ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12000 ಜನರಿಗೆ ಲಸಿಕೆ ಹಾಕಿಸಿಕೊಂಡ ಮೇಲೂ ಕೊರೊನಾ ಪಾಸಿಟಿವ್!

|
Google Oneindia Kannada News

ಜೆರುಸಲೆಂ, ಜನವರಿ.21: ಸರ್ಕಾರದಿಂದ ಅನುಮೋದನೆ ಪಡೆದಿರುವ ಅಧಿಕೃತ ಫೈಜರ್ ಲಸಿಕೆಯನ್ನು ಹಾಕಿಸಿಕೊಂಡ ನಂತರದಲ್ಲೂ 12,000 ಜನರಲ್ಲಿ ಕೊವಿಡ್-19 ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಫೈಜರ್ ಲಸಿಕೆಯನ್ನು ಹಾಕಿಸಿಕೊಂಡವರಲ್ಲಿ ಬದಲಾಗಿರುವ ರೋಗ ನಿರೋಧಕ ಶಕ್ತಿ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಇಸ್ರೇಲ್ ಆರೋಗ್ಯ ಸಚಿವಾಲಯವು ವೈದ್ಯಕೀಯ ತಪಾಸಣೆ ನಡೆಸಿತ್ತು. ಲಸಿಕೆ ಪಡೆದ 1,89,000 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೇ.06ಕ್ಕಿಂತ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಎರಡನೇ ಬಾರಿ ಫೈಜರ್ ಲಸಿಕೆ ಹಾಕಿಸಿಕೊಂಡ ನಂತರದಲ್ಲೂ 65 ಮಂದಿ ಆರೋಗ್ಯದ ಸ್ಥಿತಿ ಗಂಭೀರವಾಗಿರುವುದು ಬೆಳಕಿಗೆ ಬಂದಿದೆ.

ಬೇಡಪ್ಪಾ ಬೇಡ ಲಸಿಕೆ: ಕೊವ್ಯಾಕ್ಸಿನ್ ಬಗ್ಗೆ ಜನರಲ್ಲಿ ಭಯವೇಕೆ?ಬೇಡಪ್ಪಾ ಬೇಡ ಲಸಿಕೆ: ಕೊವ್ಯಾಕ್ಸಿನ್ ಬಗ್ಗೆ ಜನರಲ್ಲಿ ಭಯವೇಕೆ?

ವಿಶ್ವದ ಹಲವು ರಾಷ್ಟ್ರಗಳಂತೆ ಇಸ್ರೇಲ್ ಕೂಡ ಲಸಿಕೆ ವಿತರಣೆಯನ್ನು ಹಂತ ಹಂತವಾಗಿ ನೀಡುವುದಕ್ಕೆ ಯೋಜನೆ ರೂಪಿಸಿತ್ತು. ಡಿಸೆಂಬರ್.19ರಂದು ಮೊದಲ ಹಂತದಲ್ಲಿ ಫೈಜರ್ ಲಸಿಕೆ ನೀಡಲಾಗಿತ್ತು. ಈ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಿರಿಯ ವಯಸ್ಸಿನವರಿಗೆ ಹಾಗೂ ಆರೋಗ್ಯ ಸಮಸ್ಯೆ ಉಳ್ಳವರಿಗೆ ಲಸಿಕೆ ನೀಡುವುದಕ್ಕೆ ನಿರ್ಧರಿಸಲಾಗಿತ್ತು.

ದೇಶದ ಶೇ.25ರಷ್ಟು ಜನರಿಗೆ ಕೊರೊನಾವೈರಸ್ ಲಸಿಕೆ

ದೇಶದ ಶೇ.25ರಷ್ಟು ಜನರಿಗೆ ಕೊರೊನಾವೈರಸ್ ಲಸಿಕೆ

ಇಸ್ರೇಲ್ ನಲ್ಲಿ ಈಗಾಗಲೇ ದೇಶದ ಜನಸಂಖ್ಯೆಯ ಶೇ.25.6ರಷ್ಟು ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 22 ಲಕ್ಷ ಜನರು ಕೊವಿಡ್-19 ಲಸಿಕೆ ಪಡೆದುಕೊಂಡಿದ್ದು, ಈ ಪೈಕಿ ಬಹುಪಾಲು ಜನರು ಎರಡನೇ ಬಾರಿಯೂ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಲಸಿಕೆ ಹಾಕಿಸಿಕೊಳ್ಳುತ್ತಿದ್ದರೂ ಇಸ್ರೇಲ್ ಜನರಿಗೆ ಆತಂಕ ತಪ್ಪಿದ್ದಲ್ಲ. ಒಂದು ಕಡೆ ಬ್ರಿಟನ್ ರೂಪಾಂತರಿ ವೈರಸ್ ಕಾಟ ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಜನರು ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ವೈರಸ್ ವೇಗವಾಗಿ ಹರಡುತ್ತಿದೆ.

ಒಂದು ಡೋಸ್ ನಿಂದ ಆರೋಗ್ಯ ಸುರಕ್ಷತೆ ಸಾಧ್ಯವಿಲ್ಲ

ಒಂದು ಡೋಸ್ ನಿಂದ ಆರೋಗ್ಯ ಸುರಕ್ಷತೆ ಸಾಧ್ಯವಿಲ್ಲ

ಕೊರೊನಾವೈರಸ್ ಲಸಿಕೆ ವಿರುದ್ಧ ನೀಡುವ ಮೊದಲ ಡೋಸ್ ಅಷ್ಟೊಂದು ಪರಿಣಾಮಕಾರಿಯಾಗಿ ಇರುವುದಿಲ್ಲ ಎಂದು ಇಸ್ರೇಲ್ ಕೊರೊನಾವೈರಸ್ ಆಯುಕ್ತ ನಾಚ್ಮನ್ ಆಶ್ ಅವರು ತಿಳಿಸಿದ್ದಾರೆ. ನೀವು ಎರಡು ಡೋಸ್ ಲಸಿಕೆ ಪಡೆದ ನಂತರವಷ್ಟೇ ನಿರೀಕ್ಷಿತ ಪ್ರಭಾವ ಬೀರಲಿದೆ. ಮೊದಲ ಡೋಸ್ ಗಿಂತ ಎರಡನೇ ಡೋಸ್ ಪರಿಣಾಮಕಾರಿ ಆಗಿರಲಿದೆ. ಆದರೆ ಮೊದಲ ಡೋಸ್ ಲಸಿಕೆ ಪಡೆದು 21 ದಿನಗಳ ನಂತರವಷ್ಟೇ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಫೈಜರ್ ಲಸಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶ

ಫೈಜರ್ ಲಸಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶ

ಕೊವಿಡ್-19 ಸೋಂಕಿನಿಂದ ಸುರಕ್ಷಿತವಾಗಿರಲು ಫೈಜರ್ ಲಸಿಕೆಯು ಪರಿಣಾಮಕಾರಿಯಾಗಿದೆ. ಆದರೆ ಲಸಿಕೆಯ ಮೊದಲ ಡೋಸ್ ಶೇ.52ರಷ್ಟು ಪ್ರಭಾವ ಬೀರಲಿದ್ದು, ತದನಂತರದಲ್ಲಿ ಪಡೆಯುವ 2ನೇ ಡೋಸ್ ನಿಂದ ಶೇ.95ರಷ್ಟು ಪರಿಣಾಮವನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ಇದು ಕೇವಲ ಇಸ್ರೇಲ್ ಗೆ ಸಂಬಂಧಿಸಿದ ವಿಚಾರವಲ್ಲ ಎಂದು ಫೈಜರ್ ಕಂಪನಿಯು ಸ್ಪಷ್ಟಪಡಿಸಿದೆ.

ನಾರ್ವೆಯಲ್ಲಿ ಲಸಿಕೆ ಹಾಕಿಸಿಕೊಂಡ 30 ಜನ ಬಲಿ

ನಾರ್ವೆಯಲ್ಲಿ ಲಸಿಕೆ ಹಾಕಿಸಿಕೊಂಡ 30 ಜನ ಬಲಿ

ಫೈಜರ್ ಲಸಿಕೆಯನ್ನು ಪಡೆದ 30 ಮಂದಿ ಮೃತಪಟ್ಟಿರುವ ಘಟನೆ ನಾರ್ವೆಯಲ್ಲಿ ನಡೆದಿರುವುದು ಇತ್ತೀಚಿಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಆತಂಕ ಹುಟ್ಟಿಸಿತ್ತು. ಇದೊಂದು ಘಟನೆಯು ಫೈಜರ್ ಲಸಿಕೆಯ ಸುರಕ್ಷತೆ ಬಗ್ಗೆ ಜನರು ಪ್ರಶ್ನೆ ಮಾಡುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಹಾಂಗ್ ಕಾಂಗ್ ನಲ್ಲಿ ಕೂಡಾ ಲಸಿಕೆ ವಿತರಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದಕ್ಕೂ ಮೊದಲು ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ.

English summary
Pfizer Vaccine: 12 Thousand People Test COVID Positive After Get Vaccine In Israel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X