ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರನ್ನು ನೋಡಲಿಚ್ಛಿಸದ ದೇವರು, ದೇವರೇ ಅಲ್ಲ: ಪ್ರಕಾಶ್ ರೈ

|
Google Oneindia Kannada News

Recommended Video

ಶಬರಿಮಲೈ ಅಯ್ಯಪ್ಪ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರಕಾಶ್ ರೈ | Oneindia Kannada

ಶಾರ್ಜಾ, ನವೆಂಬರ್ 05: ಮಹಿಳೆಯರನ್ನು ನೋಡಲು ಇಚ್ಛಿಸಿದ ದೇವರು, ದೇವರೇ ಅಲ್ಲ ಎಂದು ನಟ ಪ್ರಕಾಶ್ ರೈ ಶಬರಿಮಲೆ ಅಯ್ಯಪ್ಪ ದೇವರ ಕುರಿತು ಹೇಳಿದ್ದಾರೆ.

ಶಾರ್ಜಾನಲ್ಲಿ ಆಯೋಜಿಸಿದ್ದ 'ಶಾರ್ಜಾ ಇಂಟರ್ನ್ಯಾಷನಲ್ ಬುಕ್ ಫೇರ್‌' (ಎಸ್‌ಐಬಿಎಫ್‌) ನಲ್ಲಿ ತಮ್ಮ ಕನ್ನಡ ಅಂಕಣ ಬರಹಗಳ ಸಂಗ್ರಹ 'ಇರುವುದೆಲ್ಲವ ಬಿಟ್ಟು' ಪುಸ್ತಕದ ಮಲಯಾಳಂ ಅನುವಾದಿತ ಪುಸ್ತಕದ ಬಿಡುಗಡೆ ಕಾರ್ಯಕ್ರಮದ ವೇಳೆ ಕೇರಳದ ಶಬರಿಮಲೆ ವಿವಾದದ ಬಗ್ಗೆ ಅವರು ಮಾತನಾಡಿದರು.

ಹೆಣ್ಣನ್ನು ಭೂಮಿಗೆ, ದೇವರಿಗೆ ಹೋಲಿಸುತ್ತೇವೆ, ಅಂತಹಾ ಹೆಣ್ಣನ್ನೇ ನೋಡಲು ಇಚ್ಛಿಸದ ದೇವರು ದೇವರಾಗಿರಲೇ ಸಾಧ್ಯವೇ ಇಲ್ಲ, ಹೆಣ್ಣನ್ನು ಪೂಜೆಯಿಂದ ಹೊರಗಿಡುವ, ಹೆಣ್ಣನ್ನು ನೋಡಲು ಇಚ್ಛಿಸಿದ ದೇವರನ್ನು ನಾನು ನೋಡುವುದಿಲ್ಲ ಎಂದು ಪ್ರಕಾಶ್ ರೈ ಆಕ್ರೋಶ ಭರಿತರಾಗಿ ಹೇಳಿದರು.

ಕೊಡಗು ಸಂತ್ರಸ್ಥರಿಗೆ 5 ಲಕ್ಷ ನೆರವು ನೀಡಿದ ನಟ ಪ್ರಕಾಶ್ ರೈ ಕೊಡಗು ಸಂತ್ರಸ್ಥರಿಗೆ 5 ಲಕ್ಷ ನೆರವು ನೀಡಿದ ನಟ ಪ್ರಕಾಶ್ ರೈ

ಭೂಮಿಯನ್ನು ತಾಯಿ ಅನ್ನುತ್ತೇವೆ, ತಾಯಿಗೆ ದೇವರೆನ್ನುತ್ತೇವೆ, ಅಂತಹಾ ತಾಯಿಯನ್ನು ಪೂಜೆಯಿಂದ ಹೊರಗಿಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ ಅವರು, ಹೆಣ್ಣನ್ನು ಪೂಜಿಸುವ ನಾಡಿನಲ್ಲಿ ಹೆಣ್ಣನ್ನು ಪೂಜೆಯಿಂದ ಹೊರಗಿಡುವ ಧರ್ಮವು ನನ್ನ ಪಾಲಿಗೆ ಧರ್ಮವೇ ಅಲ್ಲ ಎಂದು ಅವರು ಮುಸ್ಲಿಂ ಬಾಹುಳ್ಯದ ಶಾರ್ಜಾದಲ್ಲಿ ಹೇಳಿದರು.

ಮೀಟೂ ಬಗ್ಗೆಯೂ ಮಾತು

ಮೀಟೂ ಬಗ್ಗೆಯೂ ಮಾತು

ವಿಶ್ವದಾದ್ಯಂತ ಭಾರಿ ಅಲೆ ಎಬ್ಬಿಸಿರುವ #ಮೀಟೂ ಅಭಿಯಾನದ ಬಗ್ಗೆಯೂ ಮಾತನಾಡಿದ ಪ್ರಕಾಶ್ ರೈ, ಲೈಂಗಿಕ ಕಿರುಕುಳ ಆರೋಪದಲ್ಲಿ ಹೆಣ್ಣನ್ನು ಸಾಕ್ಷಿ ಕೇಳುವುದು ಅತ್ಯಂತ ಹೀನಾಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲೈಂಗಿಕ ಕಿರುಕುಳಕ್ಕೆ ಸಾಕ್ಷ್ಯ ಕೇಳುವ ಸಮಾಜಕ್ಕೆ ನಾಚಿಕೆ ಆಗಬೇಕು ಎಂದು ಅವರು ಬೇಸರ ವ್ಯಕ್ತಪಡಿಸಬೇಕು.

ಪ್ರಕಾಶ್ ರೈ ಹತ್ಯೆಗೆ ಸಂಚು?!ಸ್ಫೋಟಕ ಸುದ್ದಿಗೆ ರೈ ಪ್ರತಿಕ್ರಿಯೆ ಏನು?ಪ್ರಕಾಶ್ ರೈ ಹತ್ಯೆಗೆ ಸಂಚು?!ಸ್ಫೋಟಕ ಸುದ್ದಿಗೆ ರೈ ಪ್ರತಿಕ್ರಿಯೆ ಏನು?

ಮೋದಿ ಬಗ್ಗೆಯೂ ಮಾತು

ಮೋದಿ ಬಗ್ಗೆಯೂ ಮಾತು

ಕೇರಳದಲ್ಲಿ ಪ್ರವಾಹ ಬಂದು ಕೇರಳದ ಪುನರ್‌ ನಿರ್ಮಾಣಕ್ಕೆ 20000 ಕೋಟಿ ರೂಪಾಯಿ ಅಗತ್ಯ ಇದ್ದಾಗ ಮೋದಿ ಕೇವಲ 600 ಕೋಟಿ ಕೊಟ್ಟರು ಆದರೆ 3000 ಕೋಟಿ ಖರ್ಚು ಮಾಡಿ ಪ್ರತಿಮೆ ನಿರ್ಮಿಸಿದರು. ದೇಶ ಕಷ್ಟದಲ್ಲಿ ಇದ್ದಾಗ ಪ್ರಧಾನಿ ಹೀಗೆ ಮಾಡಬಾರದು ಎಂದು ವಿದೇಶದಲ್ಲೂ ಮೋದಿಯನ್ನು ಟೀಕಿಸಿದರು ಪ್ರಕಾಶ್ ರೈ.

ಬೆಂಗಳೂರು: ನಟ ಪ್ರಕಾಶ್ ರಾಜ್ ವಿರುದ್ಧ ದೂರುಬೆಂಗಳೂರು: ನಟ ಪ್ರಕಾಶ್ ರಾಜ್ ವಿರುದ್ಧ ದೂರು

ಪ್ರಕಾಶ್‌ ರೈಗೆ ಜೀವ ಬೆದರಿಕೆ

ಪ್ರಕಾಶ್‌ ರೈಗೆ ಜೀವ ಬೆದರಿಕೆ

ಬಲಪಂಥೀಯ ವಿಚಾರಗಳ ವಿರುದ್ಧ, ಮೋದಿ ವಿರುದ್ಧ ಧನಿ ಎತ್ತಿದ ನಂತರ ನನ್ನ ಜೀವಕ್ಕೆ ಅಪಾಯ ಇದೆ ಎಂದು ಪ್ರಕಾಶ್ ರೈ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಗೆಳತಿ ಗೌರಿ ಹತ್ಯೆ ಆದ ನಂತರ ನಾನು ಧನಿ ಎತ್ತಲು ಆರಂಭಿಸಿದೆ ಆದರೆ ನನಗೂ ಅದೇ ಗತಿ ಕಾಣಿಸಲು ಹಿಂದುತ್ವ ಸಂಘಟನೆಗಳು ಕಾದು ಕುಳಿತಿವೆ ಎಂದು ಅವರು ಹೇಳಿದರು.

ಗೋವಿನ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್ ವಿರುದ್ಧ ಎಫ್ಐಆರ್ ಗೋವಿನ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್ ವಿರುದ್ಧ ಎಫ್ಐಆರ್

ಮಾಧ್ಯಮ, ಕಲಾವಿದರಿಗೆ ಚಾಟಿ

ಮಾಧ್ಯಮ, ಕಲಾವಿದರಿಗೆ ಚಾಟಿ

ಭಾರತೀಯ ಮಾಧ್ಯಮ ಹಾಗೂ ಸಿನಿ ರಂಗದ ಜನರು ತಮ್ಮ ಸುಖದ ವಲಯದಿಂದ ಹೊರಗೆ ಬರುತ್ತಿಲ್ಲ ಎಂದು ಆರೋಪಿಸಿದ ಅವರು, ಹಲವು ಖ್ಯಾತರು ತಮ್ಮೆದುರು ತಪ್ಪು ನಡೆಯುತ್ತಿದ್ದರೂ ಸಹ ಪ್ರತಿಭಟಿಸದೆ ಮೌನ ವಹಿಸಿದ್ದಾರೆ ಎಂದು ಅವರು ಹೇಳಿದರು.

ನಾಯಕ ನಟ ಪಾತ್ರಗಳು ಒಗ್ಗುವುದಿಲ್ಲ

ನಾಯಕ ನಟ ಪಾತ್ರಗಳು ಒಗ್ಗುವುದಿಲ್ಲ

ನೀವೇಕೆ ಖಳನ ಪಾತ್ರದಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತೀರಿ ಎಂದು ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ಎಲ್ಲ ರೀತಿಯ ಪಾತ್ರಗಳನ್ನೂ ಮಾಡುವುದು ನನಗೆ ಇಷ್ಟ, ನಾಯಕನ ಪಾತ್ರಗಳು ನನಗೆ ಅಷ್ಟಾಗಿ ಒಗ್ಗುವುದಿಲ್ಲ, ವರ್ಷಾನುಗಟ್ಟಲೆ ಅದೇ ಕೃತಕ ನಗು ಸೂಸುತ್ತಾ, ನಾಯಕಿಯ ಹಿಂದೆ ಮರಸುತ್ತುವ ಪಾತ್ರಗಳು ನನಗೆ ಇಷ್ಟವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

English summary
God who does not want see women he can not be god said actor Prakash Raj about Shabarimale Ayyappa. He talked in Sharjah International book fest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X