ಕಾಬೂಲ್‌ನಲ್ಲಿ ತಿಂಡಿ, ಲಾಹೋರ್‌ನಲ್ಲಿ ಊಟ, ಅಬ್ಬಬ್ಬಾ!

Subscribe to Oneindia Kannada

ಲಾಹೋರ್, ಡಿಸೆಂಬರ್, 25: ಪ್ರಪಂಚಕ್ಕೆ ಶಾಕ್ ನೀಡಿದ ಪ್ರಧಾನಿ ದಿಢೀರ್ ಎಂದು ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಜ್ ಷರೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಮೋದಿಗೆ ಪಾಕಿಸ್ತಾನದಲ್ಲಿ ಅದ್ದೂರಿ ಸ್ವಾಗತವೂ ಸಿಕ್ಕಿದೆ.

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಮೋದಿಗೆ ಕೆಂಪು ಹಾಸಿನ ಸ್ವಾಗತ ನೀಡಿದರು. ಇಂದು 66ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನವಾಜ್ ಷರೀಫ್ ಅವರಿಗೆ ದೂರವಾಣಿ ಮೂಲಕ ಮೋದಿ ಶುಭಾಶಯ ಕೋರಿದ್ದರು. ಈ ವೇಳೆ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ನವಾಜ್ ಷರೀಫ್ ಮೋದಿಗೆ ಆಹ್ವಾನ ನೀಡಿದ್ದರು. ಅದರಂತೆ ಮೋದಿ ಮಾರ್ಗ ಮಧ್ಯೆ ಲಾಹೋರ್ ನಲ್ಲಿ ಇಳಿದರು.[ತಾಯಿ ನಾಡಿಗೆ ದಶಕದ ನಂತರ ಮರಳಿದ ಗೀತಾ]

ಸಾಮಾಜಿಕ ತಾಣದಲ್ಲೂ ಮೋದಿ ದಿಢೀರ್ ಪಾಕಿಸ್ತಾನ ಭೇಟಿಗೆ ಪರ ವಿರೋಧದ ಹೇಳಿಕೆಗಳು ಹರಿದಾಡಿವೆ. ಟೀಕೆ ಟಿಪ್ಪಣಿಗಳು ಎದುರಾಗಿವೆ. ಆರ್ ಎಸ್ ಎಸ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಶಿವಸೇನೆ ಮತ್ತು ಕಾಂಗ್ರೆಸ್ ಭೇಟಿಗೆ ವಿರೋಧ ವ್ಯಕ್ತಪಡಿಸಿವೆ. ಆದರೆ ರಾಜಕೀಯ ಚಿಂತಕರು ಇದು ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದೇ ವಿಶ್ಲೇಷಣೆ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸಹ ಮೋದಿ ಭೇಟಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

 ಮೋದಿ ಪ್ರಮಾಣವಚನಕ್ಕೂ ಬಂದಿದ್ದ ಷರೀಪ್

ಮೋದಿ ಪ್ರಮಾಣವಚನಕ್ಕೂ ಬಂದಿದ್ದ ಷರೀಪ್

ಪಾಕ್ ಪ್ರಧಾನಿ ನವಾಜ್ ಷರೀಪ್ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೂ ಬಂದಿದ್ದರು. ಅಲ್ಲದೇ ಏಷ್ಯಾ ಖಂಡಕ್ಕೆ ಸಂಬಂಧಿಸಿದ ಶೃಂಗ ಸಭೆಗಳಲ್ಲೂ ಮೋದಿ-ಷರೀಪ್ ಪರಸ್ಪರ ಕೈ ಕುಲುಕಿಕೊಂಡಿದ್ದರು.

ಸುಷ್ಮಾ ಭೇಟಿ

ಸುಷ್ಮಾ ಭೇಟಿ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗೆ ಅಷ್ಟೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಬಂದಿದ್ದರು. ಈ ವೇಳೆಯೇ ಮೋದಿ ಭೇಟಿ ನಿರ್ಧಾರವಾಗಿತ್ತು ಎಂದು ಹೇಳಲಾಗುತ್ತಿದೆ.

ಗೀತಾ ತಾಯಿನಾಡಿಗೆ

ಗೀತಾ ತಾಯಿನಾಡಿಗೆ

ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಗೀತಾಳನ್ನು ತಾಯಿನಾಡಿಗೆ ಬರಮಾಡಿಕೊಳ್ಳಲಾಗಿತ್ತು. ಈ ವೇಳೆ ಸಹ ಪಾಕಿಸ್ತಾನದ ಕೆಲ ಪ್ರಮುಖ ಅಧಿಕಾರಿಗಳು ಬಂದಿದ್ದರು.

ಷರೀಪ್ ಮನೆಗೆ ಭೇಟಿ

ಪಾಖ್ ಪ್ರಧಾನಿ ನವಾಜ್ ಷರೀಪ್ ಮನೆಗೆ ಭೇಟಿ ನೀಡಿ ಅವರ ಮೊಮ್ಮಗಳನ್ನು ಹರಸಿದರು.

ಮೋದಿ ವಿರೋಧಿಗಳ ಪ್ರತಿಕ್ರಿಯೆ

ಪಾಕಿಸ್ತಾನಕ್ಕೆ ಭೇಟಿ ನೀಡಿದ ಪ್ರಧಾನಿಗೆ ಭವ್ಯ ಸ್ವಾಗತವೂ ಸಿಕ್ಕಿತು. ಈ ವೇಳೆ ಮೋದಿ ವಿರೋಧಿಗಳ ಪ್ರತಿಕ್ರಿಯೆ ಹೀಗಿತ್ತು!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian Prime Minister Narendra Modi arrived here on Friday evening on a surprise visit from Kabul for talks with his Pakistani counterpart Nawaz Sharif. Modi and Sharif warmly embraced one another as he got off the Indian Air Force plane and extended birthday greetings to the Pakistani leader at the Allama Iqbal International Airport.
Please Wait while comments are loading...