ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿಯಲ್ಲಿ ಪ್ರಬಲ ಭೂಕಂಪ, 20ಕ್ಕೂ ಅಧಿಕ ಮಂದಿ ಮೃತ

|
Google Oneindia Kannada News

Recommended Video

ಭರದಿಂದ ಸಾಗಿದೆ ರಕ್ಶಣಾ ಕಾರ್ಯ | Oneindia Kannada

ಇಸ್ತಾನ್ ಬುಲ್, ಜನವರಿ 25: ಟರ್ಕಿಯ ಪೂರ್ವಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಈ ದುರ್ಘಟನೆಯಲ್ಲಿ 20ಕ್ಕೂ ಅಧಿಕ ಮಂದಿ ಮೃತರಾಗಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಟರ್ಕಿಯ ಎಲಾಜಿಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ಹೊಂದಿದೆ. ಸಿರ್ವಿಕ್ ನ 10 ಕಿ. ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಗುರುತಿಸಲಾಗಿದೆ.

ಮೃತರಲ್ಲಿ ಅನೇಕರು ಎಲಾಜಿಂಗ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ. ಟರ್ಕಿಯಲ್ಲಿ ಭಾರಿ ಚಳಿ ವಾತವರಣವಿದ್ದು, ಭೂಕಂಪದಿಂದ ತತ್ತರಿಸಿ ಆತಂಕದಿಂದ ಮನೆಯಿಂದ ಓಡಿದವರಿಗೆ ಆಶ್ರಯ ನೀಡಲಾಗುತ್ತಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಅಗತ್ಯ ನೆರವು ಪಡೆದುಕೊಳ್ಳುವಂತೆ ಅಧ್ಯಕ್ಷ ರೆಸಿಪ್ ತಯ್ಯಬ್ ಎರ್ದೊಗಾನ್ ಮನವಿ ಮಾಡಿದ್ದಾರೆ.

Powerful Earthquake strikes Turkey

1999ರಲ್ಲಿ ಪಶ್ಚಿಮ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 17 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿ, 5 ಲಕ್ಷ ಮಂದಿ ನಿರಾಶ್ರಿತರಾಗಿದ್ದರು.

English summary
Powerful Earthquake strikes Turkey. Officials announced that: 20 people died, around 400 people injured. Many place damaged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X