ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

|
Google Oneindia Kannada News

ಜಕಾರ್ತ, ಸೆಪ್ಟೆಂಬರ್ 28: ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಶುಕ್ರವಾರ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅದಾಗಿ ಕೆಲ ಹೊತ್ತಿಗೆ ಮತ್ತೊಮ್ಮೆ ಭೂ ಕಂಪನ ಸಂಭವಿಸಿದ್ದರಿಂದ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಕೇಂದ್ರ ಸುಲವೇಸಿ ಮತ್ತು ಪಶ್ಚಿಮ ಸುಲವೇಸಿ ಪ್ರಾಂತ್ಯದ ಜನರು ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಆಗುವಂತೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ. ಅಮೆರಿಕ ಭೂಗರ್ಭ ಸರ್ವೇಕ್ಷಣಾ ಮಾಹಿತಿ ಪ್ರಕಾರ, 7.7 ತೀವ್ರತೆಯ ಭೂ ಕಂಪನ ಸಂಭವಿಸಿದ ಬೆನ್ನಿಗೇ 7.5 ತೀವ್ರತೆಯಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ.

ಅಸ್ಸಾಂನಲ್ಲಿ ಭೂಕಂಪ: ರಿಕ್ಟರ್ ಮಾಪನದಲ್ಲಿ 5.5 ತೀವ್ರತೆ ದಾಖಲುಅಸ್ಸಾಂನಲ್ಲಿ ಭೂಕಂಪ: ರಿಕ್ಟರ್ ಮಾಪನದಲ್ಲಿ 5.5 ತೀವ್ರತೆ ದಾಖಲು

ಮೊದಲ ಬಾರಿಗೆ ಸಂಭವಿಸಿದ ಭೂ ಕಂಪನಕ್ಕೆ ಕೆಲವು ಮನೆಗಳು ನಾಶವಾಗಿವೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜುಲೈ-ಆಗಸ್ಟ್ ನಲ್ಲಿ ಸಂಭವಿಸಿದ ಸರಣಿ ಭೂ ಕಂಪನದಿಂದ ಇಲ್ಲಿನ ಲಂಬೋಕ್ ದ್ವೀಪದಲ್ಲಿ ಐನೂರು ಮಂದಿ ಸಾವನ್ನಪ್ಪಿದ್ದರು.

Powerful earthquake rocks Indonesian island, tsunami warning issued

ಇಂಡೋನೇಷ್ಯಾ ದ್ವೀಪದ ಮೇಲೆ ಮತ್ತೆ ಅಪ್ಪಳಿಸಿದ ಪ್ರಬಲ ಭೂಕಂಪಇಂಡೋನೇಷ್ಯಾ ದ್ವೀಪದ ಮೇಲೆ ಮತ್ತೆ ಅಪ್ಪಳಿಸಿದ ಪ್ರಬಲ ಭೂಕಂಪ

ಹದಿನಾಲ್ಕು ವರ್ಷದ ಹಿಂದೆ ಉತ್ತರ ಇಂಡೋನೇಷ್ಯಾದ ಸುಮಾತ್ರದಲ್ಲಿ ಸಂಭವಿಸಿದ ಭೂ ಕಂಪನದಲ್ಲಿ ಹಿಂದೂ ಮಹಾಸಾಗರ ವ್ಯಾಪ್ತಿಯ ಹದಿಮೂರು ದೇಶಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇಂಡೋನೇಷ್ಯಾವೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

English summary
A major 7.7 magnitude quake struck off the Indonesian island of Sulawesi on Friday, prompting a tsunami alert, hours after a milder quake hit the same area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X