ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದರ್ ತೆರೆಸಾರನ್ನು 'ಸಂತ' ಪದವಿಗೇರಿಸಿದ ಪೋಪ್

By Mahesh
|
Google Oneindia Kannada News

ವ್ಯಾಟಿಕನ್ ಸಿಟಿ, ಸೆ. 04: ನೊಬೆಲ್ ಶಾಂತಿ ಪಾರಿತೋಷಕ ಪುರಸ್ಕೃತ ಮದರ್ ತೆರೆಸಾ ಅವರನ್ನು 'ಸಂತ' ಪದವಿಗೇರಿಸಲಾಗಿದೆ. ವ್ಯಾಟಿಕನ್ ಸಿಟಿ ಚರ್ಚ್ ನಲ್ಲಿ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಫ್ರಾನ್ಸಿಸ್ ಅವರು ಮದರ್ ತೆರೆಸಾರನ್ನು 'ಸಂತ' ಪದವಿಗೇರಿಸುವ ಸಮಾರಂಭಕ್ಕೆ ಚಾಲನೆ ನೀಡಿದ್ದಾರೆ.

ಮದರ ತೆರೆಸಾ ಅವರ 19ನೇ ಪುಣ್ಯ ಸ್ಮರಣೆಯ ಪ್ರಯುಕ್ತ ವ್ಯಾಟಿಕನ್ ಸಿಟಿಯಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಕ್ರೈಸ್ತರ ಸಭೆಯಲ್ಲಿಯೇ ಮದರ್ ತೆರೆಸಾ ಅವರಿಗೆ ಸಂತ ಪದವಿ ನೀಡಲು ತೀರ್ಮಾನ ಮಾಡಿಕೊಳ್ಳಲಾಗಿತ್ತು. [ಮದರ್ ತೆರೆಸಾ ಹೆಸರಿನ ಅನಾಥಾಶ್ರಮಗಳು ಇನ್ನಿಲ್ಲ]

Mother Teresa declared a saint today by Pope Francis at St. Peter's Square during the Sunday Mass. Pope is making Mother Teresa the model for his Holy Year of Mercy.

1997ರಲ್ಲಿ 87 ವರ್ಷ ವಯಸ್ಸಿನಲ್ಲಿ ಇಹಲೋಕ ವ್ಯಾಪಾರ ಮುಗಿಸಿದ ಮದರ್ ತೆರೆಸಾರನ್ನು 2003ರಲ್ಲಿ ಸಂತ ಪದವಿಗೇರಿಸಲು ನಿರ್ಧರಿಸಲಾಯಿತು. ಅಂದಿನ ಪೋಪ್ ಜಾನ್ ಪಾಲ್ ಅವರು ಮತ್ತೊಂದು ಬಾರಿ ಮದರ್ ತೆರೆಸಾ ಹೆಸರಿನಲ್ಲಿ ಪವಾಡ ಸಂಭವಿಸಿದರೆ ಅವರನ್ನು ನಿಯಮದ ಪ್ರಕಾರ 'ಸಂತರೆಂದು' ಕರೆಯಲಾಗುತ್ತದೆ ಎಂದಿದ್ದರು. [#FraudTeresa ಟ್ರೆಂಡಿಂಗ್ ಏಕೆ? ತೆರೆಸಾ ಅಸಲಿಯತ್ತೇನು?]

1910ರಲ್ಲಿ ಅಂಜೆಜ್ಸ್ ಗೊನ್ಜೆ ಬೊಜಾಕ್ಸಿಯು ಆಗಿ ಅಲ್ಬೇನಿಯಾ ದಂಪತಿಗೆ ಜನಿಸಿದ ತೆರೆಸಾ ಅವರು ಭಾರತದ ಕಲ್ಕತ್ತಾ (ಇಂದಿನ ಕೋಲ್ಕತ್ತಾ) ಗೆ ಬಂದು ಬಡವರು, ನಿರ್ಗತಿಕರಿಗೆ ವೈದ್ಯಕೀಯ ನೆರವು ಆಶ್ರಯ ನೀಡಿ 'ಕೊಳಗೇರಿಯ ಸಂತ' ಎನಿಸಿಕೊಂಡಿದ್ದರು.

ಸಂತ ಪದವಿಗೆ ಅರ್ಹತೆ: 2002ರಲ್ಲಿ ಬೆಂಗಾಳಿ ಬುಡಕಟ್ಟು ಜನಾಂಗದ ಮಹಿಳೆ ಮೋನಿಕಾ ಬೆಸ್ರಾ ಅವರು ಕಿಬ್ಬೊಟ್ಟೆಯಲ್ಲಿ ಟ್ಯೂಮರ್ ಗುಣಮುಖವಾಗಿದ್ದು, ಮದರ್ ಅವರ ಸ್ಮರಣೆಯಿಂದ ಎಂದು ನಂಬಲಾಗಿದೆ.


2015ರಲ್ಲಿ ಬ್ರೆಜಿಲ್ಲಿನ ವ್ಯಕ್ತಿಯೊಬ್ಬನ ಟ್ಯೂಮರ್ ಕಾಯಿಲೆ ಇನ್ನಿಲ್ಲವಾಗಲು ಮದರ್ ಕಾರಣ ಎಂದು ನಂಬಿದ ಪೋಪ್ ಅವರು ಸಂತ ಪದವಿಗೆ ಗ್ರೀನ್ ಸಿಗ್ನಲ್ ನೀಡಿದ್ದರು.

English summary
Mother Teresa declared a saint today(September 04) by Pope Francis at St. Peter's Square during the Sunday Mass. Pope is making Mother Teresa the model for his Holy Year of Mercy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X