ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ನೂತನ ಪ್ರಧಾನಿ ಯೋಶಿಹಿದೆ ಸುಗಾಗೆ ಮೋದಿ ಶುಭಾಶಯ

|
Google Oneindia Kannada News

ಟೋಕಿಯೋ, ಸೆಪ್ಟೆಂಬರ್ 16: ಜಪಾನ್‌ನ ನೂತನ ಪ್ರಧಾನಿಯಾಗಿ ಅಧಿಕೃತವಾಗಿ ಆಯ್ಕೆಯಾಗಿರುವ ಯೋಶಿಹಿದೆ ಸುಗಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.

Recommended Video

Japan ದೇಶದ ಹೊಸ ಪ್ರಧಾನಿ ಯಾರು ,ಇವರ ಹಿನ್ನಲೆ ಏನು ? | Oneindia Kannada

ಜಪಾನ್‌ನ ಹೊಸ ಪ್ರಧಾನಿಯಾಗಿ ಯೋಶಿಹಿದೆ ಅಧಿಕೃತ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಯೊಶಿಹಿಡೆ ಸುಗಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ವಿಶೇಷವಾದ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಜಂಟಿಯಾಗಿ ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆಂದು ಹೇಳಿದ್ದಾರೆ.

ರೈತನ ಮಗ ಸುಗಾ, ಮುಂದಿನ ಜಪಾನ್ ಪ್ರಧಾನಿ ರೈತನ ಮಗ ಸುಗಾ, ಮುಂದಿನ ಜಪಾನ್ ಪ್ರಧಾನಿ

ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿದ್ದ ಸುಗಾ ಅವರನ್ನು ಸಂಸತ್ತಿನ ಕೆಳಮನೆ ಚುನಾಯಿಸಿದೆ. ಕೆಳಮನೆಯಲ್ಲಿ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಬಹುಮತ ಹೊಂದಿದೆ.

ಜಪಾನ್‌ನ ಆರ್ಥಿಕ ಸ್ಥಿತಿಯು ಮುಖ್ಯವಾಗಿ ಕೊವಿಡ್‌ನ ಸಮಯದಲ್ಲಿ ದೊಡ್ಡ ಸವಾಲು ಎದುರಿಸುತ್ತಿದ್ದು, ಇದಕ್ಕೆ ಆರ್ಥಿಕ ಕಾರ್ಯತಂತ್ರವನ್ನು ಒಳಗೊಂಡಂತೆ ಅಬೆ ಅವರು ಜಾರಿಗೆ ಅನೇಕ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಸುಗಾ ವಾಗ್ದಾನ ಮಾಡಿದ್ದಾರೆ.

PM Modi Congratulates Yoshihide Suga On His Appointment As Japans New PM

ಕರುಳಿನ ಕ್ಯಾನ್ಸರ್ ಹಿನ್ನೆಲೆ ಆಗಸ್ಟ್‌ನಲ್ಲಿ ಶಿಂಜೋ ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಬೆ ಅವರಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಕೃಷಿಕನ ಮಗ ಯೋಶಿಹಿದೆ ಸುಗಾ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಯೋಶಿಹಿದೆ ಸುಗಾ ಈಗಾಗಲೇ ಚೀಫ್ ಕ್ಯಾಬಿನೆಟ್ ಸೆಕ್ರೆಟರಿ ರೀತಿಯ ಉನ್ನತ ಹುದ್ದೆಗಳನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ.

English summary
Prime Minister Narendra Modi on Wednesday congratulated Yoshihide Suga on being elected as the new prime minister of Japan and said he looks forward to jointly taking New Delhi and Tokyo Special Strategic and Global Partnership to "new heights".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X