ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಸ್ ಏಂಜಲೀಸ್ : ಸೂಪರ್ ಮಾರ್ಕೆಟ್ ನಲ್ಲಿ ಅಡಗಿದ್ದ ಸಶಸ್ತ್ರಧಾರಿ ಬಂಧನ

By Mahesh
|
Google Oneindia Kannada News

ಲಾಸ್ ಏಂಜಲೀಸ್, ಜುಲೈ 22: ಇಲ್ಲಿನ ಸೂಪರ್ ಮಾರ್ಕೆಟ್ ವೊಂದರಲ್ಲಿ ಇಬ್ಬರನ್ನು ಹತ್ಯೆ ಮಾಡಿ, ಅಡಗಿ ಕುಳಿತ್ತಿದ್ದ ಸಶಸ್ತ್ರಧಾರಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ಕಲಹದಿಂದ ತನ್ನ ಅಜ್ಜಿಯನ್ನು ಕೊಂದ ವ್ಯಕ್ತಿ ನಂತರ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ, ಸೂಪರ್ ಮಾರ್ಕೆಟ್ ನಲ್ಲಿ ಅಡಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸರ್ಜೆಂಟ್ ಬ್ಯರಿ ಮೊಂಟ್ಗೊ ಮೆರಿ ಹೇಳಿದ್ದಾರೆ.

Police arrest shooting suspect who was barricaded inside US supermarket

ಅಜ್ಜಿಯನ್ನು ಕೊಂದ ಬಳಿಕ, ಆಕೆಯ ವಾಹನ ತೆಗೆದುಕೊಂಡು ಟ್ರೇಡರ್ ಜೋಸ್ ಸೂಪರ್ ಮಾರುಕಟ್ಟೆಯೊಳಗೆ ಸೇರಿಕೊಂಡಿದ್ದ. ಮಳಿಗೆಯಲ್ಲಿ ಮಹಿಳೆಯನ್ನು ಕೊಂದಿದ್ದರಿಂದ ರಕ್ತ ಚೆಲ್ಲಿ ಹೆಪ್ಪುಗಟ್ಟಿತ್ತು.

ಅಕ್ಕ ಪಕ್ಕದ ಮಳಿಗೆಯಲ್ಲಿದ್ದವರು ಘಟನೆ ಬಗ್ಗೆ ಟ್ವೀಟ್ ಮಾಡುತ್ತಾ, ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದರು.

ಘಟನೆ ಬಗ್ಗೆ ಕ್ಷಣ ಕ್ಷಣಕ್ಕೆ ಮಾಹಿತಿ ನೀಡ ಲಾಸ್ ಏಂಜಲೀಸ್ ಪೊಲೀಸ್ ಡಿಪಾರ್ಟೆಂಟ್, ಆತಂಕ ಉಂಟು ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನಾ ಸ್ಥಳ ಬಂದ್ ಮಾಡಲಾಗಿದೆ. ತನಿಖೆ ಮುಂದುವರೆಸಲಾಗಿದೆ ಎಂದಿದ್ದಾರೆ.

English summary
An armed suspect who allegedly shot his grandmother and another person barricaded himself in a supermarket and then shot a woman dead in the US city of Los Angeles before being taken into custody on Saturday (July 21), police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X