ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ವಿರುದ್ಧ ಹೋರಾಡಿದ್ದಕ್ಕೆ ವೆಬ್‌ಸೈಟ್ ಸ್ಥಗಿತ; ಫಿಲಿಪ್ಪೈನ್‌ನಲ್ಲಿ ರ‍್ಯಾಪ್ಲರ್ ಅಂತ್ಯ

|
Google Oneindia Kannada News

ಮನೀಲ, ಜೂನ್ 29: ಫಿಲಿಪ್ಪೈನ್ ದೇಶದ ಅಧ್ಯಕ್ಷರ ದುರಾಡಳಿತ, ಭ್ರಷ್ಟಾಚಾರ ಇತ್ಯಾದಿ ವಿರುದ್ಧ ಹೋರಾಟ ನಡೆಸುತ್ತಿದ್ದ ರ‍್ಯಾಪ್ಲರ್ ಎಂಬ ಜಾಲತಾಣವೊಂದು ಬಂದ್ ಆಗುತ್ತಿದೆ. ನೊಬೆಲ್ ಪುರಸ್ಕೃತೆ ಮಾರಿಯಾ ರೆಸ್ಸಾ ಎಂಬುವರು ಸ್ಥಾಪಿಸಿದ ರ‍್ಯಾಪ್ಲರ್ ಕಂಪನಿಯನ್ನು ನಿಲ್ಲಿಸುವಂತೆ ಸರಕಾರ ಆದೇಶ ಮಾಡಿದೆ.

ಕುತೂಹಲವೆಂದರೆ, ಫಿಲಿಪ್ಪೈನ್ ದೇಶದಾಧ್ಯಕ್ಷ ರಾಡ್ರಿಗೋ ಡುಟೆರ್ಟೆ ಅಧಿಕಾರಾವಧಿ ಮುಗಿಯುವ ಒಂದು ದಿನದ ಮೊದಲು ಈ ಬೆಳವಣಿಗೆಯಾಗಿದೆ. ಅಧ್ಯಕ್ಷ ಡುಟರ್ಟೆ ಅವರ ದೊಡ್ಡ ಟೀಕಾಕಾರರಾಗಿದ್ದ ಮಾರಿಯಾ ರೆಸ್ಸಾ ಕೆಲ ವರ್ಷಗಳಿಂದಲೂ ಸರಕಾರದಿಂದ ಸಾಕಷ್ಟು ಕಿರುಕುಳಗಳನ್ನು ಅನುಭವಿಸಿದ್ದರು.

ರ‍್ಯಾಪ್ಲರ್ ಕಂಪನಿ ಫಿಲಿಪ್ಪೈನ್ಸ್ ದೇಶದ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಕಾರಣವೊಡ್ಡಿ ವೆಬ್ ಸೈಟ್ ಅನ್ನು ಮುಚ್ಚಲು ಆದೇಶ ಮಾಡಲಾಗಿದೆ.

8000 ಉದ್ಯೋಗಗಳ ಕಡಿತಗೊಳಿಸಲು ನೋವಾರ್ಟಿಸ್ ತೀರ್ಮಾನ8000 ಉದ್ಯೋಗಗಳ ಕಡಿತಗೊಳಿಸಲು ನೋವಾರ್ಟಿಸ್ ತೀರ್ಮಾನ

ಫಿಲಿಪ್ಪೈನ್ ಸೆಕ್ಯೂರಿಟಿ ಅಂಡ್ ಎಕ್ಸ್‌ಚೇಂಜ್ ಕಮಿಷನ್ ಸಂಸ್ಥೆ ರ‍್ಯಾಪ್ಲರ್ ಮುಚ್ಚಲು ನೋಟೀಸ್ ನೀಡಿದೆ. "ಮಾಸ್ ಮೀಡಿಯಾದಲ್ಲಿ ವಿದೇಶಿ ಮಾಲಿಕತ್ವದ ಮೇಲಿರುವ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ನಿರ್ಬಂಧಗಳ ನಿಯಮಗಳನ್ನು ಮುರಿದಿರುವ ಕಾರಣಕ್ಕೆ ರ‍್ಯಾಪ್ಲರ್‌ನ ಪರವಾನಿಗೆಯನ್ನು ರದ್ದು ಮಾಡಲಾಗಿದೆ" ಎಂದು ಇದು ಹೇಳಿಕೆ ಬಿಡುಗಡೆ ಮಾಡಿದೆ.

 2018ರಲ್ಲೇ ಪ್ರಯತ್ನ

2018ರಲ್ಲೇ ಪ್ರಯತ್ನ

ರ‍್ಯಾಪ್ಲರ್ ವೆಬ್‌ಸೈಟ್ ವಿರುದ್ಧ ಡುಟರ್ಟೆ ಸರಕಾರ 2016ರಲಿಂದಲೂ ಕಣ್ಣಿಟ್ಟಿದೆ. ವಿದೇಶೀ ಬಂಡವಾಳ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘನೆಯಾಗಿರುವ ಆರೋಪ ಮಾಡಿ 2018ರಲ್ಲಿ ರ‍್ಯಾಪ್ಲರ್‌ನ ಮಾಸ್ ಮೀಡಿಯಾ ಲೈಸೆನ್ಸ್ ಅನ್ನು ರದ್ದು ಮಾಡಲಾಗಿತ್ತು.

ಆ ಬಳಿಕ ಫೇಸ್‌ಬುಕ್‌ನ ಅಂತಾರಾಷ್ಟ್ರೀಯ ಫ್ಯಾಕ್ಟ್-ಚೆಕಿಂಗ್ ನೆಟ್ವರ್ಕ್‌ಗೆ ರ‍್ಯಾಪ್ಲರ್ ಸೇರ್ಪಡೆಯಾಯಿತು. ರ‍್ಯಾಪ್ಲರ್ ಜೊತೆ ಫೇಸ್‌ಬುಕ್ ಪಾರ್ಟ್ನರ್ಶಿಪ್ ಮಾಡಿಕೊಂಡಿದ್ದನ್ನು ಸರಕಾರ ವಿರೋಧಿಸಿತು.

2018ರಲ್ಲೇ ರ‍್ಯಾಪ್ಲರ್‌ನ ಮಾಸ್ ಮೀಡಿಯಾ ಲೈಸೆನ್ಸ್ ರದ್ದು ಮಾಡಲಾಯಿತಾದರೂ ಈಗ ವೆಬ್‌ಸೈಟ್ ಅನ್ನೇ ನಿಲ್ಲಿಸುವಂತೆ ರ‍್ಯಾಪ್ಲರ್‌ಗೆ ಆದೇಶ ಮಾಡಲಾಗಿದೆ. ಈಗ ರ‍್ಯಾಪ್ಲರ್ ಮುಚ್ಚದೇ ಬೇರೆ ವಿಧಿ ಇಲ್ಲ ಎನ್ನಲಾಗುತ್ತಿದೆ.

ಭಾರತ ಇರುವ ಗುಂಪಿಗೆ ಸೇರಲು ಬಯಸುತ್ತಿರುವ ಇರಾನ್, ಅರ್ಜೆಂಟೀನಾಭಾರತ ಇರುವ ಗುಂಪಿಗೆ ಸೇರಲು ಬಯಸುತ್ತಿರುವ ಇರಾನ್, ಅರ್ಜೆಂಟೀನಾ

 ರ‍್ಯಾಪ್ಲರ್ ಹುಟ್ಟು ಮತ್ತು ಹೋರಾಟ

ರ‍್ಯಾಪ್ಲರ್ ಹುಟ್ಟು ಮತ್ತು ಹೋರಾಟ

ಇದು ಮಾರಿಯಾ ರೆಸ್ಸಾ ಹಾಗೂ ಇತರ ಕೆಲ ಫಿಲಿಪ್ಪೈನ್ ಪತ್ರಕರ್ತರು ಸೇರಿ 2012ರಲ್ಲಿ ಅರಂಭಿಸಿದ ಸುದ್ದಿ ಜಾಲತಾಣವಾಗಿದೆ. ಜಾಲತಾಣ ರೂಪುಗೊಳ್ಳುವ ಒಂದು ವರ್ಷದ ಹಿಂದೆ ಮೂವ್‌ಪಿಎಚ್ ಹೆಸರಿನಲ್ಲಿ ಫೇಸ್‌ಬುಕ್ ಪೇಜ್ ಆಗಿ ಇದು ಆರಂಭವಾಗಿತ್ತು.

ಫೇಸ್‌ಬುಕ್ ಪೇಜ್ ಆಗಿ ಇದ್ದಾಗಿನಿಂದಲೂ ರ‍್ಯಾಪ್ಲರ್ ದಿಟ್ಟ ಸುದ್ದಿಗಳನ್ನು ಪ್ರಕಟಿಸುವುದರಲ್ಲಿ ಸೈ ಎನಿಸಿತ್ತು. ವೆಬ್‌ಸೈಟ್ ಆರಂಭವಾದ ದಿನವೇ ಆಗಿನ ಫಿಲಿಪ್ಪೈನ್ ಮುಖ್ಯ ನ್ಯಾಯಮೂರ್ತಿಗೆ ಯಾವ ಪ್ರಬಂಧ ಸಲ್ಲಿಕೆಯೂ ಇಲ್ಲದೇ ಸ್ಯಾಂಟೊ ಟಾಮಸ್ ಯೂನಿವರ್ಸಿಟಿಯಿಂದ ಪಿಎಚ್‌ಡಿ ಪ್ರದಾನ ಮಾಡಲಾಗಿದೆ ಎಂಬ ವರದಿ ಪ್ರಕಟವಾಯಿತು. ಆಡಳಿತ ವ್ಯವಸ್ಥೆಯ ವಿರುದ್ಧ ಸಾಕಷ್ಟು ಸುದ್ದಿ, ಲೇಖನಗಳು ಈ ವೆಬ್‌ಸೈಟ್‌ನಲ್ಲಿ ಪ್ರಕಟವಾದವು.

 ಅಧ್ಯಕ್ಷರ ವಿರುದ್ಧ...

ಅಧ್ಯಕ್ಷರ ವಿರುದ್ಧ...

2016ರಲ್ಲಿ ಅಧ್ಯಕ್ಷ ರಾಡ್ರಿಗೋ ಡುಟರ್ಟೆ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿತು. ಡುಟರ್ಟೆ ಅಧಿಕಾರಕ್ಕೆ ಬಂದ ಬಳಿಕ ಡ್ರಗ್ಸ್ ಮಾಫಿಯಾ ವಿರುದ್ಧ ಸಮರವನ್ನೇ ಆರಂಭಿಸಿದರು. ಈ ನೆವದಲ್ಲಿ ಬಹಳ ಗಂಭೀರ ಸ್ವರೂಪ ಎನಿಸುವ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿತ್ತು. ಸರಕಾರ ಮತ್ತು ಪೊಲೀಸರ ನಿರ್ದಯ ಕ್ರಮಗಳ ವಿರುದ್ಧ ರ‍್ಯಾಪ್ಲರ್‌ನಲ್ಲಿ ಬಹಳ ವರದಿಗಳು ಬಂದವು.

ಅಷ್ಟೇ ಅಲ್ಲ, ಅಧ್ಯಕ್ಷ ಡುಟರ್ಟೆಯ ಫೇಸ್‌ಬುಕ್ ಮತ್ತಿತರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ನಕಲಿ ಫಾಲೋಯರ್‌ಗಳೇ ಹೆಚ್ಚಿರುವ ಸಂಗತಿಯನ್ನು ರ‍್ಯಾಪ್ಲರ್ ಬೆಳಕಿಗೆ ತಂದಿತ್ತು.

 ಕಾನೂನು ಉಲ್ಲಂಘನೆ ಏನು?

ಕಾನೂನು ಉಲ್ಲಂಘನೆ ಏನು?

ಫಿಲಿಪ್ಪೈನ್ ಕಾನೂನು ಪ್ರಕಾರ ದೇಶೀಯ ಸಂಸ್ಥೆಗಳು ಮಾತ್ರವೇ ಮಾಧ್ಯಮ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಲು ಅವಕಾಶ ಇದೆ. ವಿದೇಶೀ ಬಂಡವಾಳ ಹೂಡಿಕೆಯಾಗುವಂತಿಲ್ಲ. ಆದರೆ 2015ರಲ್ಲಿ ರ‍್ಯಾಪ್ಲರ್ ಸಂಸ್ಥೆಗೆ ಅಮೆರಿಕ ಒವಿಡ್ಯಾರ್ ನೆಟ್ವರ್ಕ್ ಎಂಬ ಸಂಸ್ಥೆ ಬಂಡವಾಳ ಹಾಕಿತು. ಇದು ಒಂದು ಆರೋಪವಾಗಿದೆ.

ಇದಲ್ಲದೇ ರ‍್ಯಾಪ್ಲರ್‌ನಲ್ಲಿ ಪ್ರಕಟವಾಗಿದ್ದ ಕೆಲ ಸುದ್ದಿಗಳನ್ನು ಇಟ್ಟುಕೊಂಡು ಮಾನಹಾನಿ ಮೊಕದ್ದಮೆಗಳನ್ನು ಹಾಕಲಾಗಿದೆ. ಈ ಸಂಬಂಧ ರ‍್ಯಾಪ್ಲರ್ ಸಂಸ್ಥಾಪಕಿ ರೆಸ್ಸಾ ಅವರಿಗೆ ಜೈಲುಶಿಕ್ಷೆಯೂ ವಿಧಿಸಲಾಗಿತ್ತು.

(ಒನ್ಇಂಡಿಯಾ ಸುದ್ದಿ)

Recommended Video

ಟೈಲರ್ ಶಿರಚ್ಛೇದ: ರಾಜಸ್ಥಾನದಲ್ಲಿ ನಿಷೇಧಾಜ್ಞೆ ಜಾರಿ, ಇಂಟರ್ನೆಟ್ ಸೇವೆ ಸ್ಥಗಿತ | *India | OneIndia Kannada

English summary
News website Rappler co-founded by nobel prize winner Maria Ressa, has been ordered to shut down on charges of violating foreign investment rules in Philippines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X