ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿ: ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದ ಪೊಲೀಸರಿಗೆ ಕಲ್ಲೇಟು

|
Google Oneindia Kannada News

ಫ್ರ್ಯಾಂಕ್‌ಫರ್ಟ್‌, ಏಪ್ರಿಲ್ 13: ಕೊರೊನಾ ವೈರಸ್ ಹರದಡಂತೆ ಎಚ್ಚರವಹಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಲು ಹೋದ ಪೊಲೀಸರಿಗೆ ಜರ್ಮನಿ ಜನತೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.

ಫ್ರ್ಯಾಂಕ್‌ಫರ್ಟ್‌ನಲ್ಲಿ ಘಟನೆ ನಡೆದಿದೆ. ಕಲ್ಲು ಹಾಗೂ ಕಬ್ಬಿಣದ ಬಾರ್‌ಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸುಮಾರು 20ಕ್ಕೂ ಹೆಚ್ಚು ಮಂದಿ ಕಾರುಗಳಲ್ಲಿ ಓಡಾಡುತ್ತಿದ್ದರು. ಅದರಲ್ಲಿ ಪೆಟ್ರೋಲ್ ಕಾರ್‌ ಒಂದನ್ನು ಪೊಲೀಸರು ತಡೆದಿದ್ದರು.

ತಕ್ಷಣವೇ ಒಂದು ಕಾರಿನಲ್ಲಿದ್ದವರು ಕಲ್ಲುಗಳನ್ನು ಪೊಲೀಸರು ಹಾಗೂ ಪೊಲೀಸರ ವಾಹನದ ಮೇಲೆ ಎಸೆದರು, ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾರೆ. ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

Police Attacked While Enforcing Social Distancing Measures

ವಾಹನದಿಂದ ಇಳಿದು ಸುಮಾರು 20 ಮಂದಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಲವು ಮಂದಿ ಕಲ್ಲುಗಳು, ಟೈಲ್ಸ್‌ಗಳು, ಐರನ್‌ಬಾರ್‌ಗಳನ್ನು ಎಸೆದರೆ ಇನ್ನು ಕೆಲವು ಮಂದಿ ಐದು ಕೆಜಿಯಷ್ಟು ತೂಕದ ಮೆಟಲ್ ಪ್ಲೇಟ್‌ನ್ನು ಎಸೆದಿದ್ದರು, ಆದರೆ ಅವರ ಟಾರ್ಗೆಟ್ ಮಿಸ್ ಆಗಿತ್ತು.

ಜರ್ಮನಿಯಲ್ಲಿ ಇದುವರೆಗೆ 1,27,854 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ.52,883 ಮಂದಿ ಗುಣಮುಖರಾಗಿದ್ದಾರೆ, 3022 ಮಂದಿ ಮೃತಪಟ್ಟಿದ್ದಾರೆ. ವಿಶ್ವದಾದ್ಯಂತ 18,50,220 ಮಂದಿಗೆ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ, 4,30,455 ಮಂದಿ ಗುಣಮುಖರಾಗಿದ್ದಾರೆ.1,14,215 ಮಂದಿ ಸಾವನ್ನಪ್ಪಿದ್ದಾರೆ.

English summary
The Frankfurter Allgemeine Zeitung reports that the police were set upon on several occasions when trying to break up large groups of men who had gathered on Good Friday in spite of coronavirus social distancing measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X