ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಕೈ ಕಟ್ಟಿ ಹಾಕಲು ನಿರ್ಬಂಧದ ಅಸ್ತ್ರ; ಯಾರಲ್ಲಿದೆ ಆ ಸಾಮರ್ಥ್ಯ?

|
Google Oneindia Kannada News

ಕೀವ್, ಫೆಬ್ರವರಿ 26: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಆಕ್ರಮಣಕಾರಿ ನಿಲುವಿಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ರಷ್ಯಾ ಮೇಲೆ ಈಗಾಗಲೇ ವಿಶ್ವದ ದೊಡ್ಡಣ್ಣ ಅಮೆರಿಕಾ ಸಾಕಷ್ಟು ನಿರ್ಬಂಧಗಳನ್ನು ಘೋಷಿಸಿದೆ. ಅದೇ ನಿಟ್ಟಿನಲ್ಲಿ ಜರ್ಮನಿ, ಪೊಲ್ಯಾಂಡ್ ಮತ್ತು ಲಿಥುವೇನಿಯಾ ರಾಷ್ಟ್ರಗಳು ಹೆಜ್ಜೆ ಇಡುತ್ತಿವೆ.

ಪೊಲ್ಯಾಂಡ್ ಪ್ರಧಾನಿ ಮಾಟೆಸ್ಜ್ ಮೊರಾವಿಕಿ ಮತ್ತು ಲಿಥುವೇನಿಯಾ ಅಧ್ಯಕ್ಷ ಗಿಟಾನಾಸ್ ನೌಸೆಡಾ ಶನಿವಾರ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ರಷ್ಯಾದ ಮೇಲೆ ಯಾವ ರೀತಿ ನಿರ್ಬಂಧಗಳನ್ನು ವಿಧಿಸಬೇಕು ಎಂಬುದರ ಕುರಿತು ಚರ್ಚಿಸಲಿದ್ದಾರೆ ಎಂದು ಪೋಲಿಷ್ ಸರ್ಕಾರದ ವಕ್ತಾರ ಪಿಯೋಟರ್ ಮುಲ್ಲರ್ ತಿಳಿಸಿದ್ದಾರೆ.

Russia-Ukraine War Live Updates : ರಷ್ಯಾ ಖಂಡಿಸುವ ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರRussia-Ukraine War Live Updates : ರಷ್ಯಾ ಖಂಡಿಸುವ ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಬರ್ಲಿನ್‌ನಲ್ಲಿ ಶನಿವಾರ ಪೊಲ್ಯಾಂಡ್ ಪ್ರಧಾನಿ ಮಾಟೆಸ್ಜ್ ಮೊರಾವಿಕಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಲಿಥುವೇನಿಯಾ ಅಧ್ಯಕ್ಷರ ಜೊತೆ ಪ್ರಧಾನಮಂತ್ರಿ ಮೊರಾವಿಕಿ ಜರ್ಮನ್ ಚಾನ್ಸೆಲರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ, "ಎಂದು ಮುಲ್ಲರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಯುರೋಪಿಯನ್ ಒಕ್ಕೂಟದಿಂದ ರಷ್ಯಾ ಮೇಲೆ ನಿರ್ಬಂಧ

ಯುರೋಪಿಯನ್ ಒಕ್ಕೂಟದಿಂದ ರಷ್ಯಾ ಮೇಲೆ ನಿರ್ಬಂಧ

ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾಗೆ ತಕ್ಕ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಯುರೋಪಿಯನ್ ಒಕ್ಕೂಟವು ತಕ್ಷಣವೇ ರಷ್ಯಾದ ವಿರುದ್ಧ ನಿರ್ದಯವಾಗಿ ಕಠಿಣ ನಿರ್ಬಂಧಗಳ ಪ್ಯಾಕೇಜ್ ಅನ್ನು ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ.

ರಷ್ಯಾದ ಆಸ್ತಿಗಳ ಮುಟ್ಟುಗೋಲು

ರಷ್ಯಾದ ಆಸ್ತಿಗಳ ಮುಟ್ಟುಗೋಲು

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರ ಸಭೆಯೊಂದರಲ್ಲಿ ಮಾತನಾಡಿದ್ದು, ಪುಟಿನ್ ಮತ್ತು ಲಾವ್ರೊವ್ ಆಸ್ತಿಗಳ ಮೇಲೆ ನಿರ್ಬಂಧ ಹೇರುವುದಾಗಿ ತಿಳಿಸಿದ್ದರು. ಈಗ ಸದ್ಯಕ್ಕೆ ಯೂರೋಪಿಯನ್, ಇಂಗ್ಲೆಂಡ್, ಅಮೆರಿಕವು ಪುಟಿನ್ ಮತ್ತು ಸೆರ್ಗೆ ಲಾವ್ರೊವ್ ಆಸ್ತಿಗಳನ್ನು ಫ್ರೀಜ್ ಮಾಡಿವೆ. ಪುಟಿನ್ ಅಥವಾ ಲಾವ್ರೊವ್ ಅವರ ಆಸ್ತಿಗಳನ್ನು ಫ್ರೀಜ್ ಮಾಡುವ ಮೂಲಕ ನೇರ ಕ್ರಮಕ್ಕೆ ಅಮೆರಿಕ, ಬ್ರಿಟನ್ ಮತ್ತು ಯೂರೋಪಿಯನ್ ಯೂನಿಯನ್​​ಗಳು ಮುಂದಾಗಿವೆ. ಈ ರಾಷ್ಟ್ರಗಳು ಅಥವಾ ಒಕ್ಕೂಟದಲ್ಲಿರುವ ಆಸ್ತಿಗಳನ್ನು ಬಳಸಿಕೊಳ್ಳಲು ಪುಟಿನ್ ಮತ್ತು ಲಾವ್ರೋವ್​ಗೆ ಸಾಧ್ಯವಾಗುವುದಿಲ್ಲ

ರಷ್ಯಾ ಅಧ್ಯಕ್ಷ ಪುಟಿನ್ ರಿಗೆ ಬೈಡನ್ ಎಚ್ಚರಿಕೆ

ರಷ್ಯಾ ಅಧ್ಯಕ್ಷ ಪುಟಿನ್ ರಿಗೆ ಬೈಡನ್ ಎಚ್ಚರಿಕೆ

ಅಮೆರಿಕಾದಲ್ಲಿರುವ ರಷ್ಯಾದ ಎಲ್ಲಾ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಗುರುವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ಜೋ ಬೈಡನ್, "ಇಂದು ರಷ್ಯಾದ ರಫ್ತು ನಿಯಮಗಳ ಮೇಲೆ ಹೆಚ್ಚುವರಿ ನಿರ್ಬಂಧ ಹಾಗೂ ನಿಯಂತ್ರಣ ಘೋಷಿಸುತ್ತಿದ್ದೇನೆ. ಅಮೆರಿಕಾದಲ್ಲಿ ಇರುವ ರಷ್ಯಾದ ಎಲ್ಲಾ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ," ಎಂದು ತಿಳಿಸಿದರು. ಆ ಮೂಲಕ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಲು ಯುಎಸ್ ನಿರ್ಧರಿಸಿದೆ.

ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವ ರಷ್ಯಾ ನಮ್ಮ ನೇರ ಎಚ್ಚರಿಕೆಯ ಹೊರತಾಗಿಯೂ ಉಕ್ರೇನ್ ಮೇಲೆ ಯುದ್ಧ ಘೋಷಿಸಿದೆ. ಭವಿಷ್ಯದಲ್ಲಿ ರಷ್ಯಾ ತನ್ನ ತಪ್ಪಿಗೆ ಸರಿಯಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೈಡನ್ ಎಚ್ಚರಿಸಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವೆ ದಾಳಿ-ಪ್ರತಿದಾಳಿ

ಉಕ್ರೇನ್ ಮತ್ತು ರಷ್ಯಾ ನಡುವೆ ದಾಳಿ-ಪ್ರತಿದಾಳಿ

ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಪಡೆಗಳು ಉಕ್ರೇನ್‌ನಲ್ಲಿ 211 ಮಿಲಿಟರಿ ಮೂಲಸೌಕರ್ಯ ಸೌಲಭ್ಯಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಇದರ ಮಧ್ಯೆ, ಉಕ್ರೇನ್ ಕನಿಷ್ಠ 80 ಟ್ಯಾಂಕ್‌ಗಳು, 516 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 7 ಹೆಲಿಕಾಪ್ಟರ್‌ಗಳು, 10 ವಿಮಾನಗಳು ಮತ್ತು 20 ಕ್ರೂಸ್ ಕ್ಷಿಪಣಿಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಉಕ್ರೇನ್ ಖಾರ್ಕಿವ್ ನಗರದಲ್ಲಿ ರಷ್ಯಾದ 1000 ಯೋಧರನ್ನು ಹೊಡೆದುರುಳಿಸಲಾಗಿದ್ದು, 200 ಯೋಧರನ್ನು ಬಂಧಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ.

Recommended Video

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಜಂಟಿ ಮಾಧ್ಯಮ ಗೋಷ್ಠಿ, ನವ ದೆಹಲಿ | Oneindia Kannada

English summary
Russia-Ukraine War: Poland, Lithuania, Germany will discussing to put sanctions on Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X