ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಕೈ ಹಿಡಿದು ಎಳೆದ ಯುವತಿ!

|
Google Oneindia Kannada News

ವ್ಯಾಟಿಕನ್ ಸಿಟಿ, ಜನವರಿ 1: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಕೈಯನ್ನು ಯುವತಿಯೊಬ್ಬಳು ಹಿಡಿದು ಎಳೆದಿರುವ ಘಟನೆ ವ್ಯಾಟಿಕನ್ ಸಿಟಿಯಲ್ಲಿ ನಡೆದಿದೆ.

ಹೊಸ ವರ್ಷವನ್ನು ಸ್ವಾಗತಿಸಲು ವ್ಯಾಟಿಕನ್ ಸಿಟಿಯ (ಇಟಲಿ) ಸೇಂಟ್ ಪೀಟರ್ ಸ್ಕ್ವೇರ್ ನಲ್ಲಿ ಭಾರೀ ಸಂಖ್ಯೆಯ ಜನ ಹಾಗೂ ಪೋಪ್ ಭಕ್ತರು ನೆರದಿದ್ದರು. ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ನೆರದಿದ್ದ ಜನಸ್ತೋಮಕ್ಕೆ ಶುಭಾಶಯ ಕೋರುತ್ತಾ ಬರುತ್ತಿದ್ದರು. ಇದೇ ವೇಳೆ ಯುವತಿಯೊಬ್ಬಳು ಪೋಪ್ ಅವರ ಕೈ ಹಿಡಿದುಕೊಂಡು ಜೋರಾಗಿ ಎಳೆದಿದ್ದಾಳೆ. ಇದರಿಂದ ತೀವ್ರ ಕೋಪಗೊಂಡ ಪೋಪ್ ತಕ್ಷಣವೇ ಆ ಯುವತಿಯ ಕೈಗೆ ಹೊಡೆದು ತಮ್ಮ ಕೈ ಬಿಡಿಸಿಕೊಂಡರು. ಈ ದೃಶ್ಯ ಈಗ ವೈರಲ್ ಆಗಿದೆ.

ಸಂತ ಪದವಿಗೇರಿದ ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾಸಂತ ಪದವಿಗೇರಿದ ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ

ಯುವತಿ ಪೋಪ್ ಅವರ ಮೇಲೆ ಭಕ್ತಿಯಿಂದ ಈ ರೀತಿ ಮಾಡಿದ್ದಾಳೋ ಅಥವಾ ಇನ್ನಾವುದೋ ಉದ್ದೇಶದಿಂದ ಹಾಗೇ ಮಾಡಿದಳೋ ಮತ್ತು ಅವಳು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ಯುವತಿ ಕೈ ಹಿಡಿದು ಎಳೆದಾಗ ಪೋಪ್ ಗೆ ಕೈ ತುಂಬಾ ನೋವಾಗಿದ್ದರಿಂದ ಅವರು ಆ ರೀತಿ ಮಾಡಿದರು. ಅಷ್ಟೇ ಅಲ್ಲದೇ ಅದರಿಂದ ಪೋಪ್ ತೀವ್ರ ಮುಜುಗರಕ್ಕೆ ಒಳಗಾದರು ಎಂದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Pope Francis Slaps Girl Hand After She Pulled Pope Arm

ಪೋಪ್ ಫ್ರಾನ್ಸಿಸ್ ಅವರು 266 ನೇ ಕ್ರಿಶ್ಚಿಯನ್ ಪ್ರಧಾನ ಧರ್ಮ ಗುರುವಾಗಿದ್ದಾರೆ. ಇವರು ಇಟಲಿಗೆ ಹೊಂದಿಕೊಂಡು ಇರುವ ವ್ಯಾಟಿಕನ್ ಸಿಟಿ ದೇಶದಲ್ಲಿ ನೆಲಸಿರುತ್ತಾರೆ. ಪೋಪ್ ಫ್ರಾನ್ಸಿಸ್ ಯುರೋಪೇತರ ದೇಶದಿಂದ ಬಂದ ಮೊದಲ ಪೋಪ್ ಆಗಿದ್ದಾರೆ. ವಿಡಿಯೋ ಲಿಂಕ್

English summary
Pope Francis Slaps Girl Hand, After She Pulled Pope Arm In Vatican City On New Year occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X