ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಭಯಕುಶಲೋಪರಿ ಹಂಚಿಕೊಂಡ ಮೋದಿ-ಪುಟಿನ್

|
Google Oneindia Kannada News

Recommended Video

ಉಭಯಕುಶಲೋಪರಿ ಹಂಚಿಕೊಂಡ ಮೋದಿ-ಪುಟಿನ್ | Oneindia kannada

ಜೋಹಾನ್ಸ್ ಬರ್ಗ್, ಜುಲೈ 27: ಬ್ರಿಕ್ಸ್ ಸಮಿತಿ ಸಭೆ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಜೋಹಾನ್ಸ್ ಬರ್ಗ್ ನಲ್ಲಿ ಭೇಟಿಯಾದರು.

"ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗುವ ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ. ಸೋಚಿಯಲ್ಲಿ ನಾವಿಬ್ಬರು ಭೇಟಿಯಾದ ಕ್ಷಣಗಳನ್ನು ನಾನು ಆಗಾಗ ಮೆಲುಕು ಹಾಕುತ್ತಿರುತ್ತೇನೆ. ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಮುಂದುವರಿಯಲು ಇದೊಂದು ವೇದಿಕೆ" ಎಂದು ಮೋದಿ, ಪುಟಿನ್ ಅವರಿಗೆ ಹೇಳಿದರು.

ಪುಟಿನ್ ನೋಡಿ ಬೆದರಿದರೇ ಮೆಲಾನಿಯಾ ಟ್ರಂಪ್?: ತಮಾಷೆಯ ವೈರಲ್ ವಿಡಿಯೋಪುಟಿನ್ ನೋಡಿ ಬೆದರಿದರೇ ಮೆಲಾನಿಯಾ ಟ್ರಂಪ್?: ತಮಾಷೆಯ ವೈರಲ್ ವಿಡಿಯೋ

ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರ-ವಹಿವಾಟು ಕಳೆದೊಂದು ವರ್ಷಗಳಲ್ಲಿ ಶೇ.24 ರಷ್ಟು ಹೆಚ್ಚಾಗಿದೆ ಎಂದು ಇದೇ ಸಂದರ್ಭದಲ್ಲಿ ಪುಟಿನ್ ಹೇಳಿದರು.

PM Modi meets Russian President Putin

ನಾವು ಅಕ್ಟೋಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದೇವೆ. ಇದು ನಮ್ಮ ಪರಸ್ಪರ ವ್ಯಾಪಾರ ಸಹಕಾರ ಮುಂದುವರಿಯಲು ಸಹಾಯಕವಾಗಲಿದೆ ಎಂದರು.

ಫಿಫಾ ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಪುಟಿನ್ ಅವರಿಗೆ ಮೋದಿ ಅಭಿನಂದನೆ ಸಲ್ಲಿಸಿದರು. ನಿನ್ನೆ(ಜು.26)ಯಿಂದ ಆರಂಭವಾಗಿರುವ ಬ್ರಿಕ್ಸ್ ಸಮಿತಿ ಸಭೆ ಮೂರು ದಿನಗಳ ಕಾಲ ನಡೆಯಲಿದೆ.

English summary
Prime Minister Narendra Modi met with Russian President Vladimir Putin on the sidelines of the BRICS summit here on Thursday (local time).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X