ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ನರೇಂದ್ರ ಮೋದಿ ಭಾಷಣದ ಜಾದೂ

|
Google Oneindia Kannada News

ಸಿಂಗಪುರ, ನವೆಂಬರ್, 24: ನರೇಂದ್ರ ಮೋದಿ ಸಿಂಗಪುರದಲ್ಲೂ ತಮ್ಮ ಜಾದೂ ತೋರಿಸಿದ್ದಾರೆ. ಮಂಗಳವಾರ ಸಂಜೆ ಭಾರತೀಯ ಮೂಲದ ಸಿಂಗಪುರ ನಿವಾಸಿಗಳನ್ನು ಉದ್ದೇಶಿಸಿ ಮಾಡಿದ ಸುದೀರ್ಘ ಭಾಷಣದಲ್ಲಿ ಹೂಡಿಕೆ, ಮೇಕ್ ಇನ್ ಇಂಡಿಯಾ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸೇರಿದಂತೆ ನೂರಾರು ವಿಚಾರಗಳನ್ನು ಮುಂದಿಟ್ಟರು.

ಸಿಂಗಪುರದ ಪ್ರಧಾನಿ ಲೀ ಸೀನ್ ಲೂಂಗ್ ಅವರನ್ನು ಭೇಟಿ ಮಾಡಿ10 ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಸಹ ಮಾಡಿದ್ದಾರೆ. ಭಾರತ ಮತ್ತು ಸಿಂಗಪುರದ ನಡುವೆ ಪ್ರಮುಖವಾಗಿ ರಕ್ಷಣಾ ಕ್ಷೇತ್ರ, ಸೈಬರ್ ಭದ್ರತೆ, ನೌಕಾಯಾನ, ನಾಗರಿಕ ವಿಮಾನಯಾನ ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಉಭಯ ದೇಶದ ನಾಯಕರು ಸಹಿ ಮಾಡಿದ್ದಾರೆ.[ನಗರ ಸ್ವಚ್ಛವಾಗಿಡಿ.. ಇಲ್ಲದಿದ್ದರೆ ಇವನಿಗಾದಂತೆ ಆದೀತು!]

modi

ನರೇಂದ್ರ ಮೋದಿ ಸಿಂಗಪುರ ಭಾಷಣದ ಹೈಲೈಟ್ಸ್
* ಉತ್ತಮ ಆಡಳಿತದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಸಿಂಗಪುರ ಹೂಡಿಕೆಗೆ ಅತ್ಯುತ್ತಮ ದೇಶವಾಗಿದೆ. ನೀವೂ ನಮ್ಮಲ್ಲಿಗೆ (ಭಾರತಕ್ಕೆ) ಬನ್ನಿ ಬಂಡವಾಳ ಹೂಡಿ.
* ಭಾರತ ಶಕ್ತಿಶಾಲಿ ರಾಷ್ಟ್ರ, ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲ ಹೊಂದಿದೆ. ಆದರೆ ಸಿಂಗಪುರದಿಂದ ಕಲಿಯುವುದು ಬಹಳಷ್ಟಿದೆ.
* ಗಾಂಧೀಜಿ ಸ್ವಾತಂತ್ರ್ಯ ಬೇಕೋ ಸ್ವಚ್ಛತೆಯೋ ಎಂದು ಕೇಳಿದ್ದರೆ ಸ್ವಚ್ಛತೆ ಎಂದಿದ್ದರು, ಅದರಂತೆ ನಾವೆಲ್ಲ ನಡೆದುಕೊಳ್ಳಬೇಕಾಗಿದೆ.
* ಪ್ರಪಂಚವನ್ನು ನಾವು ಬೇರೆಯ ಕಣ್ಣಿನಿಂದ ನೋಡಬೇಕಾಗಿದೆ. [ಮೋದಿ ಆರಂಭಿಸಿದ ಚಿನ್ನ ಠೇವಣಿ ಯೋಜನೆ ಟುಸ್!]
* ನಾವೆಲ್ಲರೂ ಪ್ರಪಂಚದ ಒಂದು ಭಾಗ, ಅದರ ಬದಲಾವಣೆಯೊಂದಿಗೆ ಹೊಂದಿಕೊಂಡು ಹೋಗಬೇಕು. 2020 ರವೇಳೆಗೆ ಇಡೀ ಭಾರತದಲ್ಲಿ 24 ಗಂಟೆ ವಿದ್ಯುತ್ ಇರಲಿದೆ.
* ಪರಿಸರದಲ್ಲಿ ದೇವರನ್ನು ಕಂಡು ದೇಶ ನಮ್ಮದು.ಭಯೋತ್ಪಾದನೆ ಮೆಟ್ಟಿ ನಿಲ್ಲಲು ಎಲ್ಲರೂ ಒಂದಾಗಬೇಕಿರುವುದು ಇಂದಿನ ಅಗತ್ಯ.
* ದೇಶದ ಅಭಿವೃದ್ಧಿಯೊಂದೇ ನನ್ನ ಗುರಿ. ಅದಕ್ಕಾಗಿಯೇ ಎಲ್ಲ ಬಗೆಯ ಹೊಸ ಚಿಂತನೆಗಳನ್ನು ಮಾಡಬೇಕು, ಅಳವಡಿಸಿಕೊಳ್ಳಬೇಕು.

English summary
Indian Prime Minister Narendra Modi said on Tuesday that his government had taken decisive steps to iron out regulatory and taxation issues in the country and invited the Singapore business community to invest in India. "I have come to assure you that I am there to hold your hand," Modi said while addressing the India Singapore Economic Convention on the second day of his visit to the city state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X