ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಗೆಲಸದಾಕೆ ಬಗ್ಗೆ ಫಿಲಿಪೈನ್ಸ್ ಅಧ್ಯಕ್ಷರ ಹೇಳಿಕೆಗೆ ಭಾರೀ ವಿರೋಧ

By ಅನಿಲ್ ಆಚಾರ್
|
Google Oneindia Kannada News

ಮನಿಲಾ, ಡಿಸೆಂಬರ್ 30: ಫಿಲಿಪೈನ್ ಅಧ್ಯಕ್ಷ ರೊಡ್ರಿಗೋ ಡುಟೆರ್ಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ತನ್ನ ಹದಿಹರೆಯದಲ್ಲಿ ಮನೆಗೆಲಸದಾಕೆಯನ್ನು 'ಸ್ಪರ್ಶಿಸಿದ' ಬಗ್ಗೆ ಡುಟೆರ್ಟ್ ನೀಡಿದ ಹೇಳಿಕೆಗೆ ಮಹಿಳಾ ಹಕ್ಕು ಗುಂಪುಗಳು ಆಕ್ರೋಶ ವ್ಯಕ್ತಪಡಿಸಿ, ಅಧ್ಯಕ್ಷರ ವಿರುದ್ಧ ಅತ್ಯಾಚಾರ ಯತ್ನ ಹಾಗೂ ಲೈಂಗಿಕ ಶೋಷಣೆಗೆ ಪ್ರೋತ್ಸಾಹ ನೀಡಿದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಮಹಿಳೆಯರ ಬಗ್ಗೆ, ಅದರಲ್ಲೂ ಅತ್ಯಾಚಾರದ ಜೋಕ್ ಗಳು ಮತ್ತು ಹಾದರದ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಲ್ಲಿರುವ ಡುಟೆರ್ಟ್, ತಮ್ಮ ಹೊಸ ಹೇಳಿಕೆ ಮೂಲಕ ಮತ್ತೆ ಕಿಡಿ ಹೊತ್ತಿದಿದ್ದಾರೆ. ತಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಮಾಡಿಕೊಂಡಿದ್ದ ಪಾಪ ನಿವೇದನೆ, ಮನೆಗೆಲಸದಾಕೆ ತನ್ನ ಕೋಣೆಯಲ್ಲಿ ಮಲಗಿದ್ದಾಗ ಹೇಗೆ ಒಳಪ್ರವೇಶ ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ.

ಫಿಲಿಪೈನ್ಸ್ ನಲ್ಲಿ 'ಉಸ್ಮಾನ್' ರೌದ್ರ ನರ್ತನಕ್ಕೆ ಹತ್ತಾರು ಮಂದಿ ಸಾವು ಫಿಲಿಪೈನ್ಸ್ ನಲ್ಲಿ 'ಉಸ್ಮಾನ್' ರೌದ್ರ ನರ್ತನಕ್ಕೆ ಹತ್ತಾರು ಮಂದಿ ಸಾವು

"ನಾನು ಹೊದಿಕೆಯನ್ನು ಮೇಲೆತ್ತಿದೆ ಮತ್ತು ಆಕೆಯ ಒಳಚಡ್ಡಿಯಲ್ಲಿನ ಭಾಗವನ್ನು ಮುಟ್ಟಲು ಯತ್ನಿಸಿದೆ. ನಾನು ಮುಟ್ಟುತ್ತಿದ್ದೆ. ಆಗ ಆಕೆ ಎಚ್ಚರವಾದರು. ಆಗ ಆ ಕೋಣೆಯಿಂದ ಹೊರಟುಬಿಟ್ಟೆ" ಎಂದು ಡುಟೆರ್ಟ್ ಹೇಳಿಕೊಂಡಿದ್ದಾರೆ. ಆ ನಂತರವೂ ಆಕೆ ಕೋಣೆಗೆ ವಾಪಸಾಗಿ, ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾಗಿ ಕೂಡಿ ತಪ್ಪೊಪ್ಪಿಕೊಂಡಿದ್ದಾಗಿ ಹೇಳಿದ್ದಾರೆ.

Philippines president Duterte under fire for saying he Touched maid

ಮಹಿಳಾ ಹಕ್ಕುಗಳ ರಾಜಕೀಯ ಪಕ್ಷ ಗೇಬ್ರಿಯಾಲದಿಂದ ಡುಟೆರ್ಟ್ ರಾಜೀನಾಮೆಗೆ ಆಗ್ರಹಿಸಲಾಗಿದೆ. ತಾನು ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ಆತ ಒಪ್ಪಿಕೊಂಡಿರುವುದರಿಂದ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜನನಾಂಗ ಒಳಕ್ಕೆ ಹಾಕುವ ಮೂಲಕವಷ್ಟೇ ಅತ್ಯಾಚಾರ ಆಗುವುದಿಲ್ಲ. ಬೆರಳು ಅಥವಾ ವಸ್ತುವನ್ನು ಬಳಸಿದರೂ ಅದು ಅತ್ಯಾಚಾರಕ್ಕೆ ಸಮವೇ ಎಂದು ಗೇಬ್ರಿಯಾಲದ ಸೆಕ್ರೆಟರಿ ಜೋಮ್ಸ್ ಸಲ್ವಡಾರ್ ಹೇಳಿದ್ದಾರೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಕ್ಯಾಥೋಲಿಕ್ ಚರ್ಚ್ ಮೇಲೆ ಎಪ್ಪತ್ಮೂರು ವರ್ಷದ ಡ್ಯುಟೆರ್ಟ್ ಭಾರೀ ವಾಗ್ದಾಳಿ ನಡೆಸಿದ್ದಾರೆ. ಚರ್ಚ್ ಗಳನ್ನು ಆಷಾಢಭೂತಿ ಸಂಸ್ಥೆ ಎಂದು ಜರೆದಿರುವ ಅವರು, ಶಾಲೆಯಲ್ಲಿ ಓದುವಾಗ ತಾನು ಹಾಗೂ ಸಹಪಾಠಿಗಳ ಮೇಲೆ ಪಾಪ ನಿವೇದನೆ ವೇಳೆ ಲೈಂಗಿಕ ದೌರ್ಜನ್ಯ ನಡೆದಿದ್ದಾಗಿ ಹೇಳಿದ್ದಾರೆ.

ಫಿಲಪೈನ್ ನ ಜೈಲು ದೊಂಬಿಯಲ್ಲಿ ಆಸ್ಟ್ರೇಲಿಯನ್ ಮಿಷನರಿಯೊಬ್ಬಾಕೆ ಕೊಲೆಯಾಗಿದ್ದರು. ತನ್ನ ಚುನಾವಣೆ ಪ್ರಚಾರ ಮಾಡುತ್ತಾ ಡ್ಯುಟೆರ್ಟ್, ಆ ಸುಂದರ ಆಸ್ಟ್ರೇಲಿಯನ್ ಮಿಷನರಿಯನ್ನು ಅತ್ಯಾಚಾರ ಮಾಡಲು ಬಯಸಿದ್ದೆ ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ಕಾರಣರಾಗಿದ್ದರು.

English summary
Philippine President Rodrigo Duterte drew outrage Sunday after saying he "touched" his maid when he was a teenager, with women's rights groups accusing him of attempted rape and encouraging sexual abuse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X