ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರ್ಗಿಸ್ತಾನವನ್ನು ತಲುಪಿದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ

|
Google Oneindia Kannada News

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್ ತಲುಪಿದ್ದಾರೆ. ಶಾಂಘೈ ಸಹಕಾರ ಸಂಘಟನೆ (SCO) ಸಮಾವೇಶಕ್ಕಾಗಿ ಬಂದಿದ್ದಾರೆ. ಭಾರತದಲ್ಲಿ ಲೋಕಸಭೆ ಚುನಾವಣೆ ಮುಗಿದು, ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅತ್ಯಂತ ಮುಖ್ಯವಾದ ಸಮಾವೇಶ ಇದು.

ಜೂನ್ 13 ಹಾಗೂ 14ರಂದು ಬಿಷ್ಕೆಕ್ ಪ್ರವಾಸಕ್ಕೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿದಂತೆ ಹಲವರನ್ನು ಭೇಟಿ ಆಗುವ ಯೋಜನೆ ಇದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಮಾನ ತೆರಳಲ್ಲಪಾಕಿಸ್ತಾನದ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಮಾನ ತೆರಳಲ್ಲ

ಪ್ರಾದೇಶಿಕವಾಗಿ ರಾಜಕೀಯ, ಭದ್ರತೆ, ಆರ್ಥಿಕ ಹಾಗೂ ಜನರ ಮಧ್ಯದ ಸಂವಹನವನ್ನು ಉತ್ತೇಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಮಾವೇಶಕ್ಕೆ ವಿಶೇಷ ಪ್ರಾಶಸ್ತ್ಯ ಇದೆ. ಎರಡು ವರ್ಷಗಳ ಹಿಂದೆ ಎಸ್ ಸಿಒದ ಪೂರ್ಣ ಸದಸ್ಯತ್ವ ಪಡೆದ ನಂತರ ವಿವಿಧ ಮಾತು-ಕತೆ, ಚರ್ಚೆಗಳಲ್ಲಿ ಭಾರತ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

PM Narendra Modi reached Bishkek for SCO meet

ಕಿರ್ಗಿಸ್ತಾನದ ಅಧ್ಯಕ್ಷತೆಗೆ ಭಾರತವು ಪೂರ್ಣವಾದ ಬೆಂಬಲ ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

English summary
India PM Narendra Modi reached Bishkek for SCO meet on Thursday. June 13-14th two days meet, in the sidelines Modi will meet several leaders including China and Russia president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X