ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ 83 ಪ್ರಯಾಣಿಕರಿದ್ದ ಅರಿಯಾನ ವಿಮಾನ ಪತನ

|
Google Oneindia Kannada News

ಕಾಬುಲ್, ಜನವರಿ 27: 83 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಅರಿಯಾನ ಏರ್‌ಲೈನ್ಸ್ ಅಫ್ಘಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಸೋಮವಾರ ಮತನವಾಗಿದೆ.

Recommended Video

ಅಂಬೇಡ್ಕರ್ ಮೊಮ್ಮಗನ ವಿವಾದಾತ್ಮಕ ಹೇಳಿಕೆ | AMBEDKAR | RAJARATHNA AMBEDKAR | GRANDSON | RSS

ಈ ಬಗ್ಗೆ ಘಜನಿ ನಗರದಲ್ಲಿರುವ ಪ್ರಾಂತೀಯ ಗವರ್ನರ್​ ಕಚೇರಿಯ ವಕ್ತಾರ ಆರೀಫ್​ ನೂರಿ ಮಾತನಾಡಿ, ಬೋಯಿಂಗ್​ ವಿಮಾನವು ಅರಿಯಾನ ಆಫ್ಘಾನ್​ ಏರ್​ಲೈನ್​ಗೆ ಸೇರಿದ್ದಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ಸುಮಾರಿಗೆ ಘಜನಿ ಪ್ರಾಂತ್ಯದ ದೇಹ್​ ಏಕ್​ ಜಿಲ್ಲೆಯ ಸಾಡೋ ಖೇಲ್​ ಏರಿಯಾದಲ್ಲಿ ಪತನವಾಗಿದೆ ಎಂದು ಹೇಳಿದ್ದಾರೆ.

ಏರ್‌ಪೋರ್ಟ್‌ ಬದಲು ನೇರವಾಗಿ ರಸ್ತೆಗಿಳಿದ ಇರಾನ್ ವಿಮಾನ ಏರ್‌ಪೋರ್ಟ್‌ ಬದಲು ನೇರವಾಗಿ ರಸ್ತೆಗಿಳಿದ ಇರಾನ್ ವಿಮಾನ

ವಿಮಾನದಲ್ಲಿ ಒಟ್ಟು 83 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಈವರೆಗೂ ಯಾವುದೇ ಸಾವು-ನೋವುಗಳು ಆಗಿರುವ ಬಗ್ಗೆ ವರದಿಯಾಗಿಲ್ಲ. ವಿಮಾನವು ತಾಲಿಬಾನ್​ ಏರಿಯಾದಲ್ಲಿ ಪತನವಾಗಿದೆ ಎಂದು ಹೇಳಲಾಗುತ್ತಿದೆ.

Plane Crashes In Afghanistans Ghazni

ಈ ವಿಮಾನವು ಹೀರಟ್‌ನಿಂದ ಘಜನಿಗೆ ತೆರಳುತ್ತಿತ್ತು. ತಾಲಿಬಾನ್ ಆಡಳಿತವಿರುವ ಪ್ರದೇಶದಲ್ಲಿ ಪತನವಾಗಿದೆ. ಪತನದಿಂದ ಯಾವುದೇ ಹಾನಿಯಾಗಿಲ್ಲ, ಪ್ರಾಣಾಪಾಯವೂ ಆಗಿಲ್ಲ ಎಂದು ವೆಬ್‌ಸೈಟ್‌ ಒಂದರಲ್ಲಿ ಬರೆದುಕೊಂಡಿದ್ದಾರೆ.

2005ರಲ್ಲಿ ಕಾಬೂಲ್‌ನಿಂದ ಹೀರಟ್‌ಗೆ ಆಗಮಿಸುತ್ತಿದ್ದ ವಿಮಾನವು ಹೆಚ್ಚಿನ ಮಂಜು ಕವಿದ ವಾತಾವರಣದಿಂದಾಗಿ ಪರ್ವತದ ಮೇಲೆ ಅಪ್ಪಳಿಸಿತ್ತು.
2013ರಲ್ಲಿ ಅಮೆರಿಕದ ಬೋಯಿಂಗ್ 747 ಕಾರ್ಗೊ ಜೆಟ್ ಬಾಗ್ರಮ್ ಏರ್‌ಬೇಸ್ ಬಳಿ ಪತನವಾಗಿತ್ತು. ಅದು ಕಾಬೂಲ್‌ನಿಂದ ದುಬೈಗೆ ಹೊರಟಿದ್ದ ವಿಮಾನವಾಗಿತ್ತು. ಅದರಲ್ಲಿ 7 ಮಂದಿ ಮೃತಪಟ್ಟಿದ್ದರು.

English summary
Senior Afghan officials say a plane has crashed in eastern Ghazni province, but the country's state-owned Ariana Airlines denied reports that one of its planes had crashed on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X