ಸುಡಾನ್ ನಲ್ಲಿ ವಿಮಾನ ಪತನ; ಪ್ರಯಾಣಿಕರು ಪವಾಡ ಸದೃಶ ಪಾರು!

Posted By:
Subscribe to Oneindia Kannada

ಜುಬಾ, ಮಾರ್ಚ್ 20: ಸುಮಾರು ನಲವತ್ತನಾಲ್ಕು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆ ವೇಳೆಗೆ ದಕ್ಷಿಣ ಸುಡಾನ್ ನಲ್ಲಿ ಅಗ್ನಿ ಅವಗಢಕ್ಕೆ ತುತ್ತಾಗಿದೆ ಎಂದು ಮೂಲಗಳು ತಿಳಿಸಿದೆ. ಈ ವಿಮಾನವು ಸೌತ್ ಸ್ಪಿಯರ್ ಮಿಯರ್ ವಿಮಾನ ಸಂಸ್ಥೆಗೆ ಸೇರಿದ ವಿಮಾನ ಎನ್ನಲಾಗಿದೆ.

ಪವಾಡ ಎಂಬಂತೆ, ವಿಮಾನದಲ್ಲಿದ್ದ ಎಲ್ಲಾ 43 ಪ್ರಯಾಣಿಕರೂ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾರೆಂದು ಸಿಎನ್ ಎನ್ ಹೇಳಿದೆ. ಆರಂಭದಲ್ಲಿ ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು.

Plane crash in South Sudan killing all passenges on board

ಆನಂತರ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು, ವಿಮಾನ ಕೆಳಗಿಳಿದ ಮೇಲೆ ಭಸ್ಮವಾಗುತ್ತಾ ನಿಂತಿದ್ದಾಗ ಒಳಗಿರುವ ಎಲ್ಲರೂ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತು. ಆದರೆ, ಕೆಲ ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲಾ ಪ್ರಯಾಣಿಕರೂ ಬದುಕುಳಿದಿರುವುದಾಗಿ ಹೇಳಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಆಕಾಶದಲ್ಲಿ ಹಾರಾಡುವಾಗ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಮಾನವನ್ನು ತಕ್ಷಣವೇ ಕೆಳಗಿಸಲು ಪ್ರಯತ್ನಿಸಲಾಯಿತು. ಆಗ, ದಕ್ಷಿಣ ಸುಡಾನ್ ನ ವುವು ವಿಮಾನ ನಿಲ್ದಾಣದ ಕಂಟ್ರೋಲ್ ರೂಂ ಸಹಾಯ ಪಡೆದು ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡುತ್ತಲಿರುವಾಗಲೇ ಇಡೀ ವಿಮಾನ ಭಸ್ಮವಾಯಿತು ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A plane carrying 44 passengers has crashed in South Sudan. Initial reports stated that none of the passengers on board have survived the crash. But, miraculously all the passengers have survived.
Please Wait while comments are loading...