ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾನಂಗಳದಲ್ಲಿ ರಂಗುರಂಗೇರಿದ ಚಂದಿರನ ಶೃಂಗಾರಕಾವ್ಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28 : ಜಗತ್ ಪ್ರಳಯದ ಕೂಗು ಬಂದ್ ಆಗಿದೆ. ಆದರೆ ಕೆಂಪು ಚಂದ್ರ ಆಗಸದಲ್ಲಿ ದರ್ಶನ ನೀಡಿದ್ದಾನೆ. ಭೂಮಿಗೆ ಅತಿ ಹತ್ತಿರದ ಚಂದ್ರನನ್ನು ಜಗತ್ತಿನಾದ್ಯಂತ ಜನ ಕಣ್ಣು ತುಂಬಿಕೊಂಡಿದ್ದಾರೆ. ಆದರೆ ಭಾರತೀಯರಿಗೆ ಕೆಂಪು ಚಂದ್ರನ ಕಾಣುವ ಅದೃಷ್ಟ ಸಿಕ್ಕಿಲ್ಲ.

ಇನ್ನು ನಭೋಮಂಡಲದಲ್ಲಿ ಇಂಥ ವಿಶಿಷ್ಟ ವಿದ್ಯಮಾನ ನೋಡಲು 2033ರ ವರೆಗೆ ಕಾಯಬೇಕು. ಅನಂತ ಹುಣ್ಣಿಮೆಯಂದು ಶೇ.14ರಷ್ಟು ದೊಡ್ಡದಾಗಿ ಕಂಗೊಳಿಸಿದ ಚಂದ್ರನನ್ನು ಕಣ್ಣು ತುಂಬಿಕೊಳ್ಳದೇ ಇದ್ದರೆ ಹೇಗೆ?[ಕೆಂಪು ಚಂದ್ರನ ಬಗ್ಗೆ ನಾಸಾ ಹೇಳಿದ್ದೇನು)

ಸೂಪರ್ ಮೂನ್ ಹಿನ್ನೆಲೆಯಲ್ಲಿ ಅನೇಕ ಉಹಾಪೋಹಗಳು ಎದ್ದಿದ್ದವು. ಚಂದ್ರ ಅತಿ ಹತ್ತಿರಕ್ಕೆ ಬರುತ್ತಾನೆ. ಕೆಂಪದಾಗಿ ಗೋಚರಿಸುತ್ತಾನೆ. ಭೂಮಿಯ ಅಂತ್ಯವಾಗುತ್ತದೆ. ಜಗತ್ ಪ್ರಳಯವಾಗುತ್ತದೆ ಎಂಬ ಕೂಗುಗಳು ಎದ್ದಿದ್ದವು. ಆದರೆ ನಾಸಾ ಇದೆಲ್ಲವನ್ನು ಅಲ್ಲಗಳೆದಿತ್ತು. ವಿಜ್ಞಾನಿಗಳು ಇದೊಂದು ಸಾಮಾನ್ಯ ಭೌತ ವಿಜ್ಞಾನದ ಪ್ರಕ್ರಿಯೆ ಎಂದು ಹೇಳಿದ್ದರು. ಹಾಗಾದರೆ ಚಂದ್ರ ಕೆಂಪಾಗಿ ಹೇಗೆ ಕಂಡ ಎಂಬುದನ್ನು ಹತ್ತಿರದಿಂದ ನೋಡಿಕೊಂಡು ಬರೋಣವೇ?(ಪಿಟಿಐ ಚಿತ್ರಗಳು)

ಗ್ರಹಣದ ಕತೆ ಹೇಳುವ 5 ಚಿತ್ರಗಳು

ಗ್ರಹಣದ ಕತೆ ಹೇಳುವ 5 ಚಿತ್ರಗಳು

ಅಮೆರಿಕದ ಕನ್ಸಾಸ್ ನಗರದಲ್ಲಿ ಒಂದು ಗಂಟೆ ಅವಧಿಯಲ್ಲಿ ತೆಗೆದುಕೊಂಡ 5 ಚಿತ್ರಗಳು ಗ್ರಹಣದ ಬದಲಾವಣೆಗಳ ಇಂಚಿಂಚನ್ನು ಕಟ್ಟಿಕೊಡುತ್ತವೆ.

ಸೂರ್ಯನಲ್ಲ ಚಂದ್ರ

ಸೂರ್ಯನಲ್ಲ ಚಂದ್ರ

ಅಮೆರಿಕದಲ್ಲಿ ಕಂಡು ಬಂದ ಹೊಂಬಣ್ಣದ ಚಂದ್ರ. ಆಗತಾನೆ ಉದಯಿಸುತ್ತಿರುವ ಸೂರ್ಯನಂತೆ ಚಂದ್ರ ಭಾಸವಾಗಿದ್ದು ಪೃಕೃತಿಯ ವೈಚಿತ್ರ್ಯಕ್ಕೆ ಸಾಕ್ಷಿ.

ಹಾರೋ ಹಕ್ಕಿ ಅಲ್ಲ ಇದು ವಿಮಾನ

ಹಾರೋ ಹಕ್ಕಿ ಅಲ್ಲ ಇದು ವಿಮಾನ

ಜೀನಿವಾದಲ್ಲಿ ಚಂದ್ರ ಗ್ರಹಣದ ವೇಳೆ ಹಾದು ಹೋದ ವಿಮಾನ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

 ಭೂಮಿಗೆ ಬಂದ ಬಾನಚಂದಿರ

ಭೂಮಿಗೆ ಬಂದ ಬಾನಚಂದಿರ

ಗ್ರಹಣ ಬಿಟ್ಟ ಹುಣ್ಣಿಮೆ ಚಂದ್ರ ಬಿಚ್ಚಿಟ್ಟ ಪ್ರಭೆಯೆ ಅಂಥದ್ದು. ನಿಜ ಕವಿಗಳಿಗೆ ಸ್ಫೂರ್ತಿ ತುಂಬಿದ ಚಂದ್ರ ಇವನೇನಾ ಅಂದು ಒಂದು ಕ್ಷಣ ನಿಮಗೆ ಅನ್ನಿಸಿದರೆ ತಪ್ಪಿಲ್ಲ.

ಇವನೇನಾ ಕೆಂಪುಚಂದ್ರ?

ಇವನೇನಾ ಕೆಂಪುಚಂದ್ರ?

ಹುಣ್ಣಿಮೆ ಚಂದ್ರನಂತೆ ಬಿಳುಪು ಎಂಬ ಮಾತನ್ನು ಕೊಂಚ ಬದಲಾವಣೆ ಮಾಡಿಕೊಳ್ಳಲೂಬಹುದು. ಹುಣ್ಣಿಮೆ ಚಂದ್ರ ಕೆಲವೊಮ್ಮೆ ಕೆಂಪಾಗುತ್ತಾನೆ ನನ್ನ ನಲ್ಲೆಯ ತರಹ ಎಂದು ಕವಿಗಳು ಹೊಸ ಹಾಡು ರಚಿಸಿದರೂ ಆಶ್ಚರ್ಯವಿಲ್ಲ.

English summary
Pics: People around the world have observed a rare celestial event, as a lunar eclipse coincided with a so-called "supermoon". A supermoon occurs when the Moon is in the closest part of its orbit to Earth, meaning it appears larger in the sky. The eclipse - which made the Moon appear red - has been visible in North America, South America, West Africa and Western Europe. Here is some Photos of Super moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X