ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5-11 ವಯಸ್ಸಿನ ಮಕ್ಕಳಿಗೆ ಫೈಜರ್ ಸುರಕ್ಷಿತವೆಂದ ಪ್ರಯೋಗ

|
Google Oneindia Kannada News

ಫ್ರಾಂಕ್‌ಫರ್ಟ್, ಸೆಪ್ಟೆಂಬರ್ 20: ಫೈಜರ್ ಹಾಗೂ ಬಯೋ ಎನ್‌ ಟೆಕ್ ಫೈಜರ್ ಲಸಿಕೆಯ ಫಲಿತಾಂಶಗಳ ಬಗ್ಗೆ ವರದಿ ನೀಡಿದೆ.

5-11 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್ ಕೊರೊನಾ ಲಸಿಕೆ ಸುರಕ್ಷಿತ ಎಂದು ಹೇಳಲಾಗಿದೆ. ಮಕ್ಕಳಲ್ಲಿ ಲಸಿಕೆಯು ಹೆಚ್ಚು ಪ್ರತಿಕಾಯಗಳನ್ನು ಸೃಷ್ಟಿ ಮಾಡುತ್ತವೆ ಎಂಬುದು ಸಾಬೀತಾಗಿದೆ. ಶೀಘ್ರದಲ್ಲೇ ಈ ಲಸಿಕೆ ಪ್ರಯೋಗಕ್ಕೆ ಅನುಮೋದನೆ ಸಿಗಲಿದೆ.

ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟವರಿಗಿಂತ ಕಡಿಮೆ ಪ್ರಮಾಣದಲ್ಲಿ ನೀಡಲಾಗುವುದು. ಐದರಿಂದ 11 ವರ್ಷ ವಯಸ್ಸಿನವರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದ್ದು, ಲಸಿಕೆ ಸುರಕ್ಷಿತವಾಗಿದೆ ಎನ್ನುವ ಫಲಿತಾಂಶ ಬಂದಿದೆ.

Pfizer Covid Vaccine Safe For Children Aged 5-11: Clinical Trial Results

ಸಂಸ್ಥೆಯು ಡೇಟಾವನ್ನು ಯುರೋಪಿಯನ್ ಯೂನಿಯನ್ , ಯುನೈಟೆಡ್ ಸ್ಟೇಟ್ಸ್‌ ಹಾಗೂ ಪ್ರಪಂಚದಾದ್ಯಂತ ಸಾಧ್ಯವಾದಷ್ಟು ಬೇಗ ಸಲ್ಲಿಸಲು ಯೋಜನೆ ರೂಪಿಸಿದ್ದಾರೆ.

ಕೊರೊನಾ ವೈರಸ್‌ನ ಎರಡನೇ ಅಲೆ ಇದೀಗ ಭಾರತದಲ್ಲಿ ನಿಲ್ಲುವ ಸಂಕೇತಗಳು ಗೋಚರಿಸುತ್ತಿವೆ. ಆದರೆ, ಇಂದಿಗೂ ಕೂಡ ತಜ್ಞರು ಮೂರನೇ ಅಲೆಯ ಮುನ್ನೆಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ.

ಮೂರನೆಯ ಅಲೆ ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರ್ತಿಸಲಾಗುತ್ತಿದೆ. ಇದರ ಹಿಂದಿನ ಪ್ರಮುಖ ಕಾರಣ ಎಂದರೆ, ಭಾರತದಲ್ಲಿ ಮಕ್ಕಳಿಗಾಗಿ ಕೊರೊನಾ ವ್ಯಾಕ್ಸಿನ್ ಇಲ್ಲದೆ ಇರುವುದು.

ಅಮೆರಿಕಾದ ಔಷಧಿ ತಯಾರಕ ಕಂಪನಿಯಾಗಿರುವ ಫೈಜರ್ ಕಂಪನಿಯ ವ್ಯಾಕ್ಸಿನ್ ಮಾತ್ರ ವಿಶ್ವದಲ್ಲಿ ಮಕ್ಕಳಿಗೆ ನೀಡಲಾಗುವ ಏಕೈಕ ವ್ಯಾಕ್ಸಿನ್ ಆಗಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ AIIMS ದೆಹಲಿ ವೈದ್ಯ ಡಾ. ರಣದೀಪ್ ಗುಲೇರಿಯಾ ಭಾರತದಲ್ಲಿಯೂ ಕೂಡ ಮಕ್ಕಳಿಗೆ ನೀಡಲಾಗುವುದು ಎಂದಿದ್ದಾರೆ. ಶೀಘ್ರದಲ್ಲಿಯೇ ಫೈಜರ್ ಲಸಿಕೆ ಭಾರತಕ್ಕೆ ಬರಲಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಲಸಿಕೆಗೆ ತುರ್ತು ಅನುಮೋದನೆ ನೀಡುವ ಸಂಬಂಧ ಎಫ್​ಡಿಎ ಕೂಡ ಮುಂದಾಗಿದೆ. ಬಹುಶಃ ಚಳಿಗಾಲದ ಆರಂಭದಲ್ಲಿ ಲಸಿಕೆ ನೀಡಲು ಅನುಮೋದನೆ ಸಿಗಬಹುದು. ಇಲ್ಲಿನ ಪರಿಸ್ಥಿತಿಯ ನಿರ್ಧಾರಿಸಿ ಮಕ್ಕಳಿಗೆ ತುರ್ತು ಲಸಿಕೆ ನೀಡಲಾಗುವುದು ಎಂದಿದ್ದಾರೆ.

2 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಕೋವಿಡ್​ ಲಸಿಕೆ ನೀಡುವ ಸಂಬಂಧ ಫೈಜರ್​ ಕ್ಲಿನಿಕಲ್​ ಪ್ರಯೋಗ ನಡೆಸಿದೆ. ಈ ಪ್ರಯೋಗಗಳ ಫಲಿತಾಂಶ ನವೆಂಬರ್​ ಸಿಗಲಿದೆ.

ನವೆಂಬರ್​ ಅಥವಾ ಡಿಸೆಂಬರ್​ನಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಫೈಜರ್​ ಲಸಿಕೆ ನೀಡಲು ಅನುಮೋದಿಸಿದರೆ, ಈ ವರ್ಷಾಂತ್ಯದೊಳಗೆ ಲಸಿಕೆ ವಿತರಣೆಗೆ ಆರಂಭಿಸಲಿದೆ.

ಮೂರನೇ ಅಲೆ ಸೋಂಕು ಅಥವಾ ಡೆಲ್ಟಾ ಸೋಂಕುಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನಲೆ ಕೋವಿಡ್​​ ವಿರುದ್ಧ ಹೋರಾಡಲು ಮಕ್ಕಳಿಗೆ ಲಸಿಕೆ ನೀಡುವುದು ಅವಶ್ಯವಾಗಿದ್ದು, ಈಗಾಗಲೇ ಮಕ್ಕಳ ಲಸಿಕೆಗೆ ಅನೇಕ ಔಷಧ ಕಂಪನಿಗಳು ಪ್ರಯೋಗ ನಡೆಸುತ್ತಿವೆ.

English summary
Pfizer and BioNTech on Monday said trial results showed their coronavirus vaccine was safe and produced a robust immune response in children aged five to 11, adding that they would seek regulatory approval shortly. pfizer, Pfizer Covid Vaccine Safe For Children Aged 5-11: Clinical Trial Results , 5-11
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X