ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಭೀಕರ ಭೂಕಂಪಕ್ಕೆ ಫಿಲಿಪೈನ್ಸ್ ದ್ವೀಪ ತತ್ತರ

By Mahesh
|
Google Oneindia Kannada News

ಮನಿಲಾ, ಅ.16: ಫಿಲಿಪೈನ್ ದ್ವೀಪಗಳ ಕೇಂದ್ರ ಪ್ರದೇಶವಾದ ಬೊಹೊಲ್ ದ್ವೀಪದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕಂಪನದಿಂದಾಗಿ ಅಪಾರ ಪ್ರಮಾಣದ ಸಂಪತ್ತು ನಾಶವಾಗಿದ್ದು, ಮೃತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ರಿಕ್ಟರ್ ಮಾಪನ 7.2 ಪ್ರಮಾಣದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಊರಿಗೆ ಊರೇ ಕತ್ತಲಾವರಿಸಿದೆ. 16ನೇ ಶತಮಾನದ ಐತಿಹಾಸಿಕ ಚರ್ಚ್ ಧರೆಗುಳಿದಿದೆ. ಗಂಭೀರವಾಗಿ ಗಾಯಗೊಂಡಿರುವ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭೂಕಂಪನದ ತೀವ್ರತೆ ಸುಮಾರು 33 ಕಿ.ಮೀ ವರೆಗೂ ವ್ಯಾಪಿಸಿದ್ದು, ಹಲವಾರು ಕಟ್ಟಡಗಳು ಕುಸಿದುಬಿದ್ದಿವೆ. ಸುಮಾರು 30 ಲಕ್ಷ ಜನ ಭೂಕಂಪದಿಂದ ತತ್ತರಿಸಿದ್ದಾರೆ.

ಬೊಹೊಲ್ ನಲ್ಲಿ 97 ಜನ, ಸೆಬು ಹಾಗೂ ಸಿಕ್ಯೂಜೊರ್ ನಲ್ಲಿ 10 ಜನ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಪ್ರಕಟಿಸಿದೆ. ಕ್ಯಾಥೊಲಿಕ್ ಚರ್ಚ್, ಅಸ್ಪತ್ರೆ, ಹೋಟೆಲ್, ಶಾಪಿಂಗ್ ಮಾಲ್, ಸಾರ್ವಜನಿಕ ಮಾರುಕಟ್ಟೆ, ರಸ್ತೆ,ಸೇತುವೆ ಎಲ್ಲವೂ ನಾಶವಾಗಿದೆ. ಭೂಕಂಪದ ನಂತರದ ಫಿಲಿಫೈನ್ ದೃಶ್ಯಗಳು ಇಲ್ಲಿವೆ ನೋಡಿ

ಸೆಬು ಚರ್ಚ್

ಸೆಬು ಚರ್ಚ್

ರಿಕ್ಟರ್ ಮಾಪನ 7.2 ಪ್ರಮಾಣದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಇಲ್ಲಿನ ಐತಿಹಾಸಿಕ ಹೋಲಿ ಚೈಲ್ಡ್ ಬೆಸಲಿಕಾ ನಾಶವಾಗಿದ್ದು ಕ್ರೈಸ್ತರು ಆತಂಕಗೊಂಡಿದ್ದಾರೆ.

ಬೊಹೊಲ್ ನಲ್ಲಿ

ಬೊಹೊಲ್ ನಲ್ಲಿ

ಬೊಹೊಲ್ ನಲ್ಲಿ 97 ಜನ ಸಾವನ್ನಪ್ಪಿರುವ ವರದಿಗಳು ಬಂದಿವೆ. ಇಲ್ಲಿನ ಲೊಬೊಕ್ ಚರ್ಚ್ ಕೂಡಾ ಧರೆಗುರುಳಿದೆ.

ಸೆಬು ಜನಜೀವನ

ಸೆಬು ಜನಜೀವನ

ಫಿಲಿಪೈನ್ಸ್ ನ ಮಧ್ಯ ಭಾಗದ ಸೆಬು(cebu) ಪ್ರಾಂತ್ಯದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆ, ಕಚೇರಿ, ಆಸ್ಪತ್ರೆ ಎಲ್ಲವೂ ನೆಲಕ್ಕುರುಳಿದೆ.

ಬೊಹೊಲ್ ನಲ್ಲಿ

ಬೊಹೊಲ್ ನಲ್ಲಿ

ಬೊಹೊಲ್ ನಲ್ಲಿ ಹೆದ್ದಾರಿಗಳು ಬಿರುಕು ಬಿಟ್ಟಿದ್ದು, ಜನರು ರಸ್ತೆಗಿಳಿದು ಅಚ್ಚರಿಯಿಂದ ರಸ್ತೆ ಬಿರುಕು ಗಮನಿಸಿದ್ದಾರೆ.

ಪರಿಹಾರ ಕಾರ್ಯ

ಪರಿಹಾರ ಕಾರ್ಯ

ಸೆಬು ಸಿಟಿಯಲ್ಲಿ ಅವಶೇಷಗಳನ್ನು ತೆಗೆಯುತ್ತಿರುವ ಫಿಲಿಪೈನ್ಸ್ ಯೋಧರು.

ಆಸ್ಪತ್ರೆಗಳಲ್ಲಿ

ಆಸ್ಪತ್ರೆಗಳಲ್ಲಿ

ಹಲವಾರು ಆಸ್ಪತ್ರೆ ಕಟ್ಟಡಗಳು ನಾಶಗೊಂಡಿರುವುದರಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ವಿಳಂಬವಾಗುತ್ತಿದೆ. ಗಾಯಾಳುಗಳು ಆಸ್ಪತ್ರೆ ಆವರಣದಲ್ಲಿ ಕಾದು ಕುಳಿತ್ತಿದ್ದಾರೆ.

ಕಟ್ಟಡಗಳ ಸ್ಥಿತಿ

ಕಟ್ಟಡಗಳ ಸ್ಥಿತಿ

ಭೂಕಂಪಕ್ಕೆ ಸಿಲುಕಿದ ಸೆಬು ಸಿಟಿಯ ಜಿಎಂಸಿ ಪ್ಲಾಜಾ ಕಟ್ಟದ ಬಳಿಯ ದೃಶ್ಯ

AP VIDEO

ಚರ್ಚ್ ಹಾನಿ ಬಗ್ಗೆ ಅಸೋಸಿಯೇಟೆಡ್ ಪ್ರೆಸ್ ವರದ್ ಇಲ್ಲಿದೆ

English summary
Days after a strong 7.2 magnitude earthquake hit Philippines, the death toll has reached 107 on Wednesday even as emergency workers struggled to rescue an undetermined number of people buried in rubble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X