ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ: ಪಾಕ್ ಕೈವಾಡವನ್ನು ಒಪ್ಪಿಕೊಂಡುಬಿಟ್ಟರೇ ಮುಷ್ರಫ್?

|
Google Oneindia Kannada News

Recommended Video

Pulwama : ಕೊನೆಗೂ ಸತ್ಯ ಒಪ್ಪಿಕೊಂಡ ಮಾಜಿ ಮಾಜಿ ಅಧ್ಯಕ್ಷ, ಪರ್ವೇಜ್ ಮುಷ್ರಫ್ | Oneindia Kannada

ಇಸ್ಲಾಮಾಬಾದ್, ಫೆಬ್ರವರಿ 21: 'ಪುಲ್ವಾಮಾದಲ್ಲಿ ಭಾರತದ 40 ಕ್ಕೂ ಹೆಚ್ಚು ಯೋಧರನ್ನು ಬಲಿತೆಗೆದುಕೊಂಡ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ಕೈವಾಡವಿರುವುದು ಸತ್ಯವಿರಬಹುದು, ಆದರೆ ಪಾಕ್ ಕೈವಾಡವಿಲ್ಲ' ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ಹೇಳಿದ್ದಾರೆ.

ಇಂಡಿಯಾ ಟುಡೇ ಟಿವಿಗೆ ಅವರು ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಪುಲ್ವಾಮಾ ಘಟನೆಯ ಬಗ್ಗೆ ಮಾತನಾಡುತ್ತಿದ್ದರು.

ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ

ಘಟನೆಯಲ್ಲಿ ಪಾಕ್ ಕೈವಾಡವಿಲ್ಲ ಎನ್ನುವ ಅವರು, ಜೈಷ್ ಕೈವಾಡವನ್ನು ಒಪ್ಪಿಕೊಳ್ಳುವ ಮೂಲಕ ಪರೋಕ್ಷವಾಗಿ ಪಾಕ್ ಕೈವಾಡವನ್ನೂ ಒಪ್ಪಿಕೊಂಡಂತಾಗಿಲ್ಲವೇ? ಏಕೆಂದರೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಪಾಕಿಸ್ತಾನವೇ ಹಾಲೆರೆಯುತ್ತಿರುವುದು ಇಡೀ ವಿಶ್ವಕ್ಕೂ ಗೊತ್ತು!

ಮೋದಿಗೆ ಟಾಂಗ್, ಖಾನ್ ಗೆ ಬೆಂಬಲ

ಮೋದಿಗೆ ಟಾಂಗ್, ಖಾನ್ ಗೆ ಬೆಂಬಲ

ಘಟನೆಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಮುಷ್ರಫ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಎಂದಿಗೂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದು ಖಾನ್ ಬೆಂಬಲಕ್ಕೆ ನಿಂತರು. ಸಿಆರ್ ಪಿಎಫ್ ಯೋಧರ ಬಲಿದಾನದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಕೊಂಚವೂ ಅನುಕಂಪವಿಲ್ಲ. ಅವರು ತೋರುತ್ತಿರುವು ನೈಜ ಕಾಳಜಿಯಲ್ಲ ಎಂದು ದೂರಿದರು.

ಜೈಷ್ ಕೈವಾಡ ಸತ್ಯ, ಆದ್ರೆ ಪಾಕ್ ಅಮಾಯಕ!

ಜೈಷ್ ಕೈವಾಡ ಸತ್ಯ, ಆದ್ರೆ ಪಾಕ್ ಅಮಾಯಕ!

"ಜೈಷ್ ಉಗ್ರರ ಕೈವಾಡ ಈ ಘಟನೆಯಲ್ಲಿ ಇದೆ ಎಂಬುದು ಸಾಬೀತಾಗಿದೆ. ಆದರೆ ಅದಕ್ಕಾಗಿ ಪಾಕಿಸ್ತಾನವನ್ನು ದೂರುವುದು ಸರಿಯಲ್ಲ' ಎಂದು ಮುಷ್ರಫ್ ಹೇಳಿದದರು. ಜೈಷ್ ಉಗ್ರಸಂಘಟನೆ ಪಾಕಿಸ್ತಾನ ಮೂಲದ್ದು ಎಂಬುದು ವಿಶ್ವಕ್ಕೆ ಗೊತ್ತು, ಪಾಕಿಸ್ತಾನವೇ ಅದಕ್ಕೆ ನೆಲೆ ಮತ್ತು ಬೆಂಬಲ ನೀಡುತ್ತಿರುವುದೂ ಗೊತ್ತು. ಹೀಗಿರುವಾಗ ಮುಷ್ರಫ್ ನೀಡಿದ ಹೇಳಿಕೆ 'ಅಳಿಯ ಅಲ್ಲ, ಮಗಳ ಗಂಡ' ಅಂದಹಾಗಾಗಲಿಲ್ಲವೇ?

ಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾ ಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾ

ಪಾಕ್ ವಿಷಯದಲ್ಲಿ ತಲೆಹಾಕಬೇಡಿ!

ಪಾಕ್ ವಿಷಯದಲ್ಲಿ ತಲೆಹಾಕಬೇಡಿ!

"ನೀವ್ಯಾಕೆ ಪಾಕಿಸ್ತಾನದ ವಿಷಯದಲ್ಲಿ ತಲೆಹಾಕುತ್ತೀರಿ? ಪಾಕಿಸ್ತಾನವನ್ನು ಎರಡು ಭಾಗ(ಪಾಕಿಸ್ತಾನ-ಬಾಂಗ್ಲಾದೇಶ) ಮಾಡಲು ನೀವೇಕೆ ಸಹಾಯ ಮಾಡಿದಿರಿ? ನೀವು ಫ್ರಾನ್ಸ್ ಮತ್ತು ಅಮೆರಿಕದ ಬೆಂಬಲದಿಂದಾಗಗಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರತ್ನಿಸುತ್ತಿದ್ದೀರಿ" ಎಂದು ಮುಷ್ರಫ್ ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?

ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಸುಳ್ಳು!

ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಸುಳ್ಳು!

ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ನೀವು ಬೊಬ್ಬೆ ಹೊಡೆಯುತ್ತಲೇ ಇದ್ದೀರಿ. ಆದರೆ ನಮಗೆ ಗೊತ್ತು ಇಂಥದೊಂದು ದಾಳಿ ನಡೆದೇ ಇಲ್ಲ. ಇಮ್ರಾನ್ ಖಾನ್ ಜೈಷ್ ಉಗ್ರ ಸಂಘಟನೆಯ ಬಗ್ಗೆ ಯಾವುದೇ ಅನುಕಂಪ ಹೊಂದಿಲ್ಲ. ಪಾಕಿಸ್ತಾನ ಸರ್ಕಾರದ ಪಾತ್ರ ಈ ದಾಳಿಯಲ್ಲಿದೆ ಎಂದು ನಾವು ಒಪ್ಪುವುದಿಲ್ಲ' ಎಂದು ಮುಷ್ರಫ್ ಹೇಳಿದರು.

ಪಾಕ್ ವಿದೇಶಾಂಗ ಕಚೇರಿ ವಕ್ತಾರನ ಟ್ವಿಟ್ಟರ್ ಖಾತೆ ಅಮಾನತುಪಾಕ್ ವಿದೇಶಾಂಗ ಕಚೇರಿ ವಕ್ತಾರನ ಟ್ವಿಟ್ಟರ್ ಖಾತೆ ಅಮಾನತು

ಮುಷ್ರಫ್ ಮಾತು ಸತ್ಯವೇ ಆಗಿದ್ದರೆ....

ಮುಷ್ರಫ್ ಮಾತು ಸತ್ಯವೇ ಆಗಿದ್ದರೆ....

ಅಕಸ್ಮಾತ್ ಮುಷ್ರಫ್ ಅವರ ಈ ಎಲ್ಲಾ ಮಾತೂ ಸತ್ಯವೇ ಆಗಿದ್ದರೆ ಪಾಕಿಸ್ತಾನವೇಕೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ನಾಶ ಮಾಡಲು ಪ್ರಯತ್ನಿಸಿಲ್ಲ. ಅದರ ನಾಯಕ ಮಸೂದ್ ಅಜರ್ ನನ್ನು ಸಾಕಿಟ್ಟುಕೊಂಡಿದ್ದು ಏಕೆ? ಭಯೋತ್ಪಾದಕರ ಬಗ್ಗೆ ಅವರಲ್ಲಿ ಸಾಫ್ಟ್ ಕಾರ್ನರ್ ಇಲ್ಲವೆಂದಾದರೆ, ಭಾರತದ ಇರುದ್ಧ ಪ್ರತೀಕಾರಕ್ಕಾಗಿ ಭಯೋತ್ಪಾದಕರನ್ನೇ ಛೂಬಿಡಲು ಅದು ಮನಸ್ಸು ಮಾಡುತ್ತಿಲ್ಲವೆಂದಾಗಿದ್ದರೆ ಉಗ್ರ ಸಂಘಟನೆಯನ್ನೇ ನಾಶ ಮಾಡಲಿ! ಆ ತಾಕತ್ತು ಪಾಕಿಸ್ತಾನಕ್ಕಿದೆಯೇ ಎಂಬುದು ಭಾರತೀಯರ ಪಶ್ನೆ!

ಫೆ.14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ ಒಟ್ಟು 44 ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು

English summary
Former president of Pakistan General Pervez Musharraf in an exclusive interview with India Today TV accepts, Jaish e Mohammad(JeM) role in Pulwama attact, and he also said Pakistan has not role in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X