ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗ ಸಂಬಂಧಕ್ಕೆ ಬೆಂಬಲ ನೀಡಿದ ಪೋಪ್ ಫ್ರಾನ್ಸಿಸ್

|
Google Oneindia Kannada News

ವ್ಯಾಟಿಕನ್ ಸಿಟಿ, ಅಕ್ಟೋಬರ್ 22: ಸಲಿಂಗ ಸಂಬಂಧಗಳಿಗೆ ವಿವಿಧ ಧರ್ಮಗಳಲ್ಲಿ ಧರ್ಮಗುರುಗಳು ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಸ್ಥಾನಕ್ಕೆ ಬಂದ ಸಂದರ್ಭದಿಂದಲೂ ಸಲಿಂಗ ಸಂಬಂಧದ ಬಗ್ಗೆ ಮೃದು ಧೋರಣೆ ಪ್ರದರ್ಶಿಸುತ್ತಿರುವ ಪೋಪ್ ಫ್ರಾನ್ಸಿಸ್, ಬುಧವಾರ ಪ್ರಸಾರವಾದ ಹೊಸ ಸಾಕ್ಷ್ಯಚಿತ್ರವೊಂದರಲ್ಲಿ ಸಲಿಂಗ ಸಂಬಂಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಡಿವಂತ ಕ್ಯಾಥೊಲಿಕ್ ದೇಶ ಈಕ್ವೆಡಾರ್ ನಲ್ಲಿ ಸಲಿಂಗಿ ಮದುವೆಗೆ ಕೋರ್ಟ್ ಒಪ್ಪಿಗೆಮಡಿವಂತ ಕ್ಯಾಥೊಲಿಕ್ ದೇಶ ಈಕ್ವೆಡಾರ್ ನಲ್ಲಿ ಸಲಿಂಗಿ ಮದುವೆಗೆ ಕೋರ್ಟ್ ಒಪ್ಪಿಗೆ

ಎಲ್‌ಜಿಬಿಟಿ ಸಮುದಾಯದ ಜನರು ಒಂದು ಕುಟುಂಬದಂತೆ ಇರಲು ಅವಕಾಶ ನೀಡುವಂತಹ ಸಾಮಾನ್ಯ ನಾಗರಿಕ ಒಕ್ಕೂಟ ಕಾನೂನನ್ನು ಜಾರಿಗೆ ತರುವಂತೆಯೂ ಅವರು ಆಗ್ರಹಿಸಿದ್ದಾರೆ. 'ಸಲಿಂಗ ಸಂಬಂಧಕ್ಕೆ ಒಳಗಾಗುವವರು ದೇವರ ಮಕ್ಕಳು. ಅವರಿಗೂ ತಮ್ಮದೇ ಕುಟುಂಬ ಹೊಂದುವ ಹಕ್ಕು ಇರುತ್ತದೆ' ಎಂದು ಪೋಪ್ ಫ್ರಾನ್ಸಿಸ್ ಅವರ ಹೇಳಿಕೆಯನ್ನು ಒಳಗೊಂಡಿರುವ 'ಫ್ರಾನ್ಸೆಸ್ಕೋ' ಸಾಕ್ಷ್ಯಚಿತ್ರವು ರೋಮ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿದೆ.

 Pope Francis Endorses Same Sex Civil Unions

'ಸಲಿಂಗ ಸಂಬಂಧ ಇದೆ ಎಂಬ ಕಾರಣಕ್ಕೆ ಯಾರನ್ನೂ ಹೊರ ಹಾಕುವಂತಿಲ್ಲ ಮತ್ತು ಅದರಿಂದ ಆಕ್ರೋಶಗೊಳ್ಳುವಂತದ್ದೇನೂ ಇಲ್ಲ. ಅವರಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಸಲುವಾಗಿ ಸಮಗ್ರವಾಗಿ ಅನ್ವಯವಾಗುವ ನಾಗರಿಕ ಕಾನೂನನ್ನು ನಾವು ತಯಾರಿಸಬೇಕಿದೆ. ನಾನು ಅದಕ್ಕೆ ಅನುಮೋದನೆ ನೀಡುತ್ತೇನೆ' ಎಂದು ಪೋಪ್ ಹೇಳಿದ್ದಾರೆ.

ಏಷ್ಯಾದಲ್ಲೇ ಸಲಿಂಗಿಗಳ ಮೊದಲ ಕಾನೂನು ಬದ್ಧ ಮದುವೆಏಷ್ಯಾದಲ್ಲೇ ಸಲಿಂಗಿಗಳ ಮೊದಲ ಕಾನೂನು ಬದ್ಧ ಮದುವೆ

ಸಲಿಂಗ ಸಂಬಂಧಗಳ ಪರ ಪೋಪ್ ಒಲವು ವ್ಯಕ್ತಪಡಿಸಿದ್ದರೂ ಅವರು ಸಲಿಂಗ ವಿವಾಹಕ್ಕೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ವಿವಿಧ ದೇಶಗಳಲ್ಲಿ ಕ್ಯಾಥಲಿಕ್ ಚರ್ಚ್‌ಗಳು ಸಲಿಂಗ ಸಂಬಂಧಕ್ಕೆ ಕುರಿತಾದ ಕಾನೂನುಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಈಗ ಪೋಪ್ ಹೇಳಿಕೆ ಎಲ್‌ಜಿಬಿಟಿ ಸಮುದಾಯಕ್ಕೆ ಬೆಂಬಲ ಸಿಕ್ಕಂತಾಗಿದೆ.

English summary
Pope Francis calls homosexuals were children of god and endorses same sex civil unions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X