ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ಬಗ್ಗೆ ಪೋಪ್ ಬಾಯ್ಬಿಟ್ಟ ಸತ್ಯವೇನು?

By Mahesh
|
Google Oneindia Kannada News

ರೋಮ್, ಅ.29: ಡಾರ್ವಿನ್ನಿನ ವಿಕಾಸವಾದ ಮತ್ತು ಬಿಗ್ ಬ್ಯಾಂಗ್ ಸಿದ್ಧಾಂತಗಳು ನಿಜ. ಜಗತ್ತು ದೇವರ ಸೃಷ್ಟಿ ಎನ್ನಲಾಗುವುದಿಲ್ಲ ದೇವರೇನು ಮಾಂತ್ರಿಕನಲ್ಲ ಎಂದು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ನೀಡಿರುವ ಹೇಳಿಕೆ ಈಗ ಚರ್ಚಾಸ್ಪದವಾಗಿದೆ.

ಪೊಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಪೋಪ್ ಬೆನೆಡಿಕ್ಟ್ ‍XVI ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ದೇವರ ಕುರಿತು ನಾವು ಚಿಂತಿಸುವಾಗ ಆತನೊಬ್ಬ ಮಾಂತ್ರಿಕ. ಮಂತ್ರದಂಡ ಹಿಡಿದು ಇಡೀ ವಿಶ್ವವನ್ನು ದೇವರೊಬ್ಬನೇ ಸೃಷ್ಟಿಸಿದನು ಎಂದು ತಿಳಿದಿದ್ದೇವೆ. ಆದರೆ ಇದು ನಿಜವಲ್ಲ ಎಂದಿದ್ದಾರೆ. [ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು?]

Pope says Big Bang theory does not contradict Christianity

ಮಾನವ ಮತ್ತು ಇತರ ಜೀವ ಸಂಕುಲದ ಬೆಳವಣಿಗೆಯೂ ಸಹ ವಿಕಾಸವಾದ ಪ್ರತಿಪಾದಿಸಿದ ರೀತಿಯಲ್ಲಿ ಆಗಿದೆಯೇ ಹೊರತು, ಎಲ್ಲವೂ ಒಮ್ಮಿಂದೊಮ್ಮೆಲೆ ಸೃಷ್ಟಿಯಾಗಿಲ್ಲ. ಸೃಷ್ಟಿ ನಿಯಮ ಕುರಿತ ದೈವಿಕ ಸಿದ್ಧಾಂತಗಳು ಕೇವಲ ಕಾಲ್ಪನಿಕ.ದೇವರು ಮಾನವರನ್ನು ಸೃಷ್ಟಿಸಿದ ಹಾಗೂ ಆಂತರಿಕ ನಿಯಮಗಳಂತೆ ಅಭಿವೃದ್ಧಿ ಹೊಂದಲು ಬಿಟ್ಟ. ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವಂತೆ ಈ ನಿಯಮಗಳನ್ನು ಅವನು ಎಲ್ಲರಿಗೂ ಕೊಟ್ಟನು ಎಂದು ಹೇಳುವ ಮೂಲಕ ಚಾರ್ಲ್ಸ್ ಡಾರ್ವಿನ್ ವಿಕಾಸವಾದಕ್ಕೆ ಪುಷ್ಟಿ ನೀಡುವ ಮಾತುಗಳನ್ನಾಡಿದ್ದರು.[ದೇವಕಣ ವಿಶ್ವವನ್ನೇ ನಾಶ ಮಾಡಬಲ್ಲದೆ?]

ಪೋಪ್ ಅವರ ಹೇಳಿಕೆಯಿಂದ ವೈಜ್ಞಾನಿಕ ವಾದಗಳನ್ನು ತಿರಸ್ಕರಿಸುತ್ತಾ ಬಂದಿದ್ದ ಕ್ಯಾಥೋಲಿಕ್ ಚರ್ಚ್, ತನ್ನ ಮತ್ತೊಂದು ನಂಬಿಕೆಯನ್ನು ಬದಲಿಸಿಕೊಂಡಿದೆಯೇ? ವಿಕಾಸವಾದ, ಬಿಗ್ ಬ್ಯಾಂಗ್ ಥಿಯರಿ ಒಪ್ಪಿಕೊಳ್ಳುವ ಮೂಲಕ ಭೂಮಿಯ ವೈಜ್ಞಾನಿಕ ಹುಟ್ಟಿನ ರಹಸ್ಯಕ್ಕೆ ತಲೆಬಾಗಿದೆಯೆ? ಇದರಿಂದಾಗಿ ದೇವರ ಬಗ್ಗೆ ಕ್ರೈಸ್ತರಲ್ಲಿರುವ ನಂಬಿಕೆ ಬದಲಾಗುತ್ತದೆಯೆ? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ.[ಹಸ್ತಮೈಥುನ, ಸಲಿಂಗಕಾಮಕ್ಕೆ ವ್ಯಾಟಿಕನ್ ಗರಂ]

ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಸಿದ್ದಾಂತ ಪ್ರತಿಪಾದಿಸಿದ್ದ ಖಗೋಳ ವಿಜ್ಞಾನಿ ಗೆಲಿಲಿಯೊಗೆ 'ದೈವನಿಂದನೆ' ಸಿದ್ಧಾಂತವನ್ನು ಹಿಂದಕ್ಕೆ ಪಡೆಯುವಂತೆ ಗೆ ಚರ್ಚ್ ಒತ್ತಡ ಹೇರಿ ಬಹಿಷ್ಕರಿಸಿದ್ದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಅದರೆ, ಈಗ ಚರ್ಚ್ ನಂಬಿಕೆಗಳು ಬದಲಾವಣೆಯ ಹಾದಿ ಹಿಡಿಯುವಂಥ ಹೇಳಿಕೆಗಳನ್ನು ಪೋಪ್ ನೀಡಿದ್ದಾರೆ.

English summary
Pope Francis said that the "Big Bang" theory as a model for the origin of the Universe "does not rule out the intervention of a divine Creator, but rather demands it" and that "the origin of the world is not a product of chaos, but is derived directly from the supreme power that created love."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X