• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ : ಮಿಸ್ ವರ್ಲ್ಡ್ ಜತೆ ದೇಶಿ ಸುಂದರಿಯರು

By Mahesh
|

ಬಾಲಿ, ಸೆ.29: 63ನೇ ಮಿಸ್ ವರ್ಲ್ಡ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತೆಯಾಗಿ ಮಿಸ್ ಫಿಲಿಫೈನ್ಸ್ ಹೊರಹೊಮ್ಮಿದ್ದಾರೆ ಎಂದು ಘೋಷಿಸಲಾಗಿದೆ. 2013ರ ವಿಶ್ವಸುಂದರಿ ಸ್ಪರ್ಧೆಯು ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದೆ.

ಎರಡನೇ ಸ್ಥಾನವನ್ನು ಮಿಸ್ ಫ್ರಾನ್ಸ್ ಮರಿನ್ ಲೊರ್ಫೆಲಿನ್ ಪಡೆದರೆ ಘಾನಾದ ಮಿಸ್ ಕಾರಾಂಜರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. 23 ವರ್ಷದ ಮಿಸ್ ಫಿಲಿಫೈನ್ಸ್ ಮೆಗಾನ್ ಯಂಗ್ ಅವರು 126 ಸ್ಪರ್ಧಿಗಳನ್ನು ಹಿಂದಿಕ್ಕಿ ತಮ್ಮ ದೇಹ ಸೌಂದರ್ಯ ಹಾಗೂ ಬುದ್ಧಿ ಕೌಶಲ್ಯದಿಂದ ಜಗತ್ತಿನ ಸುಂದರಿಯಾಗಿ ಮೆರೆದಿದ್ದಾರೆ. ಭಾರತದ ನವನೀತ್ ಕೌರ್ ಧಿಲ್ಲೋನ್ ಅವರು ಅಂತಿಮ 20 ಸ್ಪರ್ಧಿಗಳ ಪಟ್ಟಿ ಸೇರಿದ್ದೆ ಸಾಧನೆಯಾಗಿದೆ.

ಅಮೆರಿಕದಲ್ಲಿ ಹುಟ್ಟಿದ ಮೆಗಾನ್ 10ನೇ ವಯಸ್ಸಿನಲ್ಲಿ ಫಿಲಿಫೈನ್ಸ್ ಗೆ ವಲಸೆ ಹೋದರು. ಅಲ್ಲಿ ಸದ್ಯಕ್ಕೆ ಡಿಜಿಟಲ್ ಸಿನಿಮಾ ಮೇಕಿಂಗ್ ಕೋರ್ಸ್ ಓದುತ್ತಿದ್ದಾರೆ. ಕೆಲವು ಟಿವಿ ಶೋಗಳಲ್ಲೂ ಭಾಗವಹಿಸಿದ್ದಾರೆ. 2012ರ ವಿಶ್ವ ಸುಂದರಿ ವೆನ್ ಜಿಯಾ ಯೂ ಅವರು ಮೆಗಾನ್ ಗೆ ಕಿರೀಟ ತೊಡಿಸಿದರು.

ವಿಶ್ವಸುಂದರಿ ಸೌಂದರ್ಯ ಸ್ಪರ್ಧೆಯನ್ನು 1951ರಲ್ಲಿ ಎರಿಕ್ ಮೋರ್ಲೆ ಆರಂಭಿಸಿದ್ದು ಇದಕ್ಕೆ ಪ್ರತಿಯಾಗಿ ಅಮೆರಿಕನ್ನರು ಮಿಸ್ ಯೂರ್ನಿವರ್ಸ್(ಭುವನ ಸುಂದರಿ) ಆರಂಭಗೊಂಡಿತು. ವಿಶ್ವದ 4 ಪ್ರಮುಖ ಸೌಂದರ್ಯ ಸ್ಪರ್ಧೆಗಳೆಂದರೆ, ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್, ಮಿಸ್ ಇಂಟರ್ ನ್ಯಾಷನಲ್, ಮಿಸ್ ಅರ್ಥ್.

ವಿಶ್ವಸುಂದರಿ ಕಥೆ ಜತೆಗೆ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆ ಚಿತ್ರಗಳು, ಭಾರತಕ್ಕೆ ಬಂದಿರುವ ಭುವನ ಸುಂದರಿ, ಹೈದರಾಬಾದಿನಲ್ಲಿ ಕಾಜಲ್, ಮುಂಬೈ ಫ್ಯಾಷನ್ ಲೋಕದಲ್ಲಿ ಮಾಧುರಿ ದೀಕ್ಷಿತ್, ಅಹಮದಾಬಾದಿನ ಗರ್ಬಾ ನೃತ್ಯಗಾರ್ತಿಯರು, ದೆಹಲಿಯಲ್ಲಿ ಭರತನಾಟ್ಯ ಪಟು ಚಿತ್ರ ಸೇರಿದಂತೆ ಇನ್ನಷ್ಟು ಸೌಂದರ್ಯ ಯುಕ್ತ ಚಿತ್ರಗಳು ನಿಮ್ಮ ಮುಂದಿದೆ ನೋಡಿ...

ವಿಶ್ವ ಸುಂದರಿ ಮೆಗಾನ್

ವಿಶ್ವ ಸುಂದರಿ ಮೆಗಾನ್

23 ವರ್ಷದ ಮಿಸ್ ಫಿಲಿಫೈನ್ಸ್ ಮೆಗಾನ್ ಯಂಗ್ ಅವರು 126 ಸ್ಪರ್ಧಿಗಳನ್ನು ಹಿಂದಿಕ್ಕಿ ತಮ್ಮ ದೇಹ ಸೌಂದರ್ಯ ಹಾಗೂ ಬುದ್ಧಿ ಕೌಶಲ್ಯದಿಂದ ಜಗತ್ತಿನ ಸುಂದರಿಯಾಗಿ ಮೆರೆದಿದ್ದಾರೆ

ವಿಶ್ವ ಸುಂದರಿ ಸ್ಪರ್ಧೆ

ವಿಶ್ವ ಸುಂದರಿ ಸ್ಪರ್ಧೆ

ಮಿಸ್ ಫಿಲಿಫೈನ್ಸ್ ಮೆಗಾನ್ ಯಂಗ್ ಮೊದಲ ಸ್ಥಾನ ಪಡೆದರೆ, ಎರಡನೇ ಸ್ಥಾನವನ್ನು ಮಿಸ್ ಫ್ರಾನ್ಸ್ ಮರಿನ್ ಲೊರ್ಫೆಲಿನ್ ಪಡೆದರೆ ಘಾನಾದ ಮಿಸ್ ಕಾರಾಂಜರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ವಿಶ್ವ ಸುಂದರಿ ಸ್ಪರ್ಧೆ ಜಡ್ಜ್

ವಿಶ್ವ ಸುಂದರಿ ಸ್ಪರ್ಧೆ ಜಡ್ಜ್

63ನೇ ಆವೃತ್ತಿಯ ವಿಶ್ವ ಸೌಂದರ್ಯ ಸ್ಪರ್ಧೆಯ ಜಡ್ಜ್ ಗಳಾಗಿ ಬ್ರಿಟಿಷ್ ಕಿರುತೆರೆಯ ನಿರ್ಮಾಪಕ, ನಿರ್ದೇಶಕ ಕೆನ್ ವಾರ್ವಿಕ್, ಮಿಸ್ ವಲ್ಡ್ ಆಯೋಜಕಿ ಜೂಲಿಯಾ ಮೊರ್ಲೆ, ಬೆನೆಟ್ ಕೊಲ್ ಮೆನ್ ಅಂಡ್ ಕೊ ಲಿ. ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್ ಅವರು ಇದ್ದರು.

ಅಮೆರಿಕದಲ್ಲಿ ಹುಟ್ಟಿದ ಮೆಗಾನ್

ಅಮೆರಿಕದಲ್ಲಿ ಹುಟ್ಟಿದ ಮೆಗಾನ್

ಅಮೆರಿಕದಲ್ಲಿ ಹುಟ್ಟಿದ ಮೆಗಾನ್ 10ನೇ ವಯಸ್ಸಿನಲ್ಲಿ ಫಿಲಿಫೈನ್ಸ್ ಗೆ ವಲಸೆ ಹೋದರು. ಅಲ್ಲಿ ಸದ್ಯಕ್ಕೆ ಡಿಜಿಟಲ್ ಸಿನಿಮಾ ಮೇಕಿಂಗ್ ಕೋರ್ಸ್ ಓದುತ್ತಿದ್ದಾರೆ.

ವಲಸೆ ಸುಂದರಿ

ವಲಸೆ ಸುಂದರಿ

ಅಮೆರಿಕ ಬಿಟ್ಟು ಫಿಲಿಫೈನ್ಸ್ ಪ್ರತಿನಿಧಿಸಿದ ಮೆಗಾನ್ ಬಗ್ಗೆ ಆಕ್ಷೇಪಗಳು ಕೇಳಿ ಬಂದಿತ್ತು.

ವಿಶ್ವಸುಂದರಿ ಸೌಂದರ್ಯ ಸ್ಪರ್ಧೆ

ವಿಶ್ವಸುಂದರಿ ಸೌಂದರ್ಯ ಸ್ಪರ್ಧೆ

ವಿಶ್ವಸುಂದರಿ ಸೌಂದರ್ಯ ಸ್ಪರ್ಧೆಯನ್ನು 1951ರಲ್ಲಿ ಎರಿಕ್ ಮೋರ್ಲೆ ಆರಂಭಿಸಿದ್ದು ಇದಕ್ಕೆ ಪ್ರತಿಯಾಗಿ ಅಮೆರಿಕನ್ನರು ಮಿಸ್ ಯೂರ್ನಿವರ್ಸ್(ಭುವನ ಸುಂದರಿ) ಆರಂಭಗೊಂಡಿತು.

ಪ್ರಮುಖ ಸೌಂದರ್ಯ ಸ್ಪರ್ಧೆ

ಪ್ರಮುಖ ಸೌಂದರ್ಯ ಸ್ಪರ್ಧೆ

ವಿಶ್ವದ 4 ಪ್ರಮುಖ ಸೌಂದರ್ಯ ಸ್ಪರ್ಧೆಗಳೆಂದರೆ, ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್, ಮಿಸ್ ಇಂಟರ್ ನ್ಯಾಷನಲ್, ಮಿಸ್ ಅರ್ಥ್.

ಪ್ಯಾರೀಸ್ ಫ್ಯಾಷನ್ ಲೋಕ

ಪ್ಯಾರೀಸ್ ಫ್ಯಾಷನ್ ಲೋಕ

ಪ್ಯಾರೀಸ್ : ರೂಪದರ್ಶಿಯೊಬ್ಬಳು ಜೀನ್ ಪಾಲ್ ಗ್ಲಾಟಿಯರ್ ಅವರ ರೆಡಿ ಟು ವೇರ್ Spring/summer 2014 ಫ್ಯಾಷನ್ ಕಲೆಕ್ಷನ್ ಪ್ರದರ್ಶಿಸುತ್ತಿದ್ದಾರೆ.

ಪ್ಯಾರೀಸ್ ಫ್ಯಾಷನ್

ಪ್ಯಾರೀಸ್ ಫ್ಯಾಷನ್

ಪ್ಯಾರೀಸ್ : ಪಾಲಿನ್ ಲೆಪಾಇನ್(8) ಎಡದಿಂದ ಎರಡನೇಯವಳು ಮಿನಿ ಮಿಸ್ ಮಾಡೆಲ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು.

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೌಂದರ್ಯ ಸ್ಪರ್ಧೆ ನಿಷೇಧ ಹೇರುವ ಬಗ್ಗೆ ಫ್ರಾನ್ಸ್ ಸೆನೆಟ್ ನಲ್ಲಿ ಸೆ.17 ರಂದು ಭಾರಿ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿತ್ತು.

ಅಪ್ರಾಪ್ತ ವಯಸ್ಕ ಮಕ್ಕಳನ್ನು ಸೌಂದರ್ಯ ಸ್ಪರ್ಧೆಗೆ ಇಳಿಸುವ ಆಯೋಜಕರಿಗೆ 30 ಸಾವಿರ ಯುರೋ ದಂಡ ಹಾಗೂ 2 ವರ್ಷ ಜೈಲು ಎಂದು ಘೋಷಿಸಲಾಗಿದೆ.

ನ್ಯೂಯಾರ್ಕ್ ನಲ್ಲಿ ಭಾರತ ಸುಂದರಿ

ನ್ಯೂಯಾರ್ಕ್ ನಲ್ಲಿ ಭಾರತ ಸುಂದರಿ

ನ್ಯೂಯಾರ್ಕ್: ಭಾರತದ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರು TAO ನ್ಯೂಯಾರ್ಕ್ ಡೌನ್ ಟೌನ್ ಪಾರ್ಟಿಗೆ ಹೊರಟ್ಟಿದ್ದು ಹೀಗೆ

ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್

ಬಾಲಿವುಡ್ ಪ್ರೇರಿತ ಫ್ಯಾಷನ್ ವಿನ್ಯಾಸ 'Diva'ni' ಅನಾವರಣ ಹಾಗೂ ಯಶ್ ಛೋಪ್ರಾ ಹುಟ್ಟುಹಬ್ಬದ ಅಂಗವಾಗಿ ಬೆಕ್ಕಿನ ನಡಿಗೆಯಲ್ಲಿ ಪಾಲ್ಗೊಂಡ ಮಾಧುರಿ ದೀಕ್ಷಿತ್

ಶಾಲೆಗೆ ಬಂದ ಭುವನ ಸುಂದರಿ

ಶಾಲೆಗೆ ಬಂದ ಭುವನ ಸುಂದರಿ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಭುವನ ಸುಂದರಿ ಒಲಿವಿಯಾ ಕಲ್ಪೊ ಅವರು ಸುಲಭ್ ಪಬ್ಲಿಕ್ ಶಾಲೆಯಲ್ಲಿ ಕಂಡಿದ್ದು ಹೀಗೆ PTI Photo by Atul Yadav

ಪರಿಣಿತಿ ಛೋಪ್ರಾ

ಪರಿಣಿತಿ ಛೋಪ್ರಾ

ಮುಂಬೈ: ಬಾಲಿವುಡ್ ಪ್ರೇರಿತ ಫ್ಯಾಷನ್ ವಿನ್ಯಾಸ 'Diva'ni' ಅನಾವರಣ ಹಾಗೂ ಯಶ್ ಛೋಪ್ರಾ ಹುಟ್ಟುಹಬ್ಬದ ಅಂಗವಾಗಿ ಬೆಕ್ಕಿನ ನಡಿಗೆಯಲ್ಲಿ ನಟಿ ಪರಿಣಿತಿ ಛೋಪ್ರಾ

ಕತ್ರೀನಾ ಕೈಫ್

ಕತ್ರೀನಾ ಕೈಫ್

ಮುಂಬೈ: ಬಾಲಿವುಡ್ ಪ್ರೇರಿತ ಫ್ಯಾಷನ್ ವಿನ್ಯಾಸ 'Diva'ni' ಅನಾವರಣ ಹಾಗೂ ಯಶ್ ಛೋಪ್ರಾ ಹುಟ್ಟುಹಬ್ಬದ ಅಂಗವಾಗಿ ಬೆಕ್ಕಿನ ನಡಿಗೆಯಲ್ಲಿ ನಟಿ ಕತ್ರೀನಾ ಕೈಫ್

ರೇಖಾ

ರೇಖಾ

ಮುಂಬೈ: ಬಾಲಿವುಡ್ ಪ್ರೇರಿತ ಫ್ಯಾಷನ್ ವಿನ್ಯಾಸ 'Diva'ni' ಅನಾವರಣ ಹಾಗೂ ಯಶ್ ಛೋಪ್ರಾ ಹುಟ್ಟುಹಬ್ಬದ ಅಂಗವಾಗಿ ಬೆಕ್ಕಿನ ನಡಿಗೆಯಲ್ಲಿ ನಟಿ ರೇಖಾ

ಸುಂದರಿಯರ ಜತೆ ಶಾರುಖ್

ಸುಂದರಿಯರ ಜತೆ ಶಾರುಖ್

ಮುಂಬೈ: ಬಾಲಿವುಡ್ ಪ್ರೇರಿತ ಫ್ಯಾಷನ್ ವಿನ್ಯಾಸ 'Diva'ni' ಅನಾವರಣ ಹಾಗೂ ಯಶ್ ಛೋಪ್ರಾ ಹುಟ್ಟುಹಬ್ಬದ ಅಂಗವಾಗಿ ಬೆಕ್ಕಿನ ನಡಿಗೆಯಲ್ಲಿ ನಟಿಯಲ್ಲಿ ಪಾಲ್ಗೊಂಡ ಸುಂದರಿಯರ ಜತೆ ಶಾರುಖ್ ಖಾನ್

ಅಹಮದಾಬಾದ್ ಸುಂದರಿಯರು

ಅಹಮದಾಬಾದ್ ಸುಂದರಿಯರು

ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿರುವ ನೃತ್ಯಗಾರ್ತಿಯರು ಗರ್ಬಾ ನರ್ತನಕ್ಕೆ ತಯಾರಿ ನಡೆಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಗರ್ಭಾ ನೃತ್ಯ ವಿಶೇಷವಾಗಿ ಪ್ರದರ್ಶಿತಗೊಳ್ಳುತ್ತದೆ.

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ ಭಾನುವಾರ ನಟಿ ಕಾಜಲ್ ಅಗರವಾಲ್ ಬೊಡುಪ್ಪಲ್ ಬಳಿ ಶಾಪಿಂಗ್ ಮಾಲ್ ಉದ್ಘಾಟನೆಗೆ ಬಂದಾಗ ಕಂಡಿದ್ದು ಹೀಗೆ

ನೃತ್ಯ ಸೌಂದರ್ಯ

ನೃತ್ಯ ಸೌಂದರ್ಯ

ನವದೆಹಲಿ :ರಮಾ ವೈದ್ಯನಾಥನ್ ಅವರು ದೈವಿಕ ಸರಣಿಯ ಭರತನಾಟ್ಯ ಪ್ರದರ್ಶನ ನೀಡಿದಾಗ ಸೆರೆ ಸಿಕ್ಕ ಭಂಗಿ

ಸುಲಭ್ ಗ್ರಾಮದಲ್ಲಿ ಸುಂದರಿ

ಸುಲಭ್ ಗ್ರಾಮದಲ್ಲಿ ಸುಂದರಿ

ನವದೆಹಲಿ: ಭುವನಸುಂದರಿ ಒಲಿವಿಯಾ ಕಲ್ಪೊ ಸ್ವಾಗತಿಸುತ್ತಿರುವ ಸುಲಭ್ ಗ್ರಾಮಸ್ಥರು. PTI Photo by Atul Yadav

 ಭುವನ ಸುಂದರಿ

ಭುವನ ಸುಂದರಿ

ನವದೆಹಲಿ: ಎಚ್ ಐವಿ/ಏಡ್ಸ್ ಪೀಡಿತರಿಗಾಗಿ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲೂ ಭುವನ ಸುಂದರಿ ಒಲಿವಿಯಾ ಫ್ರಾನ್ಸಿಸ್ ಪಾಲ್ಗೊಂಡಿದ್ದರು.

English summary
Megan Young from Philippines was crowned Miss World 2013 The second place went to Miss France Marine Lorphelin and third to Miss Ghana Carranzar Naa Okailey Shooter and many more beautiful pics from around the world
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X