎರಡಕ್ಕೂ ಒಳ್ಳೆಯದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pregnant women and those who have recently given birth need to be aware of the symptoms of heart disease, The risk of having a heart attack while pregnant, giving birth, or during the two months after delivery, continues to increase for American women, a new study finds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more