ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಪೋಸ್ಟ್; ಕಾಡಿನ ರಾಜ ಸಿಂಹದ ದಯನೀಯ ಸ್ಥಿತಿ

|
Google Oneindia Kannada News

ಸುಡಾನ್, ಜನವರಿ 21 : ಸುಡಾನ್ ರಾಜಧಾನಿ ಖತ್ರೌಮ್‌ನಲ್ಲಿ ಕಾಡಿನ ರಾಜ ಸಿಂಹದ ಪರಿಸ್ಥಿತಿ ಚಿಂತಾಜನಕವಾಗಿದೆ. ಆಹಾರ, ಸರಿಯಾದ ಚಿಕಿತ್ಸೆ ಇಲ್ಲದೆ ಬಳಲಿರುವ ಆಫ್ರಿಕನ್ ಸಿಂಹಗಳ ಉಳಿವಿಗಾಗಿ ಆನ್‌ಲೈನ್‌ನಲ್ಲಿ ಅಭಿಯಾನ ಆರಂಭಿಸಲಾಗಿದೆ.

ಆಫ್ರಿಕಾದ ಅಲ್ ಖುರೇಶಿ ಉದ್ಯಾನದಲ್ಲಿರುವ ಸಿಂಹಗಳು ಆಹಾರದ ಕೊರತೆಯಿಂದ ಬಳಲಿವೆ. ಅಸ್ತಿಪಂಜರ ಕಾಣುವಂತೆ ಬಡಕಲಾದ ಸಿಂಹಗಳನ್ನು ಉಳಿಸಿ ಎಂದು ದೊಡ್ಡ ಅಭಿಯಾನವನ್ನು ಆರಂಭಿಸಲಾಗಿದೆ. ಈ ಕುರಿತ ಫೇಸ್‌ ಬುಕ್‌ ಫೋಸ್ಟ್‌ ಒಂದು ವೈರಲ್ ಆಗಿದೆ.

ಗಿರ್‌ ಅರಣ್ಯದ 21 ಸಿಂಹಗಳ ಸಾವಿನ ಹಿಂದಿನ ರಹಸ್ಯ ಬಯಲಾಯ್ತುಗಿರ್‌ ಅರಣ್ಯದ 21 ಸಿಂಹಗಳ ಸಾವಿನ ಹಿಂದಿನ ರಹಸ್ಯ ಬಯಲಾಯ್ತು

ಒಸ್ಮಾನ್ ಸಲಿಹ್ ತಮ್ಮ ಫೇಸ್‌ಬುಕ್‌ನಲ್ಲಿ ಸಿಂಹಗಳ ಚಿಂತಾಜನಕ ಸ್ಥಿತಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಿಂಹಗಳ ಸ್ಥಿತಿ ಬಗ್ಗೆ ಜಗತ್ತಿಗೆ ತಿಳಿಸಿದ ಒಸ್ಮಾನ್ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಘ ಸಂಸ್ಥೆಗಳು, ಹಲವಾರು ಜನರು ಸಿಂಹಗಳ ಸಹಾಯಕ್ಕೆ ಧಾವಿಸಿದ್ದಾರೆ.

ಗುಜರಾತಿನಿಂದ ಮೈಸೂರಿನ ಝೂಗೆ ಬರಲಿವೆ 5 ಸಿಂಹಗಳುಗುಜರಾತಿನಿಂದ ಮೈಸೂರಿನ ಝೂಗೆ ಬರಲಿವೆ 5 ಸಿಂಹಗಳು

ಸಿಂಹಗಳನ್ನು ತಕ್ಷಣ ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಒತ್ತಾಯಗಳು ಕೇಳಿ ಬಂದಿದೆ. ಜನರು ಸಿಂಹಗಳ ಉಳಿವಿಗಾಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು ಎಂದು ಮನವಿ ಮಾಡಲಾಗುತ್ತಿದೆ. ಕಾಡಿನ ರಾಜನ ಸ್ಥಿತಿಯನ್ನು ಚಿತ್ರಗಳಲ್ಲಿ ನೋಡಿ...

ಸಿಂಹದ ಎದುರಲ್ಲೇ ಚೇಷ್ಟೆ ಮಾಡಿದ ಮಹಿಳೆ: ವಿಡಿಯೋ ವೈರಲ್ಸಿಂಹದ ಎದುರಲ್ಲೇ ಚೇಷ್ಟೆ ಮಾಡಿದ ಮಹಿಳೆ: ವಿಡಿಯೋ ವೈರಲ್

ಆಹಾರ, ಔಷಧವಿಲ್ಲ

ಆಹಾರ, ಔಷಧವಿಲ್ಲ

ಖತ್ರೌಮ್‌ನಲ್ಲಿರುವ ಉದ್ಯಾನದಲ್ಲಿರುವ ಕಾಡಿನ ರಾಜ ಸಿಂಹದ ಪರಿಸ್ಥಿತಿ ಚಿಂತಾಜನಕವಾಗಿದೆ. ಸರಿಯಾದ ಆಹಾರ ಮತ್ತು ಔಷಧಗಳ ವ್ಯವಸ್ಥೆ ಇಲ್ಲದೆ ಸಿಂಹಗಳು ಅಸ್ತಿಪಂಜರ ಕಾಣುವ ಮಟ್ಟಿಗೆ ಬಡಕಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಸಿಂಹಗಳ ಪೋಟೋಗಳು ವೈರಲ್ ಆಗಿವೆ.

ಸಿಂಹಗಳನ್ನು ರಕ್ಷಿಸಿ

ಸಿಂಹಗಳನ್ನು ರಕ್ಷಿಸಿ

ಅಲ್ ಖುರೇಶಿ ಉದ್ಯಾನದಲ್ಲಿರುವ ಸಿಂಹಗಳನ್ನು ರಕ್ಷಣೆ ಮಾಡಿ ಎಂದು ಆನ್‌ಲೈನ್ ಅಭಿಯಾನವನ್ನು ಆರಂಭಿಸಲಾಗಿದೆ. ಸಿಂಹಗಳ ದಯಾನೀಯ ಸ್ಥಿತಿಯ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಸ್ಮಾನ್ ಸಲಿಹ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಿಶ್ಯಕ್ತಿಗೊಂಡಿರುವ ಹೆಣ್ಣು ಸಿಂಹ ಸಾವಿನ ಸನಿಹದಲ್ಲಿರುವ ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ.

ಸಹಾಯ ಹಸ್ತ ಚಾಚಿದ ಜನರು

ಸಹಾಯ ಹಸ್ತ ಚಾಚಿದ ಜನರು

ಒಸ್ಮಾನ್ ಸಲಿಹ್ ಫೇಸ್‌ಬುಕ್‌ ಪೋಸ್ಟ್ ನೋಡಿದ ಜನರು ಸಿಂಹಗಳ ನೆರವಿಗೆ ಧಾವಿಸಿದ್ದಾರೆ. ಸ್ಥಳೀಯ ಮಾಂಸದ ಅಂಗಡಿಯವರು ಆಹಾರ ಪೂರೈಸುವುದಾಗಿ ಮುಂದೆ ಬಂದಿದ್ದಾರೆ. ಹಲವಾರು ಜನರು ಸ್ವಯಂ ಪ್ರೇರಿತವಾಗಿ ಸಿಂಹಗಳಿಗೆ ಆಹಾರಗಳನ್ನು ತಂದು ಕೊಡುತ್ತಿದ್ದಾರೆ.

ಔಷಧೋಪಚಾರ ಆರಂಭ

ಔಷಧೋಪಚಾರ ಆರಂಭ

ಅಲ್ ಖುರೇಶಿ ಉದ್ಯಾನದಲ್ಲಿರುವ ಸಿಂಹಗಳು ಆಹಾರದ ಕೊರತೆಯಿಂದ ಕೆಲವೇ ವಾರಗಳಲ್ಲಿ ದಯಾನೀಯ ಸ್ಥಿತಿ ತಲುಪಿವೆ. ಹಲವು ಸಂಘ ಸಂಸ್ಥೆಗಳು ಸಿಂಹಗಳಿಗೆ ಔಷಧಗಳನ್ನು ನೀಡಿವೆ. ವೈದ್ಯರು ಸಹ ಬಳಲಿದ ಸಿಂಹಗಳ ಆರೈಕೆಯಲ್ಲಿ ತೊಡಗಿದ್ದಾರೆ.

ಅಳಿವಿನಂಚಿನಲ್ಲಿವೆ ಸಿಂಹಗಳು

ಅಳಿವಿನಂಚಿನಲ್ಲಿವೆ ಸಿಂಹಗಳು

ವಿಶ್ವದಲ್ಲಿರುವ ಸಿಂಹದ ಪ್ರಭೇಧಗಳಲ್ಲಿ ಆಫ್ರಿಕನ್ ಸಿಂಹಗಳು ಅಳಿವಿನ ಅಂಚಿನಲ್ಲಿವೆ. 1993ರಿಂದ 2014ರ ತನಕ ಈ ಪ್ರಭೇಧದ ಸಿಂಹಗಳು ಶೇ 43ರಷ್ಟು ಕಡಿಮೆಯಾಗಿವೆ. ಸುಮಾರು 20 ಸಾವಿರ ಸಿಂಹಗಳು ಮಾತ್ರ ಈಗ ಇವೆ ಎಂದು ಅಂದಾಜಿಸಲಾಗಿದೆ.

English summary
Photos of African lions at Al-Qureshi park goes viral on social media. Lions at Khartoum's Al-Qureshi Park suffering from shortages of food and medicine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X