ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ನಲ್ಲಿ ವಿಶ್ವದ ನಾಯಕರ ಪೈಕಿಯೇ ಪ್ರಧಾನಿ ಮೋದಿಗೆ ಅದ್ಭುತ ಸ್ವಾಗತ

|
Google Oneindia Kannada News

ಯಮನಶಿ (ಜಪಾನ್), ಅಕ್ಟೋಬರ್ 28: ಇಲ್ಲಿ ಭಾನುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಪಾನ್ ನ ಪ್ರಧಾನಿ ಷಿಂಜೊ ಅಬೆ ಸ್ವಾಗತಿಸಿದರು. ಇದೇ ಮೊದಲ ಬಾರಿಗೆ ಜಪಾನ್ ನ ಪ್ರಧಾನಿ ಹಾಲಿಡೇ ಹೋಮ್ ಗೆ ವಿಶ್ವ ನಾಯಕರೊಬ್ಬರು ಭೇಟಿ ನೀಡಲಿದ್ದು, ಮೋದಿ ಅವರಿಗಾಗಿ ಔತಣ ಕೂಟ ಏರ್ಪಡಿಸಲಾಗಿದೆ.

ಜಪಾನ್ ನ ಟೋಕಿಯೋಗೆ ಶನಿವಾರ ಬಂದಿಳಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ಯುಜಿ ಪರ್ವತದ ಬಳಿ ಇರುವ ಷಿಂಜೋ ಅಬೆ ಅವರು ಹಾಲಿಡೇ ಹೋಮ್ ಗೆ ಭಾನುವಾರ ಭೇಟಿ ನೀಡಲಿದ್ದು, ಆ ನಂತರ ಇಬ್ಬರೂ ನಾಯಕರು ಅಲ್ಲಿಂದ ಟೋಕಿಯೋಗೆ ರೈಲಿನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಭಾರತ-ಜಪಾನ್ ಮಧ್ಯದ ಬಾಂಧವ್ಯ ವೃದ್ಧಿಗೆ ಮಹತ್ವದ ಮಾತುಕತೆ ನಡೆಯಲಿದೆ.

'ಬುಲೆಟ್ ಟ್ರೇನ್'ಗೆ ಹಣದ ನೆರವು ನಿಲ್ಲಿಸಿದ ಜಪಾನ್, ಅಯ್ಯೋ ಇದೇನು?'ಬುಲೆಟ್ ಟ್ರೇನ್'ಗೆ ಹಣದ ನೆರವು ನಿಲ್ಲಿಸಿದ ಜಪಾನ್, ಅಯ್ಯೋ ಇದೇನು?

ಯಮನಶಿಯು ಟೋಕಿಯೋದಿಂದ ನೂರಾ ಹತ್ತು ಕಿಲೋಮೀಟರ್ ದೂರದಲ್ಲಿದೆ. ಫ್ಯುಜಿ ಪರ್ವತ ಸೇರಿದಂತೆ ವಿವಿಧ ಪರ್ವತಗಳು ಸುತ್ತುವರಿದಿರುವ ಸುತ್ತುವರೆದಿರುವ ಸುಂದರ ಪ್ರದೇಶ ಇದು. "ಪ್ರಧಾನಿ ಷಿಂಜೊ ಅಬೆ ಅವರು ಮೋದಿ ಅವರಿಗಾಗಿ ಆಯೋಜಿಸಿರುವ ಅತ್ಯಂತ ವಿಶೇಷ ಔತಣ ಕೂಟ ಇದು. ಅಬೆ ಅವರ ಹಾಲಿಡೇ ಹೋಮ್ ಗೆ ಭೇಟಿ ನೀಡುತ್ತಿರುವ ವಿಶ್ವದ ಮೊದಲ ನಾಯಕರು ಮೋದಿ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಕಳೆದ ವಾರ ತಿಳಿಸಿದ್ದರು.

ರೋಬೋಟ್ ಕಾರ್ಖಾನೆಗೆ ಭೇಟಿ

ರೋಬೋಟ್ ಕಾರ್ಖಾನೆಗೆ ಭೇಟಿ

ಇಬ್ಬರೂ ನಾಯಕರು ರೋಬೋಟ್ ಉತ್ಪಾದನೆ ಮಾಡುವ ಕಾರ್ಖಾನೆ ಫನುಕ್ ಕಾರ್ಫ್ ಗೆ ಭೇಟಿ ನೀಡಲಿದ್ದಾರೆ. ರಕ್ಷಣೆ ಹಾಗೂ ಭದ್ರತೆ ವಿಚಾರದಲ್ಲಿ ಇಂಡೋ-ಪೆಸಿಫಿಕ್ ಭಾಗದಲ್ಲಿ ಸಹಕಾರ, ಭಾರತದ ಅಭಿವೃದ್ಧಿಯಲ್ಲಿ ಜಪಾನ್ ನ ಸಹಕಾರದ ಬಗ್ಗೆ ಚರ್ಚೆ ನಡೆಯಲಿದೆ. ಭಾರತ-ಜಪಾನ್ ಹದಿಮೂರನೇ ಸಮಾವೇಶ ನಡೆಯಲಿದ್ದು, ಕಳೆದ ಲೋಕಸಭಾ ಚುನಾವಣೆ ನಂತರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಜಪಾನ್ ನ ಪ್ರಧಾನಿ ಅಬೆ ಹಾಗೂ ನರೇಂದ್ರ ಮೋದಿ ಅವರ ಹನ್ನೆರಡನೇ ಭೇಟಿ ಇದಾಗಿದೆ.

ಪ್ರತಿ ವರ್ಷ ದ್ವಿಪಕ್ಷೀಯ ಚರ್ಚೆ

ಪ್ರತಿ ವರ್ಷ ದ್ವಿಪಕ್ಷೀಯ ಚರ್ಚೆ

ಜಪಾನ್ ದೇಶವು ಪ್ರತಿ ವರ್ಷ ಭಾರತದ ಜತೆ ದ್ವಿಪಕ್ಷೀಯ ಚರ್ಚೆ ನಡೆಸುತ್ತದೆ. ಇಂಥದ್ದೇ ಮಾತುಕತೆಯನ್ನು ಪ್ರತಿ ವರ್ಷ ರಷ್ಯಾ ಜತೆಗೆ ಭಾರತ ನಡೆಸುತ್ತದೆ. ಭಾರತ ಹಾಗೂ ಜಪಾನ್ ಗೆಲುವಿನ ಜೊತೆಗಾರರು ಎಂದು ಮೋದಿ ಬಣ್ಣಿಸಿದ್ದಾರೆ. ಆರ್ಥಿಕ ಹಾಗೂ ತಾಂತ್ರಿಕ ಆಧುನೀಕರಣದಲ್ಲಿ ದೆಹಲಿಯ ನಂಬಿಕಸ್ತ ಸಹಭಾಗಿ ಜಪಾನ್ ಎಂದು ಕರೆದಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಉದ್ಯಮಿಗಳ ಜತೆಗೆ ಪ್ರಧಾನಿ ಸಂವಾದ

ಉದ್ಯಮಿಗಳ ಜತೆಗೆ ಪ್ರಧಾನಿ ಸಂವಾದ

ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾದಂಥ ಭಾರತದ ಯೋಜನೆಗಳಲ್ಲಿ ಜಪಾನ್ ನ ಪಾತ್ರ ಮಹತ್ತರವಾಗಿದೆ. ಜಪಾನ್ ನ ಹೂಡಿಕೆದಾರರು ಭಾರತದ ಆರ್ಥಿಕ ಭವಿಷ್ಯದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಇದರಿಂದ ಅದ್ಭುತ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಹೇಳಿರುವ ಪ್ರಧಾನಿ ಮೋದಿ, ಟೋಕಿಯೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ನಿರಂತರವಾಗಿ ಅಲ್ಲಿನ ವ್ಯಾಪಾರಿಗಳು ಹಾಗೂ ಉದ್ಯಮಗಳ ಜತೆಗೆ ಸಂವಾದ ನಡೆಸಲಿದ್ದಾರೆ.

ವಿಶೇಷ ಔತಣ ಕೂಟ ಆಯೋಜನೆ

ವಿಶೇಷ ಔತಣ ಕೂಟ ಆಯೋಜನೆ

ಜಪಾನ್ ನ ರಾಜಮನೆತನದ ಅಕಿಹಿಟೊ ಟೋಕಿಯೋದಲ್ಲಿ ಇಲ್ಲ. ಆದ್ದರಿಂದ ಮೋದಿ ಅವರಿಗೆ ಅಕಿಹಿಟೊ ಭೇಟಿ ಸಾಧ್ಯವಾಗುತ್ತಿಲ್ಲ. ಇಬ್ಬರೂ ನಾಯಕರ ಮಧ್ಯೆ ಮಾತುಕತೆ ಆದ ಮೇಲೆ ಸೋಮವಾರದಂದು ಜಪಾನ್ ನ ಪ್ರಧಾನಿ ಷಿಂಜೊ ಅಬೆ ಅವರು ಪ್ರಧಾನಿ ನರೇಂದ್ರ ಮೋದಿಗಾಗಿ ಔತಣ ಕೂಟವೊಂದನ್ನು ಆಯೋಜಿಸಲಿದ್ದಾರೆ. ಆ ನಂತರ ಮೋದಿ ಅವರು ಭಾರತಕ್ಕೆ ಹೊರಡಲಿದ್ದಾರೆ.

English summary
Prime Minister Narendra Modi was welcomed by his Japanese counterpart Shinzo Abe in the city of Yamanashi on Sunday. PM Modi, who landed in Tokyo yesterday, has a packed schedule during his two-day visit to attend the 13th India-Japan summit. This is PM Modi's third visit to the island nation for the summit. It will be his 12th meeting with Abe since 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X