ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

|
Google Oneindia Kannada News

ಢಾಕಾ, ಮಾರ್ಚ್ 27: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಬಾಂಗ್ಲಾದೇಶದ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸುವರ್ಣ ಸ್ವಾತಂತ್ರ್ಯ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಇದರ ಮುಂದುವರೆದ ಭಾಗವಾಗಿ ಇಂದು ಅಲ್ಲಿನ ಪ್ರಸಿದ್ಧ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

ಪ್ರಸಿದ್ಧ ಹಿಂದೂ ದೇವಾಲಯಗಳಾದ ಒರಕಂಡಿ ದೇವಾಸ್ಥಾನ ಹಾಗೂ ಈಶ್ವರಿಪುರದ ಜಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಾಂಗ್ಲಾದೇಶದ ಪ್ರವಾಸ ಕೈಗೊಳ್ಳುವುದಕ್ಕೂ ಮುಂಚಿತವಾಗಿ ಇದಕ್ಕೆ ಸಂಬಂಧಿಸಿದಂತೆ ನಮೋ ಟ್ವೀಟ್ ಮಾಡಿದ್ದು, ಬಾಂಗ್ಲಾದೇಶದ ಪ್ರಾಚೀನ ಜಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂದಿದ್ದರು.

 PM Narendra Modi To Visit 2 Hindu Temples In Bangladesh

ಪುರಾಣದ 51 ಶಕ್ತಿಪೀಠಗಳಲ್ಲಿ ಜಶೋರೇಶ್ವರಿ ದೇವಸ್ಥಾನ ಕೂಡ ಒಂದಾಗಿದೆ ಎಂದು ತಿಳಿಸಿದ್ದರು. ಜಶೋರೇಶ್ವರಿ ದೇವಸ್ಥಾನದ ಬಳಿಕ ಒರಾಕಂಡಿಯಲ್ಲಿರುವ ದೇವಸ್ಥಾನಕ್ಕೂ ಭೇಟಿ ನೀಡಿ ತದನಂತರ ಅಲ್ಲಿನ ಮಾತುವಾ ಸಮುದಾಯದೊಂದಿಗೆ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ.

 PM Narendra Modi To Visit 2 Hindu Temples In Bangladesh

ಮಹಾಮಾರಿ ಕೋವಿಡ್ ನಂತರ ನರೇಂದ್ರ ಮೋದಿ ಮೊದಲ ವಿದೇಶಿ ಭೇಟಿ ನೀಡಿದ್ದು, ಶುಕ್ರವಾರ ನೆರೆಯ ದೇಶ ಬಾಂಗ್ಲಾದೇಶಕ್ಕೆ ತೆರಳಿರುವ ಪ್ರಧಾನಿ ಅಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ, 1971ರ ವಿಮೋಚನಾ ಯುದ್ಧದಲ್ಲಿ ಮಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದರು.

English summary
Prime Minister Narendra Modi will pay special homage to Bangladesh's renowned Hindu temples, Orakandi Temple and Jashoreshwari Kali Temple in Ishwaripur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X