ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಲಾಂಟಾದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ: ವಿಮಾನ ಸಂಚಾರ ಸ್ಥಗಿತ

|
Google Oneindia Kannada News

ಅಟ್ಲಾಂಟಾ, ಡಿಸೆಂಬರ್ 18 : ಜಗತ್ತಿನ ಅತ್ಯಂತ ಹೆಚ್ಚು ಜನನಿಬಿಡ ವಿಮಾನ ನಿಲ್ದಾಣ ಎಂದೇ ಖ್ಯಾತಿಯಾಗಿರುವ ಅಮೇರಿಕಾದ ಅಟ್ಲಾಂಟಾದ ಹಾರ್ಟ್ಸ್ ಫೀಲ್ಡ್-ಜಾಕ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ (ಡಿ.17)ರಂದು ವಿದ್ಯುತ್ ಪೂರೈಕೆ ವ್ಯತ್ಯಯದಿಂದ ವಿಮಾನಗಳ ಸಂಚಾರ ಕೆಲ ಗಂಟೆ ಸ್ಥಗಿತಗೊಂಡಿತ್ತು.

ಭಾನುವಾರ ಮಧ್ಯಾಹ್ನ ಜಾಗತಿಕ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ವಿಮಾನ ನಿಲ್ದಾಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ರಾತ್ರಿ 7 ಗಂಟೆಯ ವೇಳೆಗೆ ವಿಮಾನ ನಿಲ್ದಾಣದ ಒಂದು ಭಾಗದಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಪುನಾರಂಭಗೊಂಡಿತ್ತು. ಆದರೆ ಉಳಿದಂತೆ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

Power outage causes more than thousand flights delayed

ಮಧ್ಯರಾತ್ರಿ ಬಳಿಕವಷ್ಟೇ ವಿಮಾನ ನಿಲ್ದಾಣದ ಸಂಪೂರ್ಣ ಭಾಗದಲ್ಲಿ ವಿದ್ಯುತ್ ಪೂರೈಕೆ ಪುನಾರಾರಂಭಗೊಂಡಿತ್ತು. ಜಾರ್ಜಿಯಾ ಸ್ಟೇಟ್ ನ ವಿದ್ಯುತ್ ಇಲಾಖೆ ಪ್ರಕಾರ ವಿಮಾನ ನಿಲ್ದಾಣದ ನೆಲ ಮಹಡಿಯಲ್ಲಿ ಎಲೆಕ್ಟ್ರಿಕ್ ಶಾರ್ಟ್ ನಿಂದಾಗಿ ಸಾಕಷ್ಟು ವಿದ್ಯುತ್ ಸಂಪರ್ಕ ಜಾಲಕ್ಕೆ ಸಾಕಷ್ಟು ಧಕ್ಕೆ ಉಂಟಾಗಿತ್ತು. ಇಡೀ ವಿಮಾನ ನಿಲ್ದಾಣದ ವಿದ್ಯುತ್ ಸಂಚಾರ ಸ್ಥಗಿತಗೊಂಡಿತ್ತು.

ವಿಮಾನ ನಿಲ್ದಾಣದಲ್ಲಿ ವಿದ್ಯುತ್ ಸ್ಥಗಿತಕ್ಕೆ ಕಾರಣ ಏನೇ ಇದ್ದರೂ ಒಟ್ಟಾರೆ 1150 ಕ್ಕೂ ಹೆಚ್ಚು ವಿಮಾನಗಳ ಸಂಪರ್ಕ ಭಾನುವಾರ ದಿನ ಸಾಧ್ಯವಾಗಲಿಲ್ಲ. ರಾತ್ರಿ 7.45ರ ವೇಳೆ ಇಷ್ಟು ಸಂಖ್ಯೆಯ ವಿಮಾನಗಳು ಸಂಚಾರ ಸ್ಥಗಿತ್ಗೊಂಡಿತ್ತು. ಸಾವಿರಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾದರೂ ಆ ಪೈಕಿ ನೂರಾರು ವಿಮಾನಗಳ ಸಂಚಾರವನ್ನು ದಿನದ ಮಟ್ಟಿಗೆ ರದ್ದುಗೊಳಿಸಲಾಗಿತ್ತು ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.

ಅಟ್ಲಾಂಟಾದ ಅಧಿಕೃತ ರೇಡಿಯೋ ಚಾನೆಲ್, ಟಿವಿ ಚಾನೆಲ್ ಗಳು , ರಾತ್ರಿ 8.30 ರ ವೇಳೆಗೆ 900 ಚಾನೆಲ್ ವಿಮಾನಗಳ ಸಂಚಾರ ರದ್ದುಗೊಂಡಿವೆ ಎಂದು ವರದಿ ಮಾಡಿದೆ. ದಿನವೊಂದಕ್ಕೆ 2 ಲಕ್ಷದ 70 ಸಾವಿರ ಪ್ರಯಾಣಿಕರು ಸಂಚರಿಸುವ ಅಟ್ಲಾಂಟಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಕ್ಷಾಂತರ ಪ್ರಯಾಣಿಕರು ಭಾನುವಾರ ಉಂಟಾದ ವಿದ್ಯುತ್ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

English summary
World's busiest airport, Hartsfield-Jackson international airport in Atlanta of United states of America was cancelled more than thousand flights service on Sunday due to power outage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X