ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋಟೋ: ನೇಮಾರ್ ಹೊಡಿದ್ರೆ ಗೋಲು, ಬ್ರೆಜಿಲ್ಲಿಗಿಲ್ಲ ಸೋಲು

By Mahesh
|
Google Oneindia Kannada News

ಬೆಂಗಳೂರು, ಜು.13: ಫೀಫಾ ವಿಶ್ವಕಪ್ ಫುಟ್ಬಾಲ್‌ನ ಉದ್ಘಾಟನಾ ಪಂದ್ಯ ಪೂರ್ತಿ ಬ್ರೆಜಿಲ್ಲಿನ ಸ್ಟಾರ್ ಆಟಗಾರ ನೇಮಾರ್ ಶೋ ಆಗಿ ಪರಿಣಮಿಸಿತು. ಪಂದ್ಯದ ಆರಂಭದಲ್ಲೆ ಸಿಕ್ಕ ಗೋಲಿನ ಮುನ್ನಡೆಯ ಲಾಭ ಪಡೆಯುವಲ್ಲಿ ಕ್ರೊವೇಷಿಯಾ ವಿಫಲವಾಯಿತು. ನೇಮಾರ್, ಆಸ್ಕರ್ ಪಂದ್ಯದುದ್ದಕ್ಕೂ ವಿಜೃಂಭಿಸಿ ರಸದೌತಣ ನೀಡಿದರು.

ಐದು ಬಾರಿ ಚಾಂಪಿಯನ್ ಅತಿಥೇಯ ಬ್ರೆಜಿಲ್ ಚಾಂಪಿಯನ್ ತಂಡದಂತೆ ಆಡಿ ಅರ್ಹ ಜಯ ದಾಖಲಿಸಿತು. ಹಲ್ಕ್, ಫ್ರೆಡ್ ಕಳಪೆ ಆಟದ ನಡುವೆ ಬ್ರೆಜಿಲ್ ರಕ್ಷಣಾ ಪಡೆ ಹುಳುಕು ಕೂಡಾ ಎದ್ದು ಕಾಣುತ್ತಿತ್ತು. ಹಲವು ಹೊಸತುಗಳಿಗೆ ಕಾರಣವಾದ ಮೊದಲ ಪಂದ್ಯದಲ್ಲಿ ಜಪಾನ್ ರೆಫ್ರಿ ಯೂಯಿಚಿ ನಿಶಿಮೂರಾ ಕೂಡಾ ಗಮನ ಸೆಳೆದರು. ಬ್ರೆಜಿಲ್ಲಿಗೆ ಪೆನಾಲ್ಟಿ ಕೊಟ್ಟ ರೆಫ್ರಿ ವಿರುದ್ಧ ನಿಕೊ ಕೊವಾಕ್ ಅವರಂತು ಸಿಡಿದೆದ್ದು ಕೂಗಾಡಿದರು.[ಪಂದ್ಯದ ವರದಿ ಇಲ್ಲಿ ಓದಿ]

ಕ್ರೊವೇಷಿಯಾ ತಂಡವನ್ನು ಬ್ರೆಜಿಲ್ 3-1 ಅಂತರದ ಗೋಲುಗಳಿಂದ ಬಗ್ಗು ಬಡಿದರೂ ನೆಮ್ಮದಿಯ ಗೆಲುವು ಎನ್ನಬಹುದೇ ಹೊರತೂ ಬ್ರೆಜಿಲ್ ಪ್ರಾಬಲ್ಯ ಮೆರೆದಿಲ್ಲ ಎನ್ನಬಹುದು. ಒಟ್ಟಾರೆ, ಅರೆನಾ ಸಾವೊ ಪಾಲೋ ಕ್ರೀಡಾಂಗಣದಲ್ಲಿ ಆನಂದದ ಕ್ಷಣಗಳನ್ನು 66 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕಣ್ತುಂಬಿಸಿಕೊಂಡರು. ಬ್ರೆಜಿಲ್ಲಿನ ಮಾಜಿ ಸ್ಟಾರ್ ಆಟಗಾರ ಕಾಕಾ ಕೂಡಾ ನೇಮಾರ್ ಪೆನಾಲ್ಟಿ ಕಿಕ್ ಫೊಟೊ ತೆಗೆಯುತ್ತಿದ್ದರು. ಪಂದ್ಯದ ರೋಚಕ ಕ್ಷಣಗಳನ್ನು ಚಿತ್ರಗಳಲ್ಲಿ ಹಿಡಿದಿಡುವ ಯತ್ನ ಇಲ್ಲಿದೆ.. ತಪ್ಪದೇ ನೋಡಿ... [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]

ನೇಮಾರ್ ವಿಶ್ವಕಪ್ ಮೊದಲ ಗೋಲು ಸಂಭ್ರಮ

ನೇಮಾರ್ ವಿಶ್ವಕಪ್ ಮೊದಲ ಗೋಲು ಸಂಭ್ರಮ

ಪಂದ್ಯದ 29ನೇ ನಿಮಿಷದಲ್ಲಿ ನೇಮಾರ್ ಡಿ ಬಾಕ್ಸ್ ನಿಂದ ಸ್ವಲ್ಪ ಹೊರಗಿನಿಂದ ಹೊಡೆದ ಕಿಕ್ ಗೋಲ್ ಪೋಸ್ಟ್ ಗೆ ತಾಕಿ ಕೊನೆಗೆ ಗೋಲಾಗಿ ಪರಿಣಮಿಸಿತು. ಮೊದಲ ಹಳದಿ ಕಾರ್ಡ್ ಪಡೆದ ನೇಮಾರ್ ಮೊದಲ ಗೋಲು ಬಾರಿಸಿದ ಸಂಭ್ರಮ ಇಲ್ಲಿದೆ ನೋಡಿ

ಸ್ವಂತ ಗೋಲು ಹೊಡೆದ ಮಾರ್ಸೆಲೋ

ಸ್ವಂತ ಗೋಲು ಹೊಡೆದ ಮಾರ್ಸೆಲೋ

ಚೆಂಡು ತಡೆಯುವ ಯತ್ನದಲ್ಲಿ ಪಂದ್ಯದ 11ನೇ ನಿಮಿಷದಲ್ಲೇ ಗೋಲು ದಾಖಲಿಸಿದ ಮಾರ್ಸೆಲೋ ಹೊಸ ಇತಿಹಾಸ ಸೃಷ್ಟಿಸಿದರು. ವಿಶ್ವಕಪ್ ಇತಿಹಾಸದಲ್ಲಿ ಬ್ರೆಜಿಲ್ ಆಟಗಾರ ಹೊಡೆದ ಮೊದಲ ಓನ್ ಗೋಲು ಇದಾಗಿದೆ.

ತ್ವರಿತ ಓನ್ ಗೋಲುಗಳು
* ಪಂದ್ಯದ 3 ನೇ ನಿಮಿಷ ಗಮಾರಾ (2006)
* 7 ನೇ ನಿಮಿಷ ವುಟ್ಜೋವ್ (1966)
* 9 ನೇ ನಿಮಿಷ ಹೋರ್ವಾಟ್ (1954)
* 10 ನೇ ನಿಮಿಷ ಪುಯೊಲ್ (2002)
* 11 ನೇ ನಿಮಿಷ ಮಾರ್ಸೆಲೊ (2014)

ಮೊದಲ ಪಂದ್ಯ, ಮೊದಲ ಪೆನಾಲ್ಟಿ ಕಿಕ್

ಮೊದಲ ಪಂದ್ಯ, ಮೊದಲ ಪೆನಾಲ್ಟಿ ಕಿಕ್

ವಿಶ್ವಕಪ್ ಮೊದಲ ಪಂದ್ಯ, ಮೊದಲ ಪೆನಾಲ್ಟಿ ಕಿಕ್ ಹೊಡೆದ ನೇಮಾರ್ ಸಂಭ್ರಮ. ಪಂದ್ಯದ 71ನೇ ನಿಮಿಷದಲ್ಲಿ ಫ್ರೆಡ್ ಕೃಪೆಯಿಂದ ಸಿಕ್ಕ ಪೆನಾಲ್ಟಿ ಪೂರೈಸಿದ ನೇಮಾರ್. 22 ವರ್ಷದ ಸ್ಟಾರ್ ಆಟಗಾರ ಈಗ ಫುಟ್ಬಾಲ್ ದಿಗ್ಗಜರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಬ್ರೆಜಿಲ್ಲಿನ ಸರ್ವಕಾಲಿಕ ಅತಿ ಹೆಚ್ಚು ಗೋಲು ಹೊಡೆದವರು:
ಪೀಲೆ : 77
ಜಿಕೋ: 66
ರೋನಾಲ್ಡೋ : 62
ರೊಮಾರಿಯೋ: 55
ರಿವಾಲ್ಡೋ : 34
ರೊನಾಲ್ಡಿನ್ಹೋ : 33
ನೇಮಾರ್ : 33
ಕ್ರೊವೇಷಿಯಾ ಕೊರ್ಲುಕ ಹಾಗೂ ಹಲ್ಕ್

ಕ್ರೊವೇಷಿಯಾ ಕೊರ್ಲುಕ ಹಾಗೂ ಹಲ್ಕ್

ಕ್ರೊವೇಷಿಯಾ ಕೊರ್ಲುಕ ಹಾಗೂ ಬ್ರೆಜಿಲ್ಲಿನ ಹಲ್ಕ್ ಚೆಂಡಿನ ಮೇಲೆ ಹಿಡಿತ ಸಾಧಿಸಲು ಹೆಣಗಾಟ.

ಓಲಿಚ್ ಹಾಗೂ ಬ್ರೆಜಿಲ್ ನಾಯಕ ಸಿಲ್ವಾ

ಓಲಿಚ್ ಹಾಗೂ ಬ್ರೆಜಿಲ್ ನಾಯಕ ಸಿಲ್ವಾ

ಕ್ರೊವೇಷಿಯಾದ ಮುಂಪಡೆ ಆಟಗಾರ ಓಲಿಚ್ ಹಾಗೂ ಬ್ರೆಜಿಲ್ ನಾಯಕ ಸಿಲ್ವಾ ಸೆಣಸಾಟದ ದೃಶ್ಯ

ಫೋಟೋ: ಥಿಯಾಗೋ ಸಿಲ್ವ ಹಾಗೂ ಓಲಿಚ್

ಫೋಟೋ: ಥಿಯಾಗೋ ಸಿಲ್ವ ಹಾಗೂ ಓಲಿಚ್

ಬ್ರೆಜಿಲ್ಲಿನ ಥಿಯಾಗೋ ಸಿಲ್ವ ಹಾಗೂ ಕ್ರೊವೇಷಿಯಾ ಫಾರ್ವರ್ಡ್ ಓಲಿಚ್ ಕಾದಾಟ. AP/PTI

ಫೋಟೋ: ಹೆರ್ನಾನೆಸ್ ಹಾಗೂ ನೇಮಾರ್ ಸಂಭ್ರಮ

ಫೋಟೋ: ಹೆರ್ನಾನೆಸ್ ಹಾಗೂ ನೇಮಾರ್ ಸಂಭ್ರಮ

ಹೆರ್ನಾನೆಸ್ ಹಾಗೂ ನೇಮಾರ್ ಗೋಲಿನ ನಂತರ ಸಂಭ್ರಮ

ಫೋಟೋ: ಬ್ರೆಜಿಲ್ ಆಟಗಾರರ ಸಂತಸ, ಸಂಭ್ರಮ

ಫೋಟೋ: ಬ್ರೆಜಿಲ್ ಆಟಗಾರರ ಸಂತಸ, ಸಂಭ್ರಮ

ನೇಮಾರ್ ಪೆನಾಲ್ಟಿ ಕಿಕ್ ನಂತರ ಬ್ರೆಜಿಲ್ ಆಟಗಾರರ ಸಂತಸ, ಸಂಭ್ರಮ

ಫೋಟೋ: ಗೋಲಿನ ನಂತರ ಆಸ್ಕರ್ ಸಂಭ್ರಮ

ಫೋಟೋ: ಗೋಲಿನ ನಂತರ ಆಸ್ಕರ್ ಸಂಭ್ರಮ

ಗೋಲಿನ ನಂತರ ಆಸ್ಕರ್ ಸಂಭ್ರಮಾಚರಣೆ ಮಾಡಿ ಕೈಬೆರಳುಗಳನ್ನು ಜೋಡಿಸಿ ಹೃದಯದ ರೀತಿ ಮಾಡಿ ಅಭಿಮಾನಿಗಳತ್ತ ತೋರಿಸಿದರು. AP/PTI

English summary
The FIFA World Cup 2014 has begun and so is The Neymar Show. And Brazil have made a winning start.Here are the pictures from the match. With a double from Neymar to complete a 3-1 victory over Croatia. Here are the pictures from the match.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X