ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ವರ್ಷದ ವ್ಯಕ್ತಿ 2013 ಹೆಸರು ಪ್ರಕಟ: ಮೋದಿ?

|
Google Oneindia Kannada News

ತನ್ನ ಆನ್ ಲೈನ್ ಓದುಗರ ಮೂಲಕ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡುವ ಟೈಮ್ಸ್ ಮ್ಯಾಗಜೀನ್ 2013ರ ಸಾಲಿನ ವರ್ಷದ ವ್ಯಕ್ತಿಯನ್ನಾಗಿ ವ್ಯಾಟಿಕನ್ನಿನ ಪೋಪ್ ಫ್ರಾನ್ಸಿಸ್ ಅವರನ್ನು ಆಯ್ಕೆ ಮಾಡಿದೆ.

ಈ ಹೆಗ್ಗಳಿಕೆಗೆ ಪಾತ್ರವಾಗಲು ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಮಾಜಿ ಕಾಂಟ್ರ್ಯಾಕ್ಟರ್ ಎಡ್ವರ್ಡ್ ಸ್ನೋಡೆನ್ ತೀವ್ರ ಪೈಪೋಟಿ ನೀಡಿದ್ದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೂಡಾ ಸ್ಪರ್ಧೆಯಲ್ಲಿದ್ದರು. (ಟೈಮ್ಸ್ ವರ್ಷದ ವ್ಯಕ್ತಿ ಪಟ್ಟಿಯಲ್ಲಿ ನರೇಂದ್ರ ಮೋದಿ)

ತನ್ನ ಒಂಬತ್ತು ತಿಂಗಳ ಅಧಿಕಾರದ ಅವಧಿಯಲ್ಲಿ ಪೋಪ್ ಫ್ರಾನ್ಸಿಸ್ ಗಮನಾರ್ಹ ಸಾಧನೆ ಮಾಡಿ, ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಡವರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಫ್ರಾನ್ಸಿಸ್ ಜಾಗತೀಕರಣ, ಸಮಾನತೆ, ಪಾರದರ್ಶಕತೆಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು ಎಂದು ಟೈಮ್ಸ್ ಮ್ಯಾಗಜೀನಿನ ಮುಖ್ಯ ಸಂಪಾದಕಿ ನ್ಯಾನ್ಸಿ ಗಿಬ್ಸ್ ಹೇಳಿದ್ದಾರೆ. (ಅಪ್ರಾಪ್ತರ ಜತೆ ಸೆಕ್ಸ್ ಪ್ರಕರಣ, ಪೋಪ್ ಮೌನ?)

ಎಡ್ವರ್ಡ್ ಸ್ನೋಡೆನ್ ರನ್ನರ್ ಅಪ್ ಸ್ಥಾನ ಪಡೆದು ಕೊಂಡಿದ್ದಾರೆ. ಪೋಪ್ ಒಬ್ಬರಿಗೆ ಟೈಮ್ಸ್ ಮ್ಯಾಗಜೀನಿನ ಪ್ರಶಸ್ತಿ ಲಭಿಸುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಪೋಪ್ ಜಾನ್ ಪಾಲ್ II ಮತ್ತು ಜಾನ್ XXII ಅವರು ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಫ್ರಾನ್ಸಿಸ್ ಅವರಿಗೆ 25,891 ಮತ್ತು ಎಡ್ವರ್ಡ್ ಸ್ನೋಡೆನ್ ಅವರಿಗೆ 5,374 ಮತಗಳು ಬಿದ್ದಿವೆ. (ಜಾರ್ಗ್ ಮಾರಿಯೊ ಬೆರ್ಗೋಗ್ಲಿಯೋ 266ನೇ ಪೋಪ್)

ಪೋಪ್ ಫ್ರಾನ್ಸಿಸ್ ಮತ್ತು ಎಡ್ವರ್ಡ್ ಸ್ನೋಡೆನ್ ನಂತರ ಪ್ರಶಸ್ತಿ ಸುತ್ತಿನಲ್ಲಿದ್ದ ಹತ್ತು ಜನರ ಪೈಕಿ ಉಳಿದ ಎಂಟು ಮಂದಿಯಾರು? ಅವರಿಗೆ ಬಿದ್ದ ಮತಗಳೆಷ್ಟು ಸ್ಲೈಡಿನಲ್ಲಿ ನೋಡಿ..

ಮಿಲೇ ಸೈರಸ್

ಮಿಲೇ ಸೈರಸ್

ಅಮೆರಿಕಾದ ನಟಿ ಮತ್ತು ರೆಕಾರ್ಡಿಂಗ್ ಕಲಾವಿದೆ. ಒಟ್ಟು ಚಲಾವಣೆಯಾದ 43,640 ಮತಗಳಲ್ಲಿ ಸೈರಸ್ ಅವರಿಗೆ 3,204 ಮತಗಳು ಬಿದ್ದಿವೆ. (ಚಿತ್ರದಲ್ಲಿ ಪೋಪ್ ಫ್ರಾನ್ಸಿಸ್)

ಟೆಡ್ ಕ್ರುಜ್

ಟೆಡ್ ಕ್ರುಜ್

ಅಮೆರಿಕಾದ ಸೆನೆಟರ್ ಟೆಕ್ಸಾಸ್ ನಗರದ ಟೆಡ್ ಕ್ರುಜ್ ಅವರಿಗೆ ಒಟ್ಟು ಚಲಾವಣೆಯಾದ 43,640 ಮತಗಳಲ್ಲಿ ಸೈರಸ್ ಅವರಿಗೆ 2,868 ಮತಗಳು ಬಿದ್ದಿವೆ. (ಚಿತ್ರದಲ್ಲಿ ಕ್ರುಜ್ ಎಡದಿಂದ ಮೊದಲನೆಯವರು)

ಬರಾಕ್ ಒಬಾಮ

ಬರಾಕ್ ಒಬಾಮ

ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಒಟ್ಟು ಚಲಾವಣೆಯಾದ 43,640 ಮತಗಳಲ್ಲಿ ಸೈರಸ್ ಅವರಿಗೆ 1,877 ಮತಗಳು ಬಿದ್ದಿವೆ.

ಎಡಿತ್ ವಿಂಡ್ಸರ್

ಎಡಿತ್ ವಿಂಡ್ಸರ್

ಅಮೆರಿಕಾದ ಸಲಿಂಗಕಾಮಿ ಸಂಘಟನೆಯ ಕಾರ್ಯಕರ್ತರಾದ ಇವರಿಗೆ ಒಟ್ಟು ಚಲಾವಣೆಯಾದ 43,640 ಮತಗಳಲ್ಲಿ ಸೈರಸ್ ಅವರಿಗೆ 1,367 ಮತಗಳು ಬಿದ್ದಿವೆ. (ಚಿತ್ರದಲ್ಲಿ ಪೋಪ್ ಫ್ರಾನ್ಸಿಸ್)

ಜೆಫ್ ಬೆಜೊಸ್

ಜೆಫ್ ಬೆಜೊಸ್

ಅಮೆರಿಕಾದ ಅಂತರ್ಜಾಲ ಮಾಧ್ಯಮದ ಉದ್ಯಮಿ ಮತ್ತು ಹೂಡಿಕೆದಾರ. amazone.comನ ಸಂಸ್ಥಾಪಕ ಅಧ್ಯಕ್ಷ. ಒಟ್ಟು ಚಲಾವಣೆಯಾದ 43,640 ಮತಗಳಲ್ಲಿ ಸೈರಸ್ ಅವರಿಗೆ 1,223 ಮತಗಳು ಬಿದ್ದಿವೆ. (ಚಿತ್ರದಲ್ಲಿ ಪೋಪ್ ಫ್ರಾನ್ಸಿಸ್)

ಹಸನ್ ರಹಾನಿ

ಹಸನ್ ರಹಾನಿ

ಇರಾನ್ ದೇಶದ ಏಳನೇ ಅಧ್ಯಕ್ಷ. ಒಟ್ಟು ಚಲಾವಣೆಯಾದ 43,640 ಮತಗಳಲ್ಲಿ ಸೈರಸ್ ಅವರಿಗೆ 897 ಮತಗಳು ಬಿದ್ದಿವೆ. (ಚಿತ್ರದಲ್ಲಿ ಹಸನ್ ರಹಾನಿ)

ಬಶರ್-ಅಲ್-ಅಷದ್

ಬಶರ್-ಅಲ್-ಅಷದ್

ಸಿರಿಯಾ ದೇಶದ ಅಧ್ಯಕ್ಷ ಒಟ್ಟು ಚಲಾವಣೆಯಾದ 43,640 ಮತಗಳಲ್ಲಿ ಸೈರಸ್ ಅವರಿಗೆ 597 ಮತಗಳು ಬಿದ್ದಿವೆ.(ಚಿತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ಎಡ್ವರ್ಡ್ ಸ್ನೋಡೆನ್ - ಮಧ್ಯದಲ್ಲಿ)

ಕ್ಯಾಥಿನೇನ್ ಸೆಬ್ಲಿಯಸ್

ಕ್ಯಾಥಿನೇನ್ ಸೆಬ್ಲಿಯಸ್

ಅಮೆರಿಕಾದ ಕಾನಾಸಿನ ರಾಜ್ಯಪಾಲರಾಗಿದ್ದ ಇವರು ಈಗ ಅಮೆರಿಕಾ ಸರಕಾರದ ಆರೋಗ್ಯ ಇಲಾಖೆಯ ಕಾರ್ಯದರ್ಶಿ. ಒಟ್ಟು ಚಲಾವಣೆಯಾದ 43,640 ಮತಗಳಲ್ಲಿ ಸೈರಸ್ ಅವರಿಗೆ 342 ಮತಗಳು ಬಿದ್ದಿವೆ. (ಚಿತ್ರದಲ್ಲಿ ಒಬಾಮ ಬಲಕ್ಕೆ ಮೊದಲನೆವರ್ಯ್ - ಕ್ಯಾಥಿನೇನ್)

English summary
Pope Francis the first Jesus pointiff named Times person of the year 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X