ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3C ನಿಯಮ ಪಾಲಿಸಿ ಕೊವಿಡ್ ಯುದ್ಧ ಗೆದ್ದ ಜಪಾನ್

|
Google Oneindia Kannada News

ಟೋಕಿಯೊ, ಮೇ 26: ಟೋಕಿಯೊ ಮಹಾನಗರ ಸೇರಿದಂತೆ ನಾಲ್ಕು ನಗರಗಳ ತುರ್ತು ಪರಿಸ್ಥಿತಿಯನ್ನು ಹಿಂಪಡೆದಿರುವುದಾಗಿ ಪ್ರಧಾನಿ ಶಿಂಜೋ ಅಬೆ ಘೋಷಿಸುತ್ತಿದ್ದಂತೆ ಇಡೀ ಜಗತ್ತೇ ಒಮ್ಮೆ ಜಪಾನ್ ಕಡೆಗೆ ಹಿಂತಿರುಗಿ ನೋಡುವಂತಾಗಿದೆ. ಲಾಕ್ಡೌನ್, ಸಾಮೂಹಿಕ ಸೋಂಕು ಪರೀಕ್ಷೆ ವಿಧಾನ ಅನುಸರಿಸದೇ ತನ್ನದೇ ಹಾದಿಯಲ್ಲಿ ಕೊವಿಡ್ 19 ವಿರುದ್ಧ ಜಯ ಸಾಧಿಸಿದೆ.

ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರ ಜಪಾನ್ ಕೂಡಾ ಕೊರೊನಾವೈರಸ್ ಸೋಂಕಿನ ಹೊಡೆತಕ್ಕೆ ಸಿಲುಕಿ ಆರಂಭದಲ್ಲಿ ನಲುಗಿತ್ತು. ಆದರೆ, ಇತ್ತೀಚೆಗೆ ಸಕ್ರಿಯ ಪಾಸಿಟಿವ್ ಪ್ರಕರಣಗಳು ಇಡೀ ದೇಶದಲ್ಲಿ 50ಕ್ಕಿಂತ ಕಡಿಮೆಯಾಗಿದೆ. ಒಂದು ಕಾಲದಲ್ಲಿ 10, 000 ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣಗಳಿತ್ತು. ಈಗ 2000 ಆಸುಪಾಸಿನಲ್ಲಿದೆ, ಎಂದಿನ ದೈನಂದಿನ ಬದುಕಿಗೆ ಜನತೆ ಮರಳುವ ಕಾಲ ಬಂದಿದೆ ಎಂದು ಅಬೆ ಹೇಳಿದರು.

ಕೊರೊನಾ ಆಯ್ತು ಈಗ ಜಪಾನ್‌ನಿಂದ ಅಮೆರಿಕಕ್ಕೆ ಕಾಲಿಟ್ಟ 'ಮರ್ಡರ್ ಹಾರ್ನೆಟ್'ಕೊರೊನಾ ಆಯ್ತು ಈಗ ಜಪಾನ್‌ನಿಂದ ಅಮೆರಿಕಕ್ಕೆ ಕಾಲಿಟ್ಟ 'ಮರ್ಡರ್ ಹಾರ್ನೆಟ್'

ಬಳಿಕ ಪಶ್ಚಿಮ ಜಪಾನ್‌ನ ಒಸಾಕಾ ಮತ್ತು ಹೊಗೊ ಪ್ರಾಂತ್ಯ ಗಳಲ್ಲಿ ಕಠಿಣ ನಿಯಮವನ್ನು ಪಾಲಿಸಲಾಗುತ್ತಿದೆ. ಛಿಬಾ, ಸೈತಾಮಾ ತುರ್ತು ಪರಿಸ್ಥಿತಿ ತಿಳಿಗೊಳಿಸಲಾಗಿದೆ. ಟೋಕಿಯೋ, ಕನಗಾವಾ, ಹೊಕೈಡೋದಲ್ಲಿ ಇನ್ನೂ ಸೋಂಕಿನ ಪ್ರಮಾಣ ಏರುಪೇರಾಗುತ್ತಿದ್ದು ಇನ್ನಷ್ಟು ಕಾಲ ತುರ್ತು ಪರಿಸ್ಥಿತಿ ಮುಂದುವರೆಯಲಿದೆ.

ಏನಿದು 3C ನಿಯಮ?

ಏನಿದು 3C ನಿಯಮ?

ಮಾರ್ಚ್ ತಿಂಗಳಿನಲ್ಲೇ ತುರ್ತು ಪರಿಸ್ಥಿತಿ ಘೋಷಿಸಿದರೂ ಸೂರ್ಯ ಉದಯಿಸುವ ನಾಡಿನಲ್ಲಿ ಲಾಕ್ಡೌನ್ ಜಾರಿಗೊಳಿಸಿರಲಿಲ್ಲ. ದಕ್ಷಿಣ ಕೊರಿಯಾದಂತೆ ಎಲ್ಲರಿಗೂ ಸಾಮೂಹಿಕ ಕೊವಿಡ್ 19 ಪರೀಕ್ಷೆ ಕಡ್ಡಾಯಗೊಳಿಸಿರಲಿಲ್ಲ. ಕೊವಿಡ್ 19ರಿಂದ ಸಾವು ನೋವು ಸಂಭವಿಸಿದರೂ ಜಪಾನ್ ಸರ್ಕಾರ ಅನುಸರಿಸಿದ್ದು 3C ನಿಯಮ.

ಸರಳ ಸೂತ್ರವನ್ನು ಜನರು ತಮ್ಮದಾಗಿಸಿಕೊಂಡರು

ಸರಳ ಸೂತ್ರವನ್ನು ಜನರು ತಮ್ಮದಾಗಿಸಿಕೊಂಡರು

3C ಎಂದರೆ closed spaces, crowded places and close contact ಪಾಲಿಸದಿರುವುದು. ಇಕ್ಕಟ್ಟಾದ ಜಾಗದಲ್ಲಿ ಇರದಿರುವುದು, ಜನನಿಬಿಡ ಪ್ರದೇಶದಲ್ಲಿರದಿರುವುದು, ಪರಸ್ಪರ ಸಂಪರ್ಕ ಹೊಂದದೆ ಇರುವುದು ಇವೇ ಸರಳ ಸೂತ್ರವನ್ನು ಜಪಾನ್ ದೇಶದ ಜನತೆ ಪಾಲಿಸಿ, ಯಶ ಕಂಡಿದ್ದಾರೆ.

 ಸೋಂಕು ಏರಿಕೆಯಾಗದಂತೆ ತಡೆಗಟ್ಟಲಾಗಿದೆ

ಸೋಂಕು ಏರಿಕೆಯಾಗದಂತೆ ತಡೆಗಟ್ಟಲಾಗಿದೆ

ಜಪಾನ್ ನಲ್ಲಿ 16,600 ದಾಖಲಾದ ಪ್ರಕರಣಗಳು, 850 ಸಾವು ಕಂಡಿದ್ದರೂ ಕೊರೊನಾ ವೈರಸ್ ಸೋಂಕು ಏರಿಕೆಯಾಗದಂತೆ ತಡೆಗಟ್ಟಲಾಗಿದೆ. ವೈರಸ್ ಸೋಂಕು ಹರಡುವ ಪ್ರಮಾಣವನ್ನು ತಟಸ್ಥಗೊಳಿಸಿ ಮಟ್ಟಸ ಮಾಡಲಾಗಿದೆ. ಹೀಗಾಗಿ, ಯುಎಸ್ಎ, ಬ್ರೆಜಿಲ್, ಯುರೋಪಿನ ಕೆಲವು ರಾಷ್ಟ್ರಗಳಂತೆ ಸಾವು ನೋವಿನ ಪ್ರಮಾಣ, ಒಂದೇ ದಿನದಲ್ಲಿ ಅತ್ಯಧಿಕ ಪಾಸಿಟಿವ್ ಪ್ರಕರಣ, ಅನಿಯಂತ್ರಿತ ಸೋಂಕು ಹರಡುವುದು ಜಪಾನ್ ನಲ್ಲಿ ಕಂಡು ಬಂದಿಲ್ಲ.

ಹಂತ ಹಂತವಾಗಿ ಎಲ್ಲವೂ ಸಮಸ್ಥಿತಿಗೆ ಮರಳಲಿದೆ

ಹಂತ ಹಂತವಾಗಿ ಎಲ್ಲವೂ ಸಮಸ್ಥಿತಿಗೆ ಮರಳಲಿದೆ

ಮೊದಲಿಗೆ ಶಾಲೆ, ಲೈಬ್ರರಿ, ಮ್ಯೂಸಿಯಂ, ರೆಸ್ಟೋರೆಂಟ್ ಗಳನ್ನು ಪುನರ್ ಆರಂಭಿಸಲಾಗುತ್ತದೆ. ನಂತರ ಕ್ರೀಡಾ ಚಟುವಟಿಕೆ ಕೇಂದ್ರ, ವಾಣಿಜ್ಯ ಕಟ್ಟಡ, ನೈಟ್ ಕ್ಲಬ್, ಕರೋಕೆ, ಲೈವ್ ಮ್ಯೂಸಿಕ್ ಕ್ಲಬ್ ಆರಂಭಿಸಲಾಗುವುದು.ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಕಡ್ಡಾಯ ನಿಯಮಗಳನ್ನು ಪಾಲಿಸುವುದು ಅನಿವಾರ್ಯ ಎಂದು ಟೋಕಿಯೋ ಗವರ್ನರ್ ಯುರಿಕೋ ಕೊಯ್ಕೆ ಹೇಳಿದ್ದಾರೆ.

English summary
Japanese Prime Minister Shinzo Abe has lifted a state of emergency in Tokyo and four other areas that were still under coronavirus restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X