ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಸ್ಕಾ ಭೂಕಂಪನದಿಂದ ಎದುರಾದ ಸುನಾಮಿಯ ಭೀತಿ

|
Google Oneindia Kannada News

ಅಲಸ್ಕಾ, ಜುಲೈ.23: ಕಳೆದ ಅಮೆರಿಕಾದ ಅಲಸ್ಕಾದ ದಕ್ಷಿಣ ಕರಾವಳಿಯ ಆಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಸುನಾಮಿ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಕರಾವಳಿ ಪ್ರದೇಶದ ಹಲವು ಹಳ್ಳಿಗಳ ಜನರು ಸುನಾಮಿ ಭೀತಿಯಿಂದಾಗಿ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 7.8ರಷ್ಟು ದಾಖಲಾಗಿದ್ದು, ಇದರಿಂದ ಸುನಾಮಿಯೂ ಸಂಭವಿಸುವ ಮುನ್ಸೂಚನೆ ಸಿಕ್ಕಿದೆ. ಕರಾವಳಿ ಭಾಗದಲ್ಲಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ಕೊಡಿಯಾಕ್ ನಿಂದ 300 ಕಿಲೋ ಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.

ಅಲಸ್ಕಾದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆಅಲಸ್ಕಾದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಅಮೆರಿಕಾ ಭೂವಿಜ್ಞಾನ ಇಲಾಖೆ ಮಾಹಿತಿ ಪ್ರಕಾರ, ಸ್ಥಳೀಯ ಸಮಯ ಮಂಗಳವಾರ ರಾತ್ರಿ 10: 12 ಕ್ಕೆ ಭೂಕಂಪ ಸಂಭವಿಸಿತು. ಪೆರಿವಿಲ್ಲೆಯ ಸಣ್ಣ ಸಮುದಾಯದ ಆಗ್ನೇಯಕ್ಕೆ 105 ಕಿಲೋ ಮೀಟರ್ ದೂರ ಮತ್ತು 28 ಕಿಲೋ ಮೀಟರ್ ಆಳದಲ್ಲಿ ಕಂಪನವು ಕೇಂದ್ರೀಕೃತವಾಗಿತ್ತು.

Powerful Earthquake In Alaska Villages: Peoples Fear About Tsunami

ಅಲಾಸ್ಕಾ ಪೆನಿನ್ಸುಲಾದ ಹತ್ತಿರದ ಸಮುದಾಯಗಳು ಕಂಪನದ ಅನುಭವವಾಗಿಲ್ಲ. ಸಾಮಾನ್ಯವಾಗಿ ಭೂಕಂಪನದ ಪ್ರಮಾಣಕ್ಕೆ ಸಂಬಂಧಿಸಿದೆ ಎಂದು ಅಲಾಸ್ಕಾ ರಾಜ್ಯ ಭೂಕಂಪಶಾಸ್ತ್ರಜ್ಞ ಮೈಕೆಲ್ ವೆಸ್ಟ್ ಹೇಳಿದ್ದಾರೆ. ಪಶ್ಚಿಮ ಪ್ರದೇಶದ 160 ಕಿಲೋ ಮೀಟರ್ ದೂರದಲ್ಲಿರುವ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಪ್ರಬಲ ಭೂಕಂಪನದವ ಅನುಭವವಾಗಿದ್ದು, 805 ಕಿಲೋ ಮೀಟರ್ ದೂರದ ಅಂಕೊರಜೆ ಪ್ರದೇಶದಲ್ಲಿಯೂ ಕಂಪಿಸಿರುವ ಬಗ್ಗೆ ವರದಿಯಾಗಿದೆ.

ಭೂಕಂಪನದ ನಂತರ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಯಾವುದೇ ರೀತಿ ಆಸ್ತಿ-ಪಾಸ್ತಿ ಮತ್ತು ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ. ಹೋಮರ್ ಮತ್ತು ಕೊಡಿಯಾಕ್ ಪ್ರದೇಶದಲ್ಲಿ ಸುನಾಮಿಯ ಆತಂಕ ಎದುರಾಗಿದ್ದು, ಕರಾವಳಿ ಭಾಗದ ಜನರನ್ನು ಸ್ಥಳಾಂತರಿಸಲಾಗಿದೆ.

ಅಲಸ್ಕಾ, ಅಲೆಂಟೀನಾ ಪ್ರದೇಶಗಳಲ್ಲಿ ಸಾಕಷ್ಟು ಬಾರಿ ಭೂಕಂಪದಂತಾ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುತ್ತವೆ. ಕಳೆದ 1964ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 131 ಜನರು ಪ್ರಾಣ ಬಿಟ್ಟಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿತ್ತು.

English summary
Powerful Earthquake In Alaska Villages: Peoples Fear About Tsunami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X