ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನಿನಲ್ಲಿ ಜಿ20 ಶೃಂಗಸಭೆ: ಟ್ರಂಪ್ ರನ್ನು ಭೇಟಿಯಾಗಲಿರುವ ಮೋದಿ

|
Google Oneindia Kannada News

ಒಸಾಕಾ(ಜಪಾನ್), ಜೂನ್ 27: ಜಪಾನಿನ ಒಸಾಕಾದಲ್ಲಿ ಜೂನ್ 28-29 ರಂದು ನಡೆಯಲಿರುವ ಜಿ 20 ಶೃಂಗ ಸಭೆಯಲ್ಲಿ ಭಾಗವ ಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಿಗ್ಗೆ ಜಪಾನಿಗೆ ತೆರಳಿದ್ದಾರೆ.

ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಹಲವು ಗಣ್ಯರನ್ನು ಭೇಟಿಯಾಗಲಿದ್ದಾರೆ.

ಪೊಂಪಿಯೋ-ಮೋದಿ ಭೇಟಿ: ಮಹತ್ವದ ವಿಷಯಗಳ ಕುರಿತು ಚರ್ಚೆಪೊಂಪಿಯೋ-ಮೋದಿ ಭೇಟಿ: ಮಹತ್ವದ ವಿಷಯಗಳ ಕುರಿತು ಚರ್ಚೆ

PM Modi arrives in Japan to attend G20 summit meetng

ಮಹಿಳಾ ಸಬಲೀಕರಣ, ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಬಹಳ ಮುಖಕ್ಯವಾಗಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಒಗ್ಗಟ್ಟಿನ ನಿರ್ಣಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎಂದು ಜಪಾನಿಗೆ ಹೊರಡುವ ಮುನ್ನ ನವದೆಹಲಿಯಲ್ಲಿ ನರೇಂದ್ರ ಮೋದಿ ತಿಳಿಸಿದರು.

ಕಳೆದ ಐದು ವರ್ಷಗಳಲಲ್ಲಿ ಭಾರತ ಸಾಧಿಸಿದ ಅಭಿವೃದ್ಧಿಯ ಬಗ್ಗೆ ವಿವರಿಸಲೂ ಈ ಸಭೆ ವೇದಿಕೆಯಾಗಲಿದೆ ಎಂದ ಮೋದಿ, ಭಾರತದ ಮತದಾರರು ಈ ಬಾರಿ ಇಂಥ ಜನಾದೇಶ ನೀಡಲು ಆ ಅಭಿವೃದ್ಧಿಯೇ ಕಾರಣ ಎಂದರು.

ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗುರಾಜ್ಯ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗು

ನಮ್ಮ ಪಾಲುದಾರ ದೇಶಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಜಾಗತಿಕ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದೇನೆ. ಅಷ್ಟೇ ಅಲ್ಲ ಮುಂದಿನ ಆರ್ ಐಸಿ(ರಷ್ಯಾ, ಭಾರತ ಮತ್ತು ಚೀನಾ) ಅನೌಪಚಾರಿಕ ಸಮಿತಿ, ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ) ಸಮಿತಿ, ಜೈ(ಅಪಾನ್, ಅಮೆರಿಕ ಮತ್ತು ಭಾರತ) ಸಮಿತಿಗಳ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದು ಮೋದಿ ಹೇಳಿದರು.

English summary
Prime Minister Narendra Modi on Thursday arrived in Japan for the G20 Summit . He will meet with the world leaders including US President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X