ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲ್ಜಿಯಂನಲ್ಲಿ ಉಗ್ರರ ದಾಳಿ ವಿಫಲಗೊಳಿಸಿದ ಪೊಲೀಸ್

ಜನನಿಬಿಡ ರಸ್ತೆಯೊಂದರಲ್ಲಿ ವೇಗವಾಗಿ ಕಾರು ಚಲಾಯಿಸುತ್ತಾ ಬಂದು ಜನರ ಮೇಲೆ ಕಾರು ನುಗ್ಗಿಸಲು ಪ್ಲಾನ್ ಮಾಡಿದ್ದ ದಾಳಿಕೋರ.

|
Google Oneindia Kannada News

ಬ್ರುಸೆಲ್ಸ್, ಮಾರ್ಚ್ 23: ಬುಧವಾರವಷ್ಟೇ ಲಂಡನ್ ಸಂಸತ್ ಮೇಲೆ ಉಗ್ರರು ದಾಳಿ ನಡೆಸಿದ ಘಟನೆಯಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಆ ಘಟನೆ ನಡೆದು 24 ಗಂಟೆ ಕಳೆಯುವಷ್ಟರಲ್ಲಿ ಬೆಲ್ಜಿಯಂನಲ್ಲಿ ಉಗ್ರರು ದಾಳಿ ನಡೆಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಈ ಪ್ರಯತ್ನವನ್ನು ಅಲ್ಲಿನ ಪೊಲೀಸರು ವಿಫಲಗೊಳಿಸಿದ್ದಾರೆ.

ಬಂದರು ನಗರವೆಂದೇ ಖ್ಯಾತವಾಗಿರುವ ಆ್ಯಂಟ್ವೆರ್ಪ್ ನಲ್ಲಿನ ಜನನಿಬಿಡ ಶಾಪಿಂಗ್ ಮಾಲ್ ಒಂದರ ರಸ್ತೆಯತ್ತ ಅತಿ ವೇಗವಾಗಿ ಕಾರೊಂದನ್ನು ನುಗ್ಗಿಸಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಸಿಕ್ಕಸಿಕ್ಕವರನ್ನು ಬಲಿಪಡೆಯಲು ಉದ್ದೇಶಿಸಿದ್ದ.

Police arrest man trying to drive into crowd in Antwerp

ಆದರೆ, ಆತನನ್ನು ದೂರದಿಂದಲೇ ಗಮನಿಸಿದ ಪೊಲೀಸರು ತಕ್ಷಣವೇ ಕಾರನ್ನು ತಡೆದು ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿಸಲ್ಪಟ್ಟ ವ್ಯಕ್ತಿಯ ಹೆಸರನ್ನು ಆರ್. ಮೊಹಮ್ಮದ್ ಎಂದು ತಿಳಿಸಿರುವ ಪೊಲೀಸರು, ಆತ 1977ರ ಮೇ 8ರಂದು ಜನಿಸಿದ್ದಾನೆ. ಈ ಫ್ರಾನ್ಸ್ ನ ನಾಗರೀಕನಾಗಿದ್ದು, ಈತ ಫ್ರೆಂಚ್ ದೇಶದ ನಂಬರ್ ಪ್ಲೇಟ್ ಇದ್ದ ಕಾರನ್ನೇ ದಾಳಿಗಾಗಿ ಉಪಯೋಗಿಸಿದ್ದ ಎಂದು ತಿಳಿಸಿದ್ದಾರೆ.

ಬಂಧಿತನು, ತನ್ನ ಬೂಟುಗಳಲ್ಲಿ ಹೊರಚಾಚಿರುವ ಬ್ಲೇಡುಗಳು, ತನ್ನೊಂದಿಗೆ ಒಂದು ಪಿಸ್ತೂಲು ಮುಂತಾದ ಆಯುಧಗಳನ್ನು ಹೊಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

English summary
Belgiam police arrested a man on Thursday after he tried to drive into a crowd at high-speed in a shopping area in the port city of Antwerp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X