ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸಿಯನ್ ಶೃಂಗಸಭೆಯಲ್ಲಿ ಮೋದಿ: ಮಲೇಷ್ಯಾ ಪ್ರವೇಶಿಸಿದ 10 ಉಗ್ರರು

|
Google Oneindia Kannada News

ಕೌಲಾಲಂಪುರ, ನ 21: ವಿಶ್ವದ ಪ್ರಮುಖ ಮುಖಂಡರು ಭಯೋತ್ಪಾದನೆ ನಿಗ್ರಹದ ಬಗ್ಗೆ ಕೈಜೋಡಿಸುವ ವಿಚಾರದಲ್ಲಿ ಮಾತುಕತೆ ನಡೆಸುತ್ತಿರುವ ಸಮಯದಲ್ಲೇ, ಹತ್ತು ಮಂದಿ ಉಗ್ರರು ಮಲೇಷ್ಯಾದ ರಾಜಧಾನಿ ಕೌಲಾಲಂಪುರ ಪ್ರವೇಶಿಸಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಶನಿವಾರದಿಂದ ( ನ 21) ಆರಂಭವಾಗಿರುವ ಆಸಿಯನ್ - ಈಸ್ಟ್ ಏಷ್ಯಾ ಶೃಂಗ ಸಭೆಯನ್ನು ಟಾರ್ಗೆಟ್ ಮಾಡಿಕೊಂಡು ಜಂಟಿಯಾಗಿ ಕೆಲವೊಂದು ಉಗ್ರ ಸಂಘಟನೆಗಳು ವಿಧ್ವಂಸಕಾರಿ ಕೃತ್ಯ ನಡೆಸಲು ಒಂದಾಗಿದೆ ಎನ್ನುವ ಮಾಹಿತಿಯನ್ನು ಮಲೇಷ್ಯಾ ಗುಪ್ತಚರ ಇಲಾಖೆ ವರದಿ ಮಾಡಿದೆ.

ವಿಶ್ವದೆಲ್ಲಡೆ ಉಗ್ರ ಚಟುವಟಿಕೆಯನ್ನು ವಿಸ್ತರಿಸಲು ಯೋಜನೆ ಹಾಕಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್), ಮೊರೋ ನ್ಯಾಷನಲ್ ಲಿಬರೇಶನ್ ಮತ್ತು ಅಬುಸಯ್ಯಾಫ್ ಉಗ್ರ ಸಂಘಟನೆಯ ಜೊತೆ ಕೈಜೋಡಿಸಿ ಕೌಲಾಲಂಪುರದ ಆಯಕಟ್ಟಿನ ಜಾಗದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖ ರಾಷ್ಟ್ರರು ಆಸಿಯನ್ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದು, ಈ ಸಮಯದಲ್ಲಿ ದಾಳಿ ನಡೆಸಿ ತನ್ನ ಶಕ್ತಿ ತೋರಿಸುವುದು ಇಸ್ಲಾಮಿಕ್ ಸಂಘಟನೆಗಳ ಉದ್ದೇಶ ಎನ್ನಲಾಗುತ್ತಿದೆ.

ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನಾಧರಿಸಿ, ಭಾರೀ ಭದ್ರತೆಗೆ ಮುಂದಾಗಿರುವ ಮಲೇಷ್ಯಾ ಸರಕಾರ 2500ಕ್ಕೂ ಅಧಿಕ ಪೊಲೀಸರು ಮತ್ತು ಎರಡು ಸಾವಿರಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಯ ಸರ್ಪಗಾವಲನ್ನು ನಿಯೋಜಿಸಿದೆ.

ಐಎಸ್ಐಎಸ್ ಉಗ್ರರ ಮೇಲೆ ರಷ್ಯಾ ಭರ್ಜರಿ ಭೇಟೆ, ಮುಂದೆ ಓದಿ..

ಸಿರಿಯಾ, ಇರಾಕ್ ನಲ್ಲಿ ಹೈಟೆಕ್ ತರಬೇತಿ

ಸಿರಿಯಾ, ಇರಾಕ್ ನಲ್ಲಿ ಹೈಟೆಕ್ ತರಬೇತಿ

ಸಿರಿಯಾ, ಅಪಘಾನಿಸ್ಥಾನ ಮತ್ತು ಇರಾಕ್ ನಲ್ಲಿ ಹೈಟೆಕ್ ತರಬೇತಿ ಪಡೆದಿರುವ ಹತ್ತು ಮಂದಿ ಉಗ್ರರು, ಆಧುನಿಕ ಆಯುಧಗಳ ಮೂಲಕ ಮಲೇಷ್ಯಾ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. (File Photo)

ಮಲೇಷ್ಯಾ ಪ್ರಧಾನಿ ಹೇಳಿಕೆ

ಮಲೇಷ್ಯಾ ಪ್ರಧಾನಿ ಹೇಳಿಕೆ

ಈ ಬಗ್ಗೆ ಮಾತನಾಡಿರುವ ಮಲೇಷ್ಯಾ ಪ್ರಧಾನಿ, ಉಗ್ರರ ಆಟ ನಮ್ಮ ದೇಶದಲ್ಲಿ ನಡೆಯುವುದಿಲ್ಲ, ಭಯೋತ್ಪಾದಕರನ್ನು ಸದೆಬಡೆಯಲು ನಾನು ಸರ್ವ ಸನ್ನದ್ದರಾಗಿದ್ದೇವೆ. ಆಸಿಯನ್ ಶೃಂಗ ಸಭೆ ಯಶಸ್ವಿಯಾಗಿ ನಡೆಯಲಿದೆ ಎಂದು ನಾಜೀಬ್ ರಝಾಕ್ ಹೇಳಿದ್ದಾರೆ.

ಸಭೆಯಲ್ಲಿ ಮೋದಿ ಭಾಷಣ

ಸಭೆಯಲ್ಲಿ ಮೋದಿ ಭಾಷಣ

ಭಾರತದಲ್ಲಿ ಜಿಡಿಪಿ ಏರಿಕೆಯಾಗಿದ್ದು, ಹಣದುಬ್ಬರ ಇಳಿಕೆಯಾಗಿದೆ. ನಾವು ವಿದೇಶಿ ನೀತಿಗಳನ್ನು ಬದಲಿಸಿದ್ದೇವೆ, ದೇಶದ ಐವತ್ತು ನಗರಗಳು ಮೆಟ್ರೋ ಸೇವೆಗೆ ಸಜ್ಜಾಗಿದೆ. ನಿಮ್ಮ ಹೂಡಿಕೆಗೆ ನಾವು ಭದ್ರತೆ ನೀಡುತ್ತೇವೆಂದು ಪ್ರಧಾನಿ ಮೋದಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ರಷ್ಯಾ ಮಿಲಿಟರಿಯ ಭರ್ಜರಿ ಭೇಟೆ

ರಷ್ಯಾ ಮಿಲಿಟರಿಯ ಭರ್ಜರಿ ಭೇಟೆ

ಈ ನಡುವೆ ಸಿರಿಯಾದ ಉಗ್ರರ ಮೇಲೆ ಭರ್ಜರಿ ಭೇಟೆಯಾಡಿರುವ ರಷ್ಯಾ ಮಿಲಿಟರಿ, ಸುಮಾರು 600ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದೆ. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ನೆಲೆಗಳ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು , ತೈಲ ಸಂಗ್ರಾಹಾರದ ಮೇಲೆ ದಾಳಿ ನಡೆಸಿದೆ. (File Photo)

ಅಮೆರಿಕಾಕೂ ಎಚ್ಚರಿಕೆ

ಅಮೆರಿಕಾಕೂ ಎಚ್ಚರಿಕೆ

ಅಮೆರಿಕಾಕ್ಕೂ ವಿಡಿಯೋ ಮೂಲಕ ಎಚ್ಚರಿಕೆ ನೀಡಿರುವ ಐಎಸ್ಐಎಸ್, ಶ್ವೇತಭವನವನ್ನು ಉಡಾಯಿಸುವುದಾಗಿ ಬೆದರಿಕೆ ಹಾಕಿದೆ. ನ್ಯೂಯಾರ್ಕ್ ನಗರದ ಮೇಲೂ ದಾಳಿ ನಡೆಸುವುದಾಗಿ ವಿಡಿಯೋ ಸಂದೇಶದ ಮೂಲಕ ISIS ಎಚ್ಚರಿಕೆ ನೀಡಿದೆ.

English summary
Prime Minister Narendra Modi in ASEAN, East Asia meet, ten terrorist entered Malaysia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X