ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದ ಜಾವಾದಲ್ಲಿ 6.7 ಪ್ರಮಾಣದ ಪ್ರಬಲ ಭೂಕಂಪ

By Prasad
|
Google Oneindia Kannada News

ಜಾವಾ (ಇಂಡೋನೇಷ್ಯಾ), ಡಿಸೆಂಬರ್ 16 : ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ 6.7 ಪ್ರಮಾಣದ ಪ್ರಬಲ ಭೂಕಂಪ ಸಂಭವಿಸಿದ್ದು, ಇಬ್ಬರು ಅಸುನೀಗಿದ್ದಾರೆ.

ಶುಕ್ರವಾರ ರಾತ್ರಿ 11.47ಕ್ಕೆ ಹೆಚ್ಚು ಜನ ವಾಸಿಸುವ ಜಾವಾದಲ್ಲಿ ಭೂಮಿ ನಡುಗಿದೆ. ಇದರಿಂದ ಹಲವಾರು ಮನೆಗಳು, ಕಚೇರಿ ಕಟ್ಟಡಗಳು ನೆಲಸಮವಾಗಿದ್ದು, 62 ವರ್ಷದ ಪುರುಷ ಮತ್ತು 80 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.

ಸುಮಾರು 30 ಸೆಕೆಂಡುಗಳ ಕಾಲ ನೆಲ ನಡುಗಿದೆ. ಜಾವಾದಿಂದ 200 ಕಿ.ಮೀ. ದೂರದಲ್ಲಿರುವ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ.

Powerful Earthquake strikes Java, Indonesia

ಭೂಕಂಪ ಮಧ್ಯರಾತ್ರಿ ಸಂಭವಿಸಿದ್ದರಿಂದ ಸಾವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಂಭವನೀಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭೂಕಂಪ ಸಂಭವಿಸುತ್ತಿದ್ದಂತೆ ಮನೆಯಿಂದ ಹೊರಓಡಿದ್ದಾರೆ. ಕೆಲವರು ಕಾರು, ಬೈಕು ತೆಗೆದುಕೊಂಡು ಹೊರಟಿದ್ದರಿಂದ ಹಲವಾರು ಕಡೆಗಳಲ್ಲಿ ರಸ್ತೆ ಸಂಚಾರಕ್ಕೆ ಅಡೆತಡೆಯಾಗಿತ್ತು.

English summary
Powerful Earthquake of Magnitude 6.7 strikes Java region, Indonesia. The earth started shaking at 11.47 midnight on Friday for 30 seconds. Two people have been killed as per earlier report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X