ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನಾ ವಿರೋಧಿ ಮಸೂದೆ ಅಂಗೀಕರಿಸಿದ ಫಿಲಿಪೈನ್ಸ್

|
Google Oneindia Kannada News

ಮನಿಲಾ, ಜೂನ್ 3: ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಕೆಳಮನೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬುಧವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಹೊಸ ಭಯೋತ್ಪಾದನಾ-ವಿರೋಧಿ ಮಸೂದೆ ಅಂಗೀಕರಿಸಿದೆ. ಈ ಮೂಲಕ ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಅವರ ಆಡಳಿತಕ್ಕೆ ಜಯ ಸಿಕ್ಕಿದೆ.

ನೂತನ ಭಯೋತ್ಪಾದನಾ-ವಿರೋಧಿ ಶಾಸನದ ಅಡಿಯಲ್ಲಿ ಭಯೋತ್ಪಾದನೆ ಬೆಂಬಲಿಸುವ ಮತ್ತು ಪ್ರಚೋದಿಸುವವರನ್ನು ವಾರಂಟ್ ಇಲ್ಲದೆ ಬಂಧಿಸುವ ಅಧಿಕಾರ ಇದೆ. ಶಂಕಿತರನ್ನು ದೀರ್ಘಾವಧಿಯವರೆಗೆ ಬಂಧಿಸುವ ಅಧಿಕಾರ ಒಳಗೊಂಡಿದೆ.

ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ

ಫೆಬ್ರವರಿ ತಿಂಗಳಲ್ಲಿ ಮೇಲ್ಮನೆಯಲ್ಲಿ ಭಯೋತ್ಪಾದನಾ-ವಿರೋಧಿ ಮಸೂದೆ ಅನುಮೋದನೆಗೊಂಡಿತ್ತು. ಈ ಮಸೂದೆಗೆ ಕೆಳಮನೆಯಲ್ಲಿ ಬುಧವಾರ ಅಂಗೀಕಾರ ಸಿಕ್ಕಿದೆ.

Philippines Govt Approved New Anti Terrorism Legislation

ಒಟ್ಟು 173 ಶಾಸಕರು ಮತ ಚಲಾವಣೆ ಮಾಡಿದ್ದು, 31 ಶಾಸಕರು ಮಸೂದೆಗೆ ವಿರೋಧ ವ್ಯಕ್ತಪಡಿಸಿದರು. 29 ಮಂದಿ ಮತದಾನದಿಂದ ದೂರ ಉಳಿದಿದ್ದರು. ಇನ್ನುಳಿದವರು ಮಸೂದೆಗೆ ಅನುಮೋದನೆ ನೀಡಿದರು.

ಅಧ್ಯಕ್ಷ ಡುಟರ್ಟೆ ಮಸೂದೆಯನ್ನು "ತುರ್ತು" ಎಂದು ಪರಿಗಣಿಸಬೇಕು ಎಂದು ಸ್ಪೀಕರ್‌ಗೆ ಸೋಮವಾರ ಪತ್ರವೊಂದನ್ನು ಬರೆದಿದ್ದರು. ಮತ್ತೊಂದೆಡೆ ಮಸೂದೆಯನ್ನು ವಿರೋಧಿಸಿದ ವಿಪಕ್ಷಗಳ ಪ್ರಯತ್ನ ಕೊನೆಗೂ ಸಫಲವಾಗಲಿಲ್ಲ. ಈ ಬಗ್ಗೆ ಪ್ರತಿಪಕ್ಷಗಳು ಸುಪ್ರೀಂಕೋರ್ಟ್ ನಲ್ಲಿ ಮಸೂದೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಲು ಮುಂದಾಗಿದ್ದಾರೆ.

English summary
The House of Representatives of the Philippines has approved new anti-terrorism legislation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X