ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

|
Google Oneindia Kannada News

ನ್ಯೂಯಾರ್ಕ್, ಸಪ್ಟೆಂಬರ್.25: ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಸದನವನ್ನು ಉದ್ದೇಶಿಸಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ಪಿಡುಗು ಜಗತ್ತನ್ನು ಕಾಡಲು ಆರಂಭಿಸಿದ ದಿನಿಂದ ವಿಶ್ವಸಂಸ್ಥೆ ಜೊತೆಗೆ ಭಾರತವು ನಿರಂತರ ಸಂಪರ್ಕವನ್ನು ಹೊಂದಿದೆ.

ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಬದ್ಧತೆ ಬಗ್ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಕಲಾಪದಲಲ್ಲಿ ಸದಸ್ಯ ರಾಷ್ಟ್ರಗಳು ಪುನರುಚ್ಛರಿಸಲಿವೆ.

ಯುದ್ಧದ ಮನಸ್ಥಿತಿ ನಮಗಿಲ್ಲ ಎಂದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯುದ್ಧದ ಮನಸ್ಥಿತಿ ನಮಗಿಲ್ಲ ಎಂದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ಕೊವಿಡ್-19 ಸೋಂಕು ನಿಯಂತ್ರಣ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ವಿಷಯಗಳ ಬಗ್ಗೆ ಶನಿವಾರದ ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಯಾವ ಯಾವ ವಿಚಾರಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಬಹುದು ಎನ್ನುವುದರ ಕುರಿತು ಇಲ್ಲಿ ಪಟ್ಟಿ ಮಾಡಲಾಗಿದೆ.

PM Narendra Modi To Address The United Nations General Assembly Tomorrow Evening.


ಪ್ರಧಾನಮಂತ್ರಿ ಮೋದಿ ಪ್ರಸ್ತಾಪಿಸಲಿರುವ ವಿಚಾರ:

- ಭಯೋತ್ಪಾದನೆ ನಿಗ್ರಹದ ಮೇಲಿನ ಜಾಗತಿಕ ಕ್ರಮವನ್ನು ಬಲಪಡಿಸುವುದನ್ನು ಉತ್ತೇಜಿಸುವುದು. ಅನುಮೋದನೆ ಸಮಿತಿಗಳಲ್ಲಿ ಘಟಕಗಳು ಮತ್ತು ವ್ಯಕ್ತಿಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆಯಲ್ಲಿ ಭಾರತವು ಹೆಚ್ಚು ಪಾರದರ್ಶಕತೆವಾಗಿರುತ್ತದೆ.

- ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗೆ ಅತಿದೊಡ್ಡ ಸೇನಾ ಕೊಡುಗೆ ನೀಡುವ ದೇಶಗಳಲ್ಲಿ ಭಾರತವೂ ಒಂದಾಗಿದೆ.

- ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾರತದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಗ್ಗೆ ಪ್ರಸ್ತಾಪ.

- ಕೊರೊನಾವೈರಸ್ ನಿಯಂತ್ರಿಸುವ ಸಲುವಾಗಿ ವಿಶ್ವದ 150 ರಾಷ್ಟ್ರಗಳಲ್ಲಿ ಸಹಕಾರ ನೀಡುವ ಆರೋಗ್ಯ ಸೇವೆ ಪೂರೈಕೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿದೆ.

- 2020 ಮಹಿಳೆಯರ ಕುರಿತ 4ನೇ ವಿಶ್ವ ಸಮ್ಮೇಳನದ 25 ನೇ ವರ್ಷಾಚರಣೆಯಾಗಿದ್ದು, ಭಾರತವು ಮಹಿಳೆಯರ ನೇತೃತ್ವದ ಅಭಿವೃದ್ಧಿಯಲ್ಲಿ ತನ್ನ ಬದ್ಧತೆ ಮತ್ತು ಸಾಧನೆಗಳನ್ನು ಪುನರುಚ್ಚರಿಸಲಿದೆ.

- ದಕ್ಷಿಣ ಅಭಿವೃದ್ಧಿ ಪಾಲುದಾರಿಕೆ ಮತ್ತು ಭಾರತ-ಯುಎನ್ ಅಭಿವೃದ್ಧಿ ಸಹಭಾಗಿತ್ವ ನಿಧಿಯ ವಿಚಾರದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ಉಲ್ಲೇಖಿಸಲಿದ್ದಾರೆ.

English summary
PM Narendra Modi To Address The United Nations General Assembly Tomorrow Evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X