ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಮುಖ್ಯಸ್ಥನ ಹೊಡೆದುರುಳಿಸಿದ ಅಮೆರಿಕ

By Srinath
|
Google Oneindia Kannada News

ಪೇಶಾವರ, ನ.2: ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಲುವಾಗಿ ಅಮೆರಿಕದ ಡ್ರೋನ್ ಪಡೆಯು ಪಾಕಿಸ್ತಾನದ ತಾಲಿಬಾನ್‌ ಭಯೋತ್ಪಾದಕ ಸಂಘಟನೆಯ ಸ್ವಘೋಷಿತ ಮುಖ್ಯಸ್ಥ ಹಕೀಮುಲ್ಲಾ ಮೆಹ್ಸೂದನನ್ನು ಹತ್ಯೆಗೈದಿದ್ದೇ ತಡ ಉಳಿದ ತಾಲಿಬಾನಿಗಳು ಸೇಡಿಗಾಗಿ ತಹತಹಿಸುತ್ತಿದ್ದಾರೆ. 'ನೋಡ್ತಾ ಇರಿ ಸಮ ಸೇಡು ತೀರಿಸ್ಕೋಳ್ತೀವಿ' ಎಂದು ಬೆದರಿಕೆಯೊಡ್ಡಿದ್ದಾರೆ.

ಹಕೀಮುಲ್ಲಾ ಮೆಹ್ಸೂದ್ ಹತ್ಯೆಯಲ್ಲಿ ಪಾಕಿಸ್ತಾನ ಸರಕಾರವೂ ಶಾಮೀಲಾಗಿದೆ. ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದೂ ತಾಲಿಬಾನಿ ಪಡೆ ಎಚ್ಚರಿಸಿದೆ.

Peshawar American drone strike kills Pak Taliban chief Hakimullah,
ಬೆಳಗಿನ ಸುದ್ದಿ: ಭಯೋತ್ಪಾದನೆ ವಿರುದ್ಧ ಅಮೆರಿಕ ಮತ್ತೊಂದು ದಿಟ್ಟ ಹೆಜ್ಜೆಯಿಟ್ಟಿದೆ. ಅಮೆರಿಕನ್ ಡ್ರೋನ್ ಪಡೆಯು ಪಾಕಿಸ್ತಾನದ ತಾಲಿಬಾನ್‌ ಭಯೋತ್ಪಾದಕ ಸಂಘಟನೆಯ ಸ್ವಘೋಷಿತ ಮುಖ್ಯಸ್ಥ ಹಕೀಮುಲ್ಲಾ ಮೆಹ್ಸೂದನನ್ನು ಶುಕ್ರವಾರ ಹತ್ಯೆಗೈದಿದೆ ಎಂದು ಪಾಕಿಸ್ತಾನ ದೃಢಪಡಿಸಿದೆ. ಹಕೀಮುಲ್ಲಾನ ಅಂಗರಕ್ಷಕ ಮತ್ತು ಚಾಲಕ ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಒಟ್ಟು 25 ಮಂದಿ ಮೃತಪಟ್ಟಿದ್ದಾರೆ.

ಪಾಕಿಸ್ತಾನ ಸೇರಿದಂತೆ ಇಡೀ ಜಗತ್ತಿಗೇ ತಲೆನೋವಾಗಿದ್ದ ಬೆಳೆಯುತ್ತಿದ್ದ ಹಕೀಮುಲ್ಲಾ ಶುಕ್ರವಾರ ಅಮೆರಿಕದ ಚಾಲಕ ರಹಿತ ದಾಳಿ ವಿಮಾನದ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕುತೂಹಲದ ಸಂಗತಿಯೆಂದರೆ ಈ ಹಿಂದೆ ಹಲವು ಬಾರಿ ತಾಲಿಬಾನಿ ಹಕೀಮುಲ್ಲಾ ಮೃತಪಟ್ಟಿರುವುದಾಗಿ ವರದಿಯಾಗಿತ್ತು. ಆದರೆ, ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿರುವ ನಾರ್ತ್ ವಝೀರಿಸ್ತಾನ್ ಬುಡಕಟ್ಟು ಪ್ರಾಂತ್ಯದ ಗ್ರಾಮವೊಂದರಲ್ಲಿ ಶುಕ್ರವಾರ ನಡೆದ ಡ್ರೋನ್ ದಾಳಿಯಲ್ಲಿ ಆತ ಮೃತಪಟ್ಟಿರುವುದಾಗಿ ಗುಪ್ತಚರ, ಸೇನಾ ಹಾಗೂ ಉಗ್ರಗಾಮಿ ಮೂಲಗಳು ಸ್ಪಷ್ಟಪಡಿಸಿವೆ.

ಇಷ್ಟಕ್ಕೂ ಹಕೀಮುಲ್ಲಾ ಹತ್ಯೆಗೆ ಅಮೆರಿಕ ಏಕೆ ತಹತಹಿಸುತ್ತಿತ್ತು ಅಂದರೆ 2010ರಲ್ಲಿ ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್ ನಲ್ಲಿ ಕಾರ್ ಬಾಂಬ್ ಸ್ಫೋಟಿಸಲು ವಿಫಲ ಯತ್ನ ನಡೆಸಿದ್ದ ಎನ್ನಲಾಗಿದೆ. ಗಮನಾರ್ಹವೆಂದರೆ ತಾಲಿಬಾನಿ ಉಗ್ರರ ಜತೆ ಶಾಂತಿ ಮಾತುಕತೆ ಆರಂಭಿಸಲು ಸಿದ್ಧ ಎಂದು ಪಾಕ್ ಸರಕಾರ ಘೋಷಿಸಿದ ಮಾರನೆಯ ದಿನವೇ ಹಕೀಮುಲ್ಲಾನನ್ನು ಅಮೆರಿಕವು ಇಲ್ಲವಾಗಿಸಿದೆ.

'ಹಕೀಮುಲ್ಲಾ ಮೆಹ್ಸೂದ್ ಡ್ರೋನ್ ದಾಳಿಯಲ್ಲಿ ಮೃತಪಟ್ಟಿರುವುದಾಗಿ ನಾವು ಖಚಿತಪಡಿಸಬಲ್ಲೆವು' ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದರು. ಹಿಂದಿನ ಪಾಕಿಸ್ತಾನಿ ತಾಲಿಬಾನ್‌ನ ಮುಖ್ಯಸ್ಥ ಡ್ರೋನ್ ದಾಳಿಯಲ್ಲಿ ಸತ್ತ ಬಳಿಕ 2009 ಆಗಸ್ಟಿನಲ್ಲಿ ಹಕೀಮುಲ್ಲಾ ಪಾಕಿಸ್ತಾನದ ತಾಲಿಬಾನ್‌ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ.

English summary
Peshawar - American drone strike kills Pak Taliban chief Hakimullah. A US drone strike killed the leader of the Pakistani Taliban Friday, US and Pakistani officials said, in a major blow to the group just a day after the government said it had started peace talks with the militants. Hakimullah Mehsud is believed to be behind a failed car bombing in New York's Times Square in 2010
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X