ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ಚುಗಲ್ ಆರೋಗ್ಯ ಸಚಿವೆ ರಾಜೀನಾಮೆಗೆ ಕಾರಣವಾದ ಭಾರತೀಯ ಗರ್ಭಿಣಿ ಸಾವು!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ಭಾರತೀಯ ಪ್ರವಾಸಿ ಗರ್ಭಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದ ಕೆಲವು ಗಂಟೆಗಳಲ್ಲೇ ಪೋರ್ಚುಗಲ್‌ನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನಿಯೋನಾಟಾಲಜಿ ಸೇವೆ ಒದಗಿಸಲು ಸಾಧ್ಯವಾಗದ ಹಿನ್ನೆಲೆ ಸಾಂತಾ ಮಾರಿಯಾ ಆಸ್ಪತ್ರೆಯಿಂದ ರಾಜಧಾನಿಯ ಮತ್ತೊಂದು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಗುತ್ತಿದ್ದು, ಈ ವೇಳೆ ಮಾರ್ಗಮಧ್ಯದಲ್ಲಿಯೇ 34 ವರ್ಷದ ಗರ್ಭಿಣಿಯೊಬ್ಬರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ನಿಜವಾಗುತ್ತಿದೆಯಾ ಬಾಬಾ ವಂಗಾ 2022ರ ಬಗ್ಗೆ ಹೇಳಿದ ಭವಿಷ್ಯ?: ಹೌದು ಎನ್ನುತ್ತಿವೆ ನಡೆದ ಘಟನೆಗಳುನಿಜವಾಗುತ್ತಿದೆಯಾ ಬಾಬಾ ವಂಗಾ 2022ರ ಬಗ್ಗೆ ಹೇಳಿದ ಭವಿಷ್ಯ?: ಹೌದು ಎನ್ನುತ್ತಿವೆ ನಡೆದ ಘಟನೆಗಳು

ಪೋರ್ಚುಗಲ್ ಪ್ರವಾಸಕ್ಕೆ ತೆರಳಿದ್ದ ಭಾರತೀಯ ಮಹಿಳೆಗೆ ತುರ್ತು ಸಿಸೇರಿಯನ್ ನಂತರ ಆಕೆಯ ಮಗುವನ್ನು ಹೆರಿಗೆ ಮಾಡಲಾಗಿತ್ತು. ಆದರೆ ಮಹಿಳೆಯ ಸಾವಿನ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನಿಯಿಂದ ಆರೋಗ್ಯ ಸಚಿವೆ ರಾಜೀನಾಮೆ ಅಂಗೀಕಾರ

ಪ್ರಧಾನಿಯಿಂದ ಆರೋಗ್ಯ ಸಚಿವೆ ರಾಜೀನಾಮೆ ಅಂಗೀಕಾರ

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದೇಶದ ಲಸಿಕೆ ವಿತರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾರ್ಟಾ ಟೆಮಿಡೊ, ವೈದ್ಯರ ಕೊರತೆಯಿಂದಾಗಿ ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರ ಮಾಡಿದ್ದರು. ಈ ನಿರ್ಧಾರದಿಂದಲೇ ಭಾರೀ ಹಿನ್ನಡೆಯನ್ನು ಎದುರಿಸಿದರು. ಹೀಗಾಗಿ ತಮ್ಮ ಸ್ಥಾನಕ್ಕೆ ಟೆಮಿಡೋ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಪ್ರಧಾನಮಂತ್ರಿ ಆಂಟೋನಿಯೊ ಕೋಸ್ಟಾ ಹೇಳಿದ್ದಾರೆ.

ಈ ಹಿಂದೆ ಟೆಮಿಡೊ ಕಾರ್ಯವೈಖರಿಯ ಬಗ್ಗೆ ಧನ್ಯವಾದಗಳನ್ನು ಅರ್ಪಿಸಿದ ಅವರು, ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಸರ್ಕಾರವು ಸುಧಾರಣೆಗಳೊಂದಿಗೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ರಾಜೀನಾಮೆ ಪಡೆಯುವುದರ ಹಿಂದಿನ ಕಾರಣವೇನು?

ರಾಜೀನಾಮೆ ಪಡೆಯುವುದರ ಹಿಂದಿನ ಕಾರಣವೇನು?

ಭಾರತೀಯ ಪ್ರವಾಸಿ ಗರ್ಭಿಣಿಯೊಬ್ಬರ ಸಾವಿನ ಪ್ರಕರಣವೊಂದೇ ಆರೋಗ್ಯ ಸಚಿವೆ ಟೆಮಿಡೋ ರಾಜೀನಾಮೆಗೆ ಕಾರಣವಾಯಿತೇ ಎಂದರೆ ಅದು ಸುಳ್ಳಾಗುತ್ತದೆ. ಏಕೆಂದರೆ ಪೋರ್ಚುಗಲ್‌ನ ಲೂಸಾ ಸುದ್ದಿ ಸಂಸ್ಥೆ ಪ್ರಕಾರ, ಇತ್ತೀಚಿನ ಮಹಿಳೆಯ ಸಾವಿನ ಪ್ರಕರಣವು ಟೆಮಿಡೋ ರಾಜೀನಾಮೆಗೆ ಒಂದು ಕ್ಷುಲ್ಲಕ ಕಾರಣವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕೂ ಪೂರ್ವದಲ್ಲಿ ಇದೇ ರೀತಿಯ ಸಮಸ್ಯೆಗಳಿಂದ ಸಾವಿನ ಪ್ರಕರಣಗಳು ವರದಿಯಾಗಿದ್ದವು. ತಾಯಂದಿರನ್ನು ಆಸ್ಪತ್ರೆಯಿಂದ ಶಿಫ್ಟ್ ಮಾಡುವ ಮಾರ್ಗಮಧ್ಯದಲ್ಲಿಯೇ ಸಾವುಗಳು ಸಂಭವಿಸಿವೆ. ಇನ್ನು ವೈದ್ಯಕೀಯ ವ್ಯವಸ್ಥೆಯಲ್ಲಿನ ಲೋಪ-ದೋಷಗಳಿಂದ ಹಾಗೂ ವಿಳಂಬದಿಂದಾಗಿ ಎರಡು ಶಿಶುಗಳು ಅಸುನೀಗಿರುವುದು ಗೊತ್ತಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಸಚಿವೆಯಿಂದ ರಾಜೀನಾಮೆಯನ್ನು ಪಡೆದುಕೊಳ್ಳಲಾಗಿದೆ ಎಂದು ಜಾಗತಿಕ ಮಾಧ್ಯಮಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ.

ಆರೋಗ್ಯ ಸಚಿವೆಯ ಬಗ್ಗೆ ಪ್ರಧಾನಿ ಟ್ವೀಟ್

ಆರೋಗ್ಯ ಸಚಿವೆಯ ಬಗ್ಗೆ ಪ್ರಧಾನಿ ಟ್ವೀಟ್

ಪೋರ್ಚುಗಲ್ ಮಾಜಿ ಆರೋಗ್ಯ ಸಚಿವೆ "ಡಾ. ಮಾರ್ಟಾ ಟೆಮಿಡೊ ಈ ಹಿಂದೆ ಕೈಗೊಂಡ ಎಲ್ಲಾ ಕಾರ್ಯಗಳಿಗೆ ನಾನು ಕೃತಜ್ಞನಾಗಿದ್ದೇನೆ. ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸುವ ಅಸಾಧಾರಣ ಅವಧಿಯಲ್ಲಿ ಸರ್ಕಾರವನ್ನು ಬಲಪಡಿಸುವ ಮತ್ತು ಪೋರ್ಚುಗೀಸರಿಗೆ ಒದಗಿಸಲಾದ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ನಡೆಯುತ್ತಿರುವ ಸುಧಾರಣೆಗಳನ್ನು ಮುಂದುವರೆಸಿದೆ," ಎಂದು ಪ್ರಧಾನಮಂತ್ರಿ ಆಂಟೋನಿಯೊ ಕೋಸ್ಟಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕೋವಿಡ್ ಕಾಲದಲ್ಲಿ ಗುಡ್, ಹೆರಿಗೆ ವ್ಯವಸ್ಥೆಯಲ್ಲಿ ಬ್ಯಾಡ್

ಕೋವಿಡ್ ಕಾಲದಲ್ಲಿ ಗುಡ್, ಹೆರಿಗೆ ವ್ಯವಸ್ಥೆಯಲ್ಲಿ ಬ್ಯಾಡ್

ಪೋರ್ಚುಗಲ್ ನೆಲದಲ್ಲಿ ಹಲವು ಹೆರಿಗೆ ಘಟಕಗಳು ಬಂದ್ ಆಗಿರುವುದರಿಂದ ಚಾಲ್ತಿಯಲ್ಲಿರುವ ಕೆಲವೇ ಕೆಲವು ಆಸ್ಪತ್ರೆಯ ಹೆರಿಗೆ ವಿಭಾಗಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗೆ ಗಂಟೆಗಟ್ಟಲೇ ಹೆರಿಗೆ ಘಟಕದ ಮುಂದೆ ಕಾದುನಿಂತಿರುವುದೇ ಮಹಿಳೆಯ ಸಾವಿಗೆ ಕಾರಣವಾಗಿದೆ. ಗರ್ಭಿಣಿಯರು ಇಂಥ ಆಸ್ಪತ್ರೆಗಳಿಗೆ ಹೋಗುವುದೇ ಅಪಾಯಕಾರಿಯಾಗಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಕಳೆದ 2018ರಲ್ಲಿ ಆರೋಗ್ಯ ಮಂತ್ರಿಯಾದ ಮಾರ್ಟಾ ಟೆಮಿಡೊ, ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕೇಂದ್ರ-ಎಡ ಸಮಾಜವಾದಿ ಸರ್ಕಾರದ ಅತ್ಯಂತ ಜನಪ್ರಿಯ ಸದಸ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ಆರೋಗ್ಯ ಸಿಬ್ಬಂದಿಯ ಕೊರತೆಯಿಂದ ವಿಶೇಷವಾಗಿ ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿಶಾಸ್ತ್ರದಲ್ಲಿ ಪರಿಣತಿ ಹೊಂದಿರುವವರು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಇತರ ಸಮಸ್ಯೆಗಳಿಂದ ಆಕೆಯ ರೇಟಿಂಗ್‌ಗಳು ಕೆಟ್ಟದಾಗಿದೆ.

English summary
Portugal health minister Marta Temido resigned after pregnant Indian tourist dies. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X