ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆರಿಬಿಯನ್ ನಾಡಿನಲ್ಲಿ ರಾಜಕೀಯ ಹೈಡ್ರಾಮಕ್ಕೆ ಕಾರಣವಾದ ಮೆಹುಲ್ ಚೋಕ್ಸಿ ಬಂಧನ

|
Google Oneindia Kannada News

ನವದೆಹಲಿ, ಜೂನ್ 1: ಭಾರತದ ವಂಚಕ ಉದ್ಯಮಿ ಮೆಹುಲ್ ಚೋಕ್ಸಿ ಡೊಮೆನಿಕಾದಲ್ಲಿ ಬಂಧನಕ್ಕೆ ಒಳಗಾದ ನಂತರ ಕೆರಿಬಿಯನ್ ದ್ವೀಪದಲ್ಲಿ ರಾಜಕೀಯ ಹೈಡ್ರಾಮ ಆರಂಭವಾಗಿದೆ. ಮೆಹುಲ್ ಚೋಕ್ಸಿ ನಾಪತ್ತೆ ಪ್ರಕರಣದಲ್ಲಿ ಡೊಮಿನಿಕಾ ಹಾಗೂ ಆಂಟಿಗುವಾ ಮತ್ತು ಬಾರ್ಬುಡಾ ಸರ್ಕಾರ ಭಾಗಿಯಾಗಿದೆ ಎಂದು ಅಲ್ಲಿನ ವಿರೋಧ ಪಕ್ಷಗಳು ಆರೋಪವನ್ನು ಮಾಡುತ್ತಿದ್ದು ಸರ್ಕಾರವೇ ಉದ್ಯಮಿಯ ಅಪಹರಣವನ್ನು ನಡೆಸಿದೆ ಎಂದಿದೆ.

Recommended Video

ಭಾರತದ ವಂಚಕ Mehul Choksi ಯನ್ನು ಅಪಹರಿಸಿ ಬಂಧಿಸಿದ್ದು ಯಾರು?? | Oneindia Kannada

ಡೊಮೆನಿಕಾದ ಪ್ರತಿಪಕ್ಷದ ನಾಯಕ ಲೆನಾಕ್ಸ್ ಲಿಂಟನ್ ಈ ವಿಚಾರವಾಗಿ ನೀಡಿರುವ ಹೇಳಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ. "ಭಾರತ ಮೂಲದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಆಂಟಿಗುವಾದಲ್ಲಿ ಅಪಹರಿಸಿ ಆತನ ಮೇಲೆ ಹಲ್ಲೆಯನ್ನು ನಡೆಸಿ ಆತನ ಇಚ್ಚೆಗೆ ವಿರುದ್ಧವಾಗಿ ಡೊಮೆನಿಕಾಗೆ ಕರೆತರಲಾಯಿತು. ಇದು ಡೊಮೆನಿಕಾದ ಪ್ರಧಾನ ಮಂತ್ರಿ ರೂಸ್‌ವೆಲ್ಟ್ ಸ್ಕೆರಿಟ್ ಅವರ ಆಡಳಿತದ ಪರಿಣಾಮವಾಗಿದೆ. ಈ ಘಟನೆ ಸಂಘಟಿತ ಅಪರಾಧಗಳಲ್ಲಿ ರೂಸ್‌ವೆಲ್ಟ್ ಅವರ ಸೂಚನೆಯಂತೆ ಸರ್ಕಾರದ ವಿಭಾಗಗಳೇ ಭಾಗಿಯಾಗುತ್ತವೆ ಎಂಬುದನ್ನು ಬಹಿರಂಗಗೊಳಿಸುತ್ತದೆ" ಎಂದು ಲಿಂಟನ್ ಆರೋಪಿಸಿದ್ದಾರೆ.

ಉದ್ಯಮಿ ಮೆಹುಲ್ ಚೋಕ್ಸಿ ಬಂಧನದ ಹಿಂದೆ ಪ್ರಣಯ ಪ್ರವಾಸದ ಕಥೆ!ಉದ್ಯಮಿ ಮೆಹುಲ್ ಚೋಕ್ಸಿ ಬಂಧನದ ಹಿಂದೆ ಪ್ರಣಯ ಪ್ರವಾಸದ ಕಥೆ!

ಇನ್ನು ಈ ಪ್ರಕರಣದಲ್ಲಿ ಭಾರತದ ಸರ್ಕಾರದ ಪಾತ್ರವೂ ಇದೆ ಎಂಬುದಾಗಿಯೂ ಲಿಂಟನ್ ಆರೋಪಿಸಿದ್ದಾರೆ. ಡೊಮೆನಿಕಾ, ಆಂಟಿಗುವಾ ಮತ್ತು ಭಾರತದ ಸ್ಪಷ್ಟ ಸಹಯೋಗದೊಂದಿಗೆ ಈ ಅಪಹರಣ ಮತ್ತು ಬಂಧನ ಪ್ರಹಸನ ನಡೆದಿದೆ. ಈ ವಿಚಾರ ಪೂರ್ವ ಕೆರಿಬಿಯನ್ ನಾಡಿನ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

Political tug of war in the Caribbean over Mehul Choksi drama

ಆದರೆ ಈ ಆರೋಪವನ್ನು ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಾಸ್ಟನ್ ಬ್ರೌನ್ ತಳ್ಳಿ ಹಾಕಿದ್ದಾರೆ. ಈ ಅಪಹರಣದಲ್ಲಿ ಸರ್ಕಾರ ಯಾವುದೇ ರೀತಿಯಲ್ಲಿಯೂ ಭಾಗಿಯಾಗಿಲ್ಲ ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ವಂಚನೆ ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಮೆಹುಲ್ ಚೋಕ್ಸಿ 2018ರ ಜನವರಿಯ ನಂತರ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಮೇ 23ರ ಬಳಿಕ ನಾಪತ್ತೆಯಾಗಿದ್ದ ಚೋಕ್ಸಿ ಬಳಿಕ ಡೊಮೆನಿಕಾದಲ್ಲಿ ಬಂಧಿಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಚೋಕ್ಸಿ ಮೇಲೆ ಕೈಯಲ್ಲಿ ಗಾಯದ ಕಲೆಗಳು ಇರುವ ಫೋಟೋಗಳು ವೈರಲ್ ಆಗಿತ್ತು. ಈಗ ಮೆಹುಲ್ ಚೋಕ್ಸಿಯನ್ನು ಅಪಹರಣ ಮಾಡಲಾಗಿತ್ತು ಎಂದು ಡೊಮೆನಿಕಾದ ವಿರೋಧ ಪಕ್ಷದ ಮುಖಂಡರು ಆರೋಪವನ್ನು ಮಾಡುತ್ತಿದ್ದಾರೆ.

English summary
Political tug of war in the Caribbean over fugitive businessman Mehul Choksi drama. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X